»   » ಗಾಸಿಪ್ ನಿಜ ಆಯ್ತಲ್ಲ: ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡಕ್ಕೆ ಬಂದ್ರಲ್ಲ.!

ಗಾಸಿಪ್ ನಿಜ ಆಯ್ತಲ್ಲ: ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡಕ್ಕೆ ಬಂದ್ರಲ್ಲ.!

Posted by:
Subscribe to Filmibeat Kannada

ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಅಂಗಳವನ್ನೆಲ್ಲಾ ಒಂದ್ ರೌಂಡ್ ಹಾಕಿ ಎಲ್ಲೆಡೆ ಯಶಸ್ಸು ಗಳಿಸಿರುವ 'ಮಿಲ್ಕಿ ಬ್ಯೂಟಿ' ತಮನ್ನಾ ಭಾಟಿಯಾ ರವರನ್ನ ಕನ್ನಡಕ್ಕೂ ಕರೆತರಬೇಕು ಅಂತ ಎಷ್ಟೋ ನಿರ್ಮಾಪಕರು ಪ್ರಯತ್ನ ಪಟ್ಟಿದ್ದರು.

ಯಾರೋ ಯಾಕೆ....'ಜೋಗಿ' ಪ್ರೇಮ್ ಮತ್ತು ನಿರ್ಮಾಪಕ ಸಿ.ಆರ್.ಮನೋಹರ್ ಕೂಡ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವ 'ದಿ ವಿಲನ್' ಚಿತ್ರಕ್ಕಾಗಿ ತಮನ್ನಾ ರವರಿಗೆ ಬುಲಾವ್ ನೀಡಿದ್ದರು. ['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]


ಆದ್ರೆ, ಇದುವರೆಗೂ ಯಾರಿಗೂ 'ಹ್ಹೂಂ' ಎನ್ನದ ತಮನ್ನಾ ಈಗ ಏಕಾಏಕಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಮುಂದೆ ಓದಿ.....


ಯಾವ ಚಿತ್ರದ ಮೂಲಕ?

ಯಾವ ಚಿತ್ರದ ಮೂಲಕ?

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಜಾಗ್ವಾರ್' ಮೂಲಕ ನಟಿ ತಮನ್ನಾ ಭಾಟಿಯಾ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. [ಓಹೋ.! 'ಜಾಗ್ವಾರ್' ನಿರ್ಮಾಪಕರ ತಲೆಯಲ್ಲಿ ಇವ್ರೂ ಇದ್ದಾರೆ.!]


'ಜಾಗ್ವಾರ್' ನಲ್ಲಿ ತಮನ್ನಾ ಪಾತ್ರವೇನು?

'ಜಾಗ್ವಾರ್' ನಲ್ಲಿ ತಮನ್ನಾ ಪಾತ್ರವೇನು?

'ಜಾಗ್ವಾರ್' ಚಿತ್ರದ ಗರಮಾಗರಂ ಐಟಂ ಸಾಂಗ್ ನಲ್ಲಿ ನಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದಾರೆ. [ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]


ಇದು ಗಾಸಿಪ್ ಅಲ್ಲ, ಶೂಟಿಂಗ್ ಮುಗಿದಿದೆ.!

ಇದು ಗಾಸಿಪ್ ಅಲ್ಲ, ಶೂಟಿಂಗ್ ಮುಗಿದಿದೆ.!

'ಜಾಗ್ವಾರ್' ಚಿತ್ರ ಐಟಂ ಸಾಂಗ್ ನಲ್ಲಿ ತಮನ್ನಾ ಸ್ಟೆಪ್ ಹಾಕಲಿದ್ದಾರೆ ಎಂಬ ಗಾಸಿಪ್ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಈ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ವರದಿ ಮಾಡಿತ್ತು. ಈಗ ಇದೇ ಗಾಸಿಪ್ ನಿಜವಾಗಿದೆ. 'ಜಾಗ್ವಾರ್' ಮೂಲಕ ತಮನ್ನಾ ಕನ್ನಡಕ್ಕೆ ಬಂದಿದ್ದಾರೆ.


ಹೈದರಾಬಾದ್ ನಲ್ಲಿ ಸಾಂಗ್ ಶೂಟಿಂಗ್ ಆಗಿದೆ

ಹೈದರಾಬಾದ್ ನಲ್ಲಿ ಸಾಂಗ್ ಶೂಟಿಂಗ್ ಆಗಿದೆ

ಹೈದರಾಬಾದ್ ನಲ್ಲಿ ಇರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ಪೆಷಲ್ ಸೆಟ್ ಹಾಕಿ 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಚಿತ್ರೀಕರಣ ಮಾಡಲಾಗಿದೆ.


ನೃತ್ಯ ಸಂಯೋಜಕ ಯಾರು?

ನೃತ್ಯ ಸಂಯೋಜಕ ಯಾರು?

ಖ್ಯಾತ ಕೊರಿಯೋಗ್ರಾಫರ್ ಶೋಬಿ ಪೌಲ್ ರಾಜ್ ನೃತ್ಯ ಸಂಯೋಜನೆಯಲ್ಲಿ ಅನೇಕ ನೃತ್ಯ ಕಲಾವಿದರ ಜೊತೆ ನಟಿ ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿದ್ದಾರೆ.


ಥಮನ್ ಸಂಗೀತ

ಥಮನ್ ಸಂಗೀತ

ಎಸ್.ಎಸ್.ಥಮನ್ ಸಂಗೀತ ಸಂಯೋಜಿಸಿರುವ 'ಸಂಪಿಗೆ...' ಹಾಡಿಗೆ ತಮನ್ನಾ ಸ್ಟೆಪ್ ಹಾಕಿದ್ದಾರೆ.


ತಮನ್ನಾಗೆ ಇದು ಹೊಸದೇನಲ್ಲ.!

ತಮನ್ನಾಗೆ ಇದು ಹೊಸದೇನಲ್ಲ.!

ಈಗಾಗಲೇ ಕೆಲ ತೆಲುಗು ಚಿತ್ರಗಳಲ್ಲಿ 'ಐಟಂ ಗರ್ಲ್' ಆಗಿ ಕಾಣಿಸಿಕೊಂಡಿರುವ ತಮನ್ನಾ, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 'ಜಾಗ್ವಾರ್' ಸಿನಿಮಾದಲ್ಲೂ ಐಟಂ ಡ್ಯಾನ್ಸ್ ಮಾಡಿದ್ದಾರೆ.


ರಾಜಮೌಳಿ ಕಾರಣ?

ರಾಜಮೌಳಿ ಕಾರಣ?

ಹೇಳಿ ಕೇಳಿ, ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ತಮನ್ನಾ ನಾಯಕಿ. ಇನ್ನೂ 'ಜಾಗ್ವಾರ್' ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದರೆ, ಅದೇ ರಾಜಮೌಳಿ ಶಿಷ್ಯ ಮಹದೇವ್ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ, 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗೆ ತಮನ್ನಾ ರವರನ್ನ ಒಪ್ಪಿಸುವುದು ಕಷ್ಟದ ಕೆಲಸ ಆಗ್ಲಿಲ್ಲವಂತೆ.


ಅವ್ರ್ ಬಿಟ್, ಇವ್ರ್ ಬಿಟ್, ಇವ್ರ್ ಬಂದ್ರು.!

ಅವ್ರ್ ಬಿಟ್, ಇವ್ರ್ ಬಿಟ್, ಇವ್ರ್ ಬಂದ್ರು.!

'ಜಾಗ್ವಾರ್' ಚಿತ್ರದ ಐಟಂ ಸಾಂಗ್ ನಲ್ಲಿ ಕುಣಿಯಲು ಕತ್ರಿನಾ ಕೈಫ್, ಶ್ರುತಿ ಹಾಸನ್ ಬರಲಿದ್ದಾರೆ ಅಂತ ಮೊದಲು ಸುದ್ದಿ ಆಗಿತ್ತು. ಈಗ ಅವರನ್ನೆಲ್ಲಾ ಸೈಡ್ ಗೆ ತಳ್ಳಿ ತಮನ್ನಾ ಭಾಟಿಯಾ ಬಂದಿದ್ದಾರೆ.


'ಜಾಗ್ವಾರ್' ತಾರಾಗಣ

'ಜಾಗ್ವಾರ್' ತಾರಾಗಣ

'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ ಗೆ ದೀಪ್ತಿ ಸತಿ ನಾಯಕಿ. ನಟ ಜಗಪತಿ ಬಾಬು, ರಮ್ಯಾಕೃಷ್ಣ, ಸೌರವ್ ಲೋಕೇಶ್, ಸಂಪತ್ ರಾಜ್, ಸಾಧು ಕೋಕಿಲ ಸೇರಿದಂತೆ ಹಲವರು ತಾರಾಬಳಗದಲ್ಲಿ ಇದ್ದಾರೆ.


English summary
Popular Actress Tamannaah Bhatia has shaken her legs in an item song for Nikhil Kumar, son of EX CM H.D.Kumaraswamy starrer 'Jaguar'.
Please Wait while comments are loading...

Kannada Photos

Go to : More Photos