»   » ರಿಷಬ್ ನಿರ್ದೇಶನದಲ್ಲಿ ಬರಲಿದೆ 7 ಕಥೆ ಇರುವ ಒಂದೇ ಸಿನಿಮಾ!

ರಿಷಬ್ ನಿರ್ದೇಶನದಲ್ಲಿ ಬರಲಿದೆ 7 ಕಥೆ ಇರುವ ಒಂದೇ ಸಿನಿಮಾ!

Posted by:
Subscribe to Filmibeat Kannada

ನಿರ್ದೇಶಕ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದ 'ಕಿರಿಕ್ ಪಾರ್ಟಿ' ಸಿನಿಮಾ ನೂರು ದಿನಗಳನ್ನು ಪೂರೈಸಿದ್ದು ಒಂದು ಖುಷಿಯಾದರೆ, ಡೈರೆಕ್ಟರ್ ಗೆ ಇನ್ನೊಂದು ಕಡೆ 2016 ರ ಅತ್ಯುತ್ತಮ ಮನರಂಜನಾ ಸಿನಿಮಾ ಆಗಿ ರಾಜ್ಯ ಪ್ರಶಸ್ತಿ ಲಭಿಸಿದ್ದು ಇನ್ನಷ್ಟು ಯಶಸ್ಸು ನೀಡಿದೆ.[ಐಐಎಫ್ ಎ ಉತ್ಸವ್: 'ಕಿರಿಕ್ ಪಾರ್ಟಿ' ತಂಡದ ಪ್ರಶಸ್ತಿಗಳ ಮೊತ್ತ 6]

ಸಿನಿಮಾ ನೋಡಿದ ಎಲ್ಲರಿಗೂ ಕಾಲೇಜು ದಿನಗಳನ್ನು ನೆನಪಿಸುವ 'ಕಿರಿಕ್ ಪಾರ್ಟಿ' ಚಿತ್ರ ನೀಡಿದ್ದಕ್ಕಾಗಿ, ನಿರ್ದೆಶಕ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ಸ್ಯಾಂಡಲ್ ವುಡ್ ಮಂದಿಯಲ್ಲಿ ಸಹಜವಾಗೇ ಕಾಡುತ್ತಿತ್ತು. ಈ ಕ್ಯೂರಿಯಾಸಿಟಿಗೆ ಈಗ ಬ್ರೇಕ್ ಬಿದ್ದಿದೆ.

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾವನ್ನು ಕನ್ನಡ ಚಿತ್ರರಂಗ ಕಂಡ ಮಹಾನ್ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ ಸ್ಫೂರ್ತಿ ಪಡೆದು ನಿರ್ಮಿಸುತ್ತಿದ್ದಾರೆ. ಹಾಗಿದ್ರೆ ಆ ಸಿನಿಮಾ ಯಾವುದು? ಮತ್ತು ವಿಶೇಷತೆಗಳು ಏನು? ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ...

ಪುಟ್ಟಣ್ಣ ಕಣಗಲ್ ಆದರ್ಶದಲ್ಲಿ ರಿಷಬ್ ಶೆಟ್ಟಿ ಸಿನಿಮಾ

ಪುಟ್ಟಣ್ಣ ಕಣಗಲ್ ಅವರಿಂದ ಸ್ಫೂರ್ತಿ ಪಡೆದಿರುವ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರಕ್ಕೆ, ಪುಟ್ಟಣ್ಣ ಕಣಗಲ್ ಅವರೇ ನಿರ್ದೇಶನ ಮಾಡಿದ್ದ 1975 ರಲ್ಲಿ ಬಿಡುಗಡೆ ಆದ ಜನಪ್ರಿಯ ಚಿತ್ರವೊಂದರ ಟೈಟಲ್ ಆಯ್ಕೆ ಮಾಡಿಕೊಂಡಿದ್ದಾರೆ.[ಕಿಚ್ಚ ಸುದೀಪ್‌ ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್]

ಯಾವುದು ಆ ಸಿನಿಮಾ?

ಚಿತ್ರದ ಹೆಸರು 'ಕಥಾ ಸಂಗಮ'. 1975 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಲ್ಯಾಣ್ ಕುಮಾರ್, ರಜನಿಕಾಂತ್, ಗಂಗಾಧರ್ ಮತ್ತು ನಟಿಯರಾದ ಆರತಿ, ಸರೋಜಾದೇವಿ ಅವರು ಅಭಿನಯಿಸಿದ್ದರು.

ರಿಷಬ್ 'ಕಥಾ ಸಂಗಮ'ಕ್ಕೆ ಪುಟ್ಟಣ್ಣ ಕಣಗಲ್ ಪ್ರಯೋಗ

ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ ಅಂದು 'ಕಥಾ ಸಂಗಮ' ಚಿತ್ರವನ್ನು ಪುಟ್ಟಣ್ಣ ಕಣಗಲ್ 3 ಕಥೆಗಳನ್ನು ಒಂದೇ ಸಿನಿಮಾದಲ್ಲಿ ಸೇರಿಸಿ ನಿರ್ದೇಶನ ಮಾಡಿದ್ದರು. ಆದರೆ ಇಂದು ರಿಷಬ್ ಶೆಟ್ಟಿ ನಿರ್ಮಿಸಬೇಕೆಂದಿರುವ 'ಕಥಾ ಸಂಗಮ'ವು 7 ಕಥೆಗಳನ್ನು ಹೊಂದಿರಲಿದೆ.

7 ಹೊಸ ನಿರ್ದೇಶಕರಿಂದ ಒಂದು 'ಕಥಾ ಸಂಗಮ'

ರಿಷಬ್ ಶೆಟ್ಟಿ 'ಕಥಾ ಸಂಗಮ'ದಲ್ಲಿ 7 ಕಥೆಗಳ ಜೊತೆಗೆ ಚಿತ್ರಕ್ಕೆ 7 ಹೊಸ ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದಾರೆ. ಆದರೆ ಈ ಏಳು ನಿರ್ದೇಶಕರು ರಿಷಬ್ ಶೆಟ್ಟಿ ನಿರ್ದೇಶನದಲ್ಲೇ ಆಕ್ಷನ್ ಕಟ್ ಹೇಳಲಿದ್ದಾರೆ. ಅಲ್ಲದೇ ರಿಷಬ್ ಚಿತ್ರಕ್ಕೆ ಕಥೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಆಹ್ವಾನಿಸಿ, ಬಂದ ಕಥೆಗಳಲ್ಲಿ ಏಳು ಉತ್ತಮ ಕಥೆಗಳನ್ನು ಆರಿಸಿ ನಿರ್ಮಾಣ ಮಾಡುತ್ತಾರಂತೆ.

ರಿಷಬ್ ಶೆಟ್ಟಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ 'ಕಥಾ ಸಂಗಮ'

ಅಂದಹಾಗೆ 'ಕಥಾ ಸಂಗಮ' ಚಿತ್ರವನ್ನು ರಿಷಬ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ 'ರಿಷಬ್ ಶೆಟ್ಟಿ ಫಿಲ್ಮ್ಸ್' ಅಡಿಯಲ್ಲೇ ನಿರ್ಮಾಣ ಮಾಡಲಿದ್ದು, ಇನ್ನೊಬ್ಬ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

'ಕಥಾ ಸಂಗಮ'ದಲ್ಲಿ ಯಾರೆಲ್ಲಾ ಇರಲಿದ್ದಾರೆ?

ಈ ಬಗ್ಗೆ ಇನ್ನೂ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಕಾರಣ ಚಿತ್ರ ಏಳು ವಿಭಿನ್ನ ಕಥೆಗಳನ್ನು ಹೊಂದಲಿರುವ ಕಾರಣ ಇನ್ನೂ ತಾರಾಬಳಗದ ಬಗ್ಗೆ ಡಿಸೈಡ್ ಮಾಡಿಲ್ಲ.

English summary
'Kirik Party' Director Rishab Shetty's next is 'Katha Sangama'. This title is Puttanna Kanagal's 1975 'Katha Sangama' Movie.
Please Wait while comments are loading...

Kannada Photos

Go to : More Photos