»   » 'ಲಕ್ಷ್ಮಣ', ಆರ್.ಚಂದ್ರು, ಮೇಘನಾ ರಾಜ್ ಸುತ್ತ ಏನಿದು ಗಾಸಿಪ್ಪು.?

'ಲಕ್ಷ್ಮಣ', ಆರ್.ಚಂದ್ರು, ಮೇಘನಾ ರಾಜ್ ಸುತ್ತ ಏನಿದು ಗಾಸಿಪ್ಪು.?

Posted by:
Subscribe to Filmibeat Kannada

''ಆರ್.ಚಂದ್ರು ನಿರ್ದೇಶಿಸುತ್ತಿರುವ 'ಲಕ್ಷ್ಮಣ' ಚಿತ್ರದ ಬಗ್ಗೆ ನಟಿ ಮೇಘನಾ ರಾಜ್ ಗಮನ ಹರಿಸುತ್ತಿಲ್ಲ. ಅದ್ಧೂರಿಯಾಗಿ ನಡೆದ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ನಾಯಕಿ ಮೇಘನಾ ರಾಜ್ ಭಾಗವಹಿಸಲಿಲ್ಲ. ಅದಕ್ಕೆ ಕಾರಣ, ಮೇಘನಾಗೆ ಸಂಭಾವನೆ ಸಂದಾಯವಾಗಿಲ್ಲ''

''ಇತ್ತ ಆರ್.ಚಂದ್ರು ಕೂಡ ಮೇಘನಾ ರಾಜ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಜೇಬು ತುಂಬಿಸಿಕೊಂಡಿರುವ ಆರ್.ಚಂದ್ರು, ನಾಯಕ ನಟಿಗೆ ಮಾತ್ರ ಸಂಭಾವನೆ ಕೊಡುವುದಕ್ಕೆ ಹಿಂದು ಮುಂದು ನೋಡ್ತಿದ್ದಾರೆ'' - ಹೀಗಂತ ಕಳೆದ ಎರಡು ದಿನಗಳಿಂದ ಗಾಂಧಿನಗರದಲ್ಲಿ ಗುಲ್ಲೋ ಗುಲ್ಲು. [ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿಯಾದ ಕನ್ನಡತಿ ಮೇಘನಾ ರಾಜ್]


ಸತ್ಯ ಯಾವುದು, ಸುಳ್ಳು ಯಾವುದು ತಿಳಿದುಕೊಳ್ಳುವ ಸಲುವಾಗಿ ನಿಮ್ಮ 'ಫಿಲ್ಮಿಬೀಟ್ ಕನ್ನಡ', ನಿರ್ದೇಶಕ ಆರ್.ಚಂದ್ರು ಹಾಗೂ ನಾಯಕ ನಟಿ ಮೇಘನಾ ರಾಜ್ ರವರನ್ನ ಸಂಪರ್ಕಿಸಿದಾಗ, ಸತ್ಯ ಬಯಲಾಯಿತು. ಮುಂದೆ ಓದಿ....


ಆರ್.ಚಂದ್ರು ನೀಡಿದ ಪ್ರತಿಕ್ರಿಯೆ

''ಇದು ಅಪ್ಪಟ ಸುಳ್ಳು ಸುದ್ದಿ. ಯಾರು ಹೀಗೆಲ್ಲಾ ಹಬ್ಬಿಸುತ್ತಿದ್ದಾರೋ, ಗೊತ್ತಿಲ್ಲ. 'ಲಕ್ಷ್ಮಣ' ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಬರ್ಲಿಲ್ಲ ನಿಜ. ಆದರೆ ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಆರ್.ಚಂದ್ರು ಸ್ಪಷ್ಟಪಡಿಸಿದರು. [ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್]


ಸಂಭಾವನೆ ತಕರಾರು ಇಲ್ಲ.!

''ಸಂಭಾವನೆ ವಿಚಾರದಲ್ಲಿ ಯಾವುದೇ ಪ್ರಾಬ್ಲಂ ಆಗಿಲ್ಲ. ನಾವಿನ್ನೂ ಪ್ರಮೋಷನ್ ಶುರು ಮಾಡಿಲ್ಲ. ಅಷ್ಟು ಬೇಗ ಮೇಘನಾ ಪ್ರಚಾರಕ್ಕೆ ಬರ್ತಿಲ್ಲ ಅಂತ ಸುದ್ದಿ ಹಬ್ಬಿಸಿದ್ರೆ, ಅರ್ಥವೇ ಇಲ್ಲ. ಮೇಘನಾ ಉತ್ತಮ ನಟಿ. ತಮ್ಮ ಕೆಲಸದ ಬಗ್ಗೆ ಆಕೆಗೆ ಗೌರವ ಇದೆ'' ಅಂತ ಆರ್.ಚಂದ್ರು ಹೇಳಿದರು. [ಎಚ್.ಎಂ.ರೇವಣ್ಣ ಪುತ್ರನ ಜೊತೆ ಮೇಘನಾ ರೋಮ್ಯಾನ್ಸ್]


ಕನ್ನಡ ನಟಿಯೇ ಬೇಕು.!

''ಕನ್ನಡ ನಾಯಕಿಯರಿಗೆ ಅವಕಾಶ ನೀಡ್ಬೇಕು ಅಂತ ಮೇಘನಾ ರಾಜ್ ರವರನ್ನು ಆಯ್ಕೆ ಮಾಡಿದೆ. ಮೇಘನಾ ಒಳ್ಳೆಯ ನಟಿ. 'ಲಕ್ಷ್ಮಣ' ಚಿತ್ರದಿಂದ ಆಕೆಗೆ ಒಳ್ಳೆ ಹೆಸರು ಬರುವುದು ಖಂಡಿತ. ಹೀಗಿರುವಾಗ, ಮನಸ್ತಾಪ ಬರಲು ಹೇಗೆ ಸಾಧ್ಯ'' ಎನ್ನುತ್ತಾರೆ ಆರ್.ಚಂದ್ರು.


ನಟಿ ಮೇಘನಾ ರಾಜ್ ಏನಂದ್ರು ಗೊತ್ತಾ?

''ಈ ಸುದ್ದಿ ಶುದ್ಧ ಸುಳ್ಳು. ಸಂಭಾವನೆ ವಿಚಾರದಲ್ಲಿ ಯಾವ ಸಮಸ್ಯೆ ಕೂಡ ಆಗಿಲ್ಲ. ಶೂಟಿಂಗ್ ಕಂಪ್ಲೀಟ್ ಆಗಿದೆ. ಬೇರೆ ಕಮಿಟ್ಮೆಂಟ್ ಇದ್ದ ಕಾರಣ ಆಡಿಯೋ ರಿಲೀಸ್ ಗೆ ಹೋಗಿಲ್ಲ ಅಷ್ಟೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಮೇಘನಾ ರಾಜ್ ತಿಳಿಸಿದರು.


ಸುಳ್ಳು ಸುದ್ದಿ ಹಬ್ಬಿಸಿದವರು ಯಾರು?

ಗಾಂಧಿನಗರದಲ್ಲಿ ಅಂತೆ-ಕಂತೆ ಸುದ್ದಿಗಳಿಗೆ ಬರವೇ ಇಲ್ಲ. ಗೆಲ್ಲುವ ಕುದುರೆಗಳ ಬಗ್ಗೆ ನಾಲ್ಕು ಜನ ನಾಲ್ಕು ತರಹ ಮಾತಾಡ್ತಾರೆ. ಮೇಘನಾ ರಾಜ್ ಕೂಡ ಜನಪ್ರಿಯ ನಾಯಕಿ, ಆರ್.ಚಂದ್ರು ಕೂಡ ತಮ್ಮ ಸದಭಿರುಚಿಯ ಚಿತ್ರಗಳಿಂದ ಖ್ಯಾತಿ ಗಳಿಸಿರುವ ನಿರ್ದೇಶಕ. ಇಬ್ಬರ ಬಗ್ಗೆ ಹೀಗೆ ಸುಖಾಸುಮ್ಮನೆ ಗಾಸಿಪ್ ಹಬ್ಬಿಸಿದವರು ಯಾರೋ ಗೊತ್ತಿಲ್ಲ. ಸ್ಪಷ್ಟಣೆ ಮಾತ್ರ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಸಿಕ್ಕಿದೆ.


English summary
Kannada Director R.Chandru and Kannada Actress Meghana Raj has cleared all the air surrounding Remuneration gossip related to Kannada Movie 'Lakshmana'.
Please Wait while comments are loading...

Kannada Photos

Go to : More Photos