»   » ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!

ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!

Posted by:
Subscribe to Filmibeat Kannada

ಸರಿ ಸುಮಾರು ಹದಿನೈದು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ 'ದರ್ಶನ್' ಎಂಬ 'ಚಾಲೆಂಜಿಂಗ್ ಸ್ಟಾರ್' ಉದಯವಾಗಿತ್ತು. ಹಾಗೆ 'ಚಾಲೆಂಜಿಂಗ್ ಸ್ಟಾರ್' ಉದಯವಾಗಲು ಕಾರಣವಾಗಿದ್ದು 'ಮೆಜೆಸ್ಟಿಕ್' ಎಂಬ ಪಕ್ಕಾ ಮಾಸ್ ಸಿನಿಮಾ.

ಫೆಬ್ರವರಿ 18, 2017... 'ಮೆಜೆಸ್ಟಿಕ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಹದಿನೈದು ವರ್ಷಗಳು ಉರುಳಿವೆ. ಈ ಸಂದರ್ಭದಲ್ಲಿ ಸವಿ ನೆನಪುಗಳನ್ನು ಮೆಲುಕು ಹಾಕುವ ಬದಲು 'ಮೆಜೆಸ್ಟಿಕ್' ಸಿನಿಮಾ ಬೇಡದ ವಿಷಯಕ್ಕೆ ಚರ್ಚೆಗೆ ಗ್ರಾಸವಾಗಿದೆ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

'ಮೆಜೆಸ್ಟಿಕ್' ಚಿತ್ರದ 'ಚಾನ್ಸ್' ಕುರಿತು ಕಿಚ್ಚ ಸುದೀಪ್ ಆಡಿರುವ ಮಾತಿನ ವಿರುದ್ಧ 'ದಾಸ' ದರ್ಶನ್ ಬಹಿರಂಗವಾಗಿ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ, 'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರೂ ಕಿತ್ತಾಡುವ ಪರಿಸ್ಥಿತಿ ಎದುರಾಗಿದೆ.

'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರು ಯಾರು.?

'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರು ಯಾರು.?

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ನಾಯಕ'ನಾಗಿ ಅಭಿನಯದ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್'ಗೆ ಇಬ್ಬರು ನಿರ್ಮಾಪಕರು. ಒಬ್ಬರು ಬಾ.ಮಾ.ಹರೀಶ್ ಮತ್ತೊಬ್ಬರು ಎಂ.ಜಿ.ರಾಮಮೂರ್ತಿ.[ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ನಾನೊಬ್ಬನೇ ಪ್ರೊಡ್ಯೂಸರ್ ಆಂತಾರೆ ಬಾ.ಮಾ.ಹರೀಶ್.!

ನಾನೊಬ್ಬನೇ ಪ್ರೊಡ್ಯೂಸರ್ ಆಂತಾರೆ ಬಾ.ಮಾ.ಹರೀಶ್.!

''ಉಲ್ಲಾಸ್ ಎಂಟರ್ ಪ್ರೈಸಸ್'- 'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕ ನಾನು ಅಂತ ಹೇಳಿಕೊಳ್ಳೋಕೆ ದಾಖಲೆ ಇದೆ. ಯಾಕಂದ್ರೆ, ಜನರಿಗೆ ಸತ್ಯ ಗೊತ್ತಾಗಬೇಕು. ನಮ್ಮ ಸ್ನೇಹ ಕಳೆದುಕೊಳ್ಳಲು ನಾನು ಇಷ್ಟ ಪಡುವುದಿಲ್ಲ. ಯಾರದ್ದೋ ಮಕ್ಕಳಿಗೆ ನಾವು ಅಪ್ಪ ಆಗಲು ಹೋಗಬಾರದು. ನಮ್ಮ ಮಕ್ಕಳಿಗೆ ನಾವು ಅಪ್ಪ ಆಗಿರಬೇಕು. 'ಮೆಜೆಸ್ಟಿಕ್' ಚಿತ್ರಕ್ಕೆ ನಾನೊಬ್ಬನೇ ನಿರ್ಮಾಪಕ. ಚಿತ್ರದ ಸ್ಯಾಟೆಲೈಟ್ ರೈಟ್ಸ್ ಕೂಡ ನನ್ನ ಬಳಿಯೇ ಇದೆ'' ಎನ್ನುತ್ತಾರೆ ನಿರ್ಮಾಪಕ ಬಾ.ಮಾ.ಹರೀಶ್ [ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಹಾಗಾದ್ರೆ, ರಾಮಮೂರ್ತಿ ಯಾರು.?

ಹಾಗಾದ್ರೆ, ರಾಮಮೂರ್ತಿ ಯಾರು.?

'ಮೆಜೆಸ್ಟಿಕ್' ಚಿತ್ರ ರೆಡಿ ಮಾಡುವ ಹೊತ್ತಲ್ಲಿ ಸ್ಯಾಂಡಲ್ ವುಡ್ ಗೆ ರಾಮಮೂರ್ತಿ ಹೊಸಬರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿದ್ದ ರಾಮಮೂರ್ತಿ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ ಹೊಂದಿದ್ದರು. 'ಮೆಜೆಸ್ಟಿಕ್' ಚಿತ್ರಕ್ಕೆ ಬಂಡವಾಳ ಕೂಡ ಹೂಡಿದರು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಬಾ.ಮಾ.ಹರೀಶ್ ಹೇಳುವುದೇ ಬೇರೆ.!

ಬಾ.ಮಾ.ಹರೀಶ್ ಹೇಳುವುದೇ ಬೇರೆ.!

''ಮೆಜೆಸ್ಟಿಕ್' ಚಿತ್ರಕ್ಕೆ ರಾಮಮೂರ್ತಿ ಫೈನಾನ್ಸ್ ಮಾಡಿದ್ರು ಅಷ್ಟೇ. ಕೊಟ್ಟ ದುಡ್ಡಿಗಿಂತ ಹೆಚ್ಚು ವಾಪಸ್ ಕೊಟ್ಟಿದ್ದೇನೆ. ಹೀಗಾಗಿ ನಾನೊಬ್ಬನೇ ಪ್ರೊಡ್ಯೂಸರ್'' ಅಂತಾರೆ ಬಾ.ಮಾ.ಹರೀಶ್.

ಅಣಜಿ ನಾಗರಾಜ್ ಬಾಯಿಂದ ಬಂದ ಮಾತು

ಅಣಜಿ ನಾಗರಾಜ್ ಬಾಯಿಂದ ಬಂದ ಮಾತು

''ಮೆಜೆಸ್ಟಿಕ್' ಚಿತ್ರಕ್ಕೆ ಪಿ.ಎನ್.ಸತ್ಯ ಡೈರೆಕ್ಟರ್, ರಾಮಮೂರ್ತಿ ಪ್ರೊಡ್ಯೂಸರ್, ಬಾ.ಮಾ.ಹರೀಶ್ ಪ್ರೊಡಕ್ಷನ್ ನೋಡಿಕೊಳ್ತಿದ್ರು ಅವಾಗ'' ಅಂತ ಅಣಜಿ ನಾಗರಾಜ್ ಹೇಳುತ್ತಾರೆ.

ಹಳೇ ಕಥೆಗೆ ಈಗ ಕಿತ್ತಾಟ

ಹಳೇ ಕಥೆಗೆ ಈಗ ಕಿತ್ತಾಟ

ದುಡ್ಡಿನ ವಿಚಾರಕ್ಕೆ ರಾಮಮೂರ್ತಿ ಹಾಗೂ ಬಾ.ಮಾ.ಹರೀಶ್ ನಡುವೆ ಅಂದು ಆಗಿದ್ದ ಕಿರಿಕ್ ಈಗ ಭುಗಿಲೆದ್ದಿದೆ. ಇಬ್ಬರ ನಡುವೆ ಮಾಧ್ಯಮಗಳಲ್ಲಿ ವಾಕ್ಸಮರ ನಡೆಯುತ್ತಿದೆ.

English summary
Rift between Darshan and Sudeep has also led to the rift between 'Majestic' Producers Bha.Ma.Harish and Ramamurthy
Please Wait while comments are loading...

Kannada Photos

Go to : More Photos