twitter
    For Quick Alerts
    ALLOW NOTIFICATIONS  
    For Daily Alerts

    ಬನಶಂಕರಿಯಿಂದ ಕೆಂಗೇರಿವರೆಗಿನ ರಸ್ತೆಗೆ ವಿಷ್ಣು ಹೆಸರು

    By Prasad
    |

    ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರ, ಜೈಜೈಕಾರಗಳ ನಡುವೆ 'ಅಭಿನವ ಭಾರ್ಗವ', 'ಸಾಹಸಸಿಂಹ' ದಿ. ವಿಷ್ಣುವರ್ಧನ್ ಅವರ ಹೆಸರನ್ನು 14.3 ಕಿ.ಮೀ. ಉದ್ದದ ರಸ್ತೆಗೆ ಭಾನುವಾರ ಫೆ.2ರಂದು ಇಡಲಾಯಿತು. ಕಲಾವಿದನ ಹೆಸರಿರುವ ದೇಶದ ಏಕೈಕ ಅತಿಉದ್ದದ ರಸ್ತೆ ಎಂಬ ಹೆಗ್ಗಳಿಕೆಗೆ ಈ ರಸ್ತೆ ಪಾತ್ರವಾಗಿದೆ.

    ಬನಶಂಕರಿಯಿಂದ ಮೈಸೂರು ರಸ್ತೆಯಲ್ಲಿರುವ ಕೆಂಗೇರಿಯವರೆಗೆ ಇರುವ ರಸ್ತೆಗೆ ಡಾ. ವಿಷ್ಣುವರ್ಧನ ರಸ್ತೆ ಎಂದು ನಾಮಕರಣ ಮಾಡಲಾಯಿತು. ನಂತರ ಏಳು ಕುದುರೆಗಳಿರುವ ಸರ್ವಾಲಂಕೃತ ರಥದಲ್ಲಿ ವಿಷ್ಣು ಅವರ ಭಾವಚಿತ್ರವನ್ನಿಟ್ಟು ಬನಶಂಕರಿಯಿಂದ ಉತ್ತರಹಳ್ಳಿ ರಸ್ತೆಯಲ್ಲಿರುವ ವಿಷ್ಣುವರ್ಧನ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು.

    ಬನಶಂಕರಿಯಿಂದ ವಿಷ್ಣು ಸಮಾಧಿವರೆಗೆ ಹಬ್ಬದ ವಾತಾವರಣ ಮನೆಮಾಡಿತ್ತು. ವಿಷ್ಣು ಅವರ ಪತ್ನಿ ಭಾರತಿ, ಅವರ ಅಳಿಯ ಅನಿರುದ್ಧ, ಬೆಂಗಳೂರು ದಕ್ಷಿಣ ಸಂಸದ ಅನಂತ್ ಕುಮಾರ್, ಪದ್ಮನಾಭನಗರ ಎಂಎಲ್ಎ ಆರ್ ಅಶೋಕ್, ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ, ಬೆಂಗಳೂರು ಮಹಾಪೌರ ಕಟ್ಟೆ ಸತ್ಯನಾರಾಯಣ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. [ಕಾಮಿಕ್ ಸ್ಟ್ರಿಪ್ ನಲ್ಲಿ ವಿಷ್ಣು]

    ಈ ಸಮಾರಂಭ ಹೇಗಿತ್ತು, ಯಾವ್ಯಾವ ಸಂಘಟನೆಗಳು ಭಾಗಿಯಾಗಿದ್ದವು, ಯಾವ ರೀತಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು ಎಂಬುದನ್ನು ಚಿತ್ರಗಳಲ್ಲಿ ನೋಡಿರಿ.

    ರಥದಲ್ಲಿ ಕನ್ನಡಿಗರ ಕಣ್ಮಣಿ ವಿರಾಜಮಾನ

    ರಥದಲ್ಲಿ ಕನ್ನಡಿಗರ ಕಣ್ಮಣಿ ವಿರಾಜಮಾನ

    ಏಳು ಕುದುರೆಗಳಿದ್ದ ರಥದ ರೂಪದಲ್ಲಿ ಅಲಂಕರಿಸಲಾಗಿದ್ದ ವಾಹನದಲ್ಲಿ ವಿಷ್ಣುವಿನ ಭಾವಚಿತ್ರವನ್ನಿಟ್ಟು ಬನಶಂಕರಿಯಿಂದ ಉತ್ತರಹಳ್ಳಿ ರಸ್ತೆಯಲ್ಲಿರುವ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು.

    ಎಲ್ಲಿಂದ ಎಲ್ಲಿಯವರೆಗೆ ಈ ರಸ್ತೆ?

    ಎಲ್ಲಿಂದ ಎಲ್ಲಿಯವರೆಗೆ ಈ ರಸ್ತೆ?

    ಬನಶಂಕರಿ ದೇವಸ್ಥಾನದಿಂದ ಆರಂಭವಾಗಿ ದೇವೇಗೌಡ ಪೆಟ್ರೋಲ್ ಬಂಕಿ ಮಖಾಂತರ ನಾಯಂಡಹಳ್ಳಿ ಜಂಕ್ಷನ್ ವರೆಗೆ ಸಾಗಿ, ಮೈಸೂರು ರಸ್ತೆಯಲ್ಲಿ ಕೆಂಗೇರಿ ಬಸ್ ನಿಲ್ದಾಣದ ನಂತರ ಇರುವ ಎಡ ತಿರುವಿನವರೆಗೆ ಇರುವ ರಸ್ತೆ ಡಾ. ವಿಷ್ಣುವರ್ಧನ ರಸ್ತೆ ಆಗಲಿದೆ.

    ಕನ್ನಡವೇ ನಮ್ಮಮ್ಮ,ಅವಳಿಗೆ ಕೈ ಮುಗಿಯಮ್ಮ

    ಕನ್ನಡವೇ ನಮ್ಮಮ್ಮ,ಅವಳಿಗೆ ಕೈ ಮುಗಿಯಮ್ಮ

    ಕನ್ನಡಕ್ಕಾಗಿ ಎಂದೆಂದೂ ಕೈಎತ್ತುತ್ತಿದ್ದ ಡಾ. ವಿಷ್ಣುವರ್ಧನ ಅವರ ಆಳೆತ್ತರದ ಭಾವಚಿತ್ರ ಬನಶಂಕರಿ ವೃತ್ತದಲ್ಲಿ ರಾರಾಜಿಸುತ್ತಿತ್ತು. ಅಭಿಮಾನಿಗಳೇ ಈ ರಸ್ತೆಯನ್ನು ಸ್ವಚ್ಛವಾಗಿಡಿ ಎಂದು ಕೈಮುಗಿಯುತ್ತ ಅವರು ಹೇಳುತ್ತಿರುವಂತಿದೆ.

    ಅಭಿಮಾನಿಗಳ ಅಭಿಮಾನದ ಮಹಾಪೂರ

    ಅಭಿಮಾನಿಗಳ ಅಭಿಮಾನದ ಮಹಾಪೂರ

    ವಿಷ್ಣು ಅವರ ಹುಟ್ಟುಹಬ್ಬದಂದು ನೆರೆದಂತೆಯೇ ಬನಶಂಕರಿಯಲ್ಲಿ ಕೂಡ ಭಾರಿ ಜನಸ್ತೋಮ ಜಮಾಯಿಸಿತ್ತು. ಅಭಿಮಾನಿಯೊಬ್ಬನ ಅಭಿಮಾನದ ಪರಿ ಹೀಗಿದೆ ನೋಡಿ.

    ವಿಷ್ಣು ಅಭಿಮಾನಿಗಳ ಪ್ರೀತಿಗೆ ನಾನೆಂದೂ ಋಣಿ

    ವಿಷ್ಣು ಅಭಿಮಾನಿಗಳ ಪ್ರೀತಿಗೆ ನಾನೆಂದೂ ಋಣಿ

    ವಿಷ್ಣು ಅಭಿಮಾನಿಗಳ ಪ್ರೀತಿಗೆ ನಾನೆಂದೂ ಋಣಿ ಎಂದು ಭಾರತಿ ವಿಷ್ಣುವರ್ಧನ್ ಅವರು ಭಾವಪರವಶರಾದರು. ಕನ್ನಡಿಗರಿಗೆ ಇಂದಿಗೂ ಕೂಡ ವಿಷ್ಣು ಆಪ್ತರಾಗಿದ್ದಾರೆ ಎಂದು ನುಡಿದರು.

    ವಿಷ್ಣುವರ್ಧನ್ ಕಟ್ಟಾ ಅಭಿಮಾನಿ ಅನಂತ್ ಕುಮಾರ್

    ವಿಷ್ಣುವರ್ಧನ್ ಕಟ್ಟಾ ಅಭಿಮಾನಿ ಅನಂತ್ ಕುಮಾರ್

    ಕೆಲವೇ ದಿನಗಳ ಹಿಂದೆ ಡಾ. ರಾಜ್ ಕುಮಾರ್ ಅವರ ಪ್ರತಿಮೆಯನ್ನು ಸೌತ್ ಎಂಡ್ ವೃತ್ತದಲ್ಲಿ ಉದ್ಘಾಟಿಸಿದ್ದ ಬೆಂಗಳೂರು ದಕ್ಷಿಣ ಸಂಸದ ಅನಂತ್ ಕುಮಾರ್ ಅವರು ವಿಷ್ಣು ರಸ್ತೆ ನಾಮಕರಣಕ್ಕೂ ಬಂದಿದ್ದರು. [ರಾಜ್ ಕುಮಾರ್ ಪ್ರತಿಮೆ ಅನಾವರಣ]

    ಡಾ. ವಿಷ್ಣು ರಸ್ತೆ ಹೆಸರನ್ನು ಹಾಳು ಮಾಡಬೇಡಿ

    ಡಾ. ವಿಷ್ಣು ರಸ್ತೆ ಹೆಸರನ್ನು ಹಾಳು ಮಾಡಬೇಡಿ

    ಮಹಾತ್ಮಾ ಗಾಂಧಿ ರಸ್ತೆಯನ್ನು ಎಂಜಿ ರಸ್ತೆ ಎಂದು ಕರೆದು ಜನರು ಅಪಭ್ರಂಶ ಮಾಡಿದ್ದಾರೆ. ಅದೇ ರೀತಿ ಡಾ. ವಿಷ್ಣುವರ್ಧನ ರಸ್ತೆಯನ್ನು ಏನೇನೋ ಕರೆದು ಹಾಳು ಮಾಡಬೇಡಿ ಎಂದು ಅನಂತ್ ಕುಮಾರ್ ಅವರು ಜನರಿಗೆ ಕರೆ ನೀಡಿದರು.

    ಡಾ. ವಿಷ್ಣುವರ್ಧನ ಅವರಿಗೆ ಜಯವಾಗಲಿ

    ಡಾ. ವಿಷ್ಣುವರ್ಧನ ಅವರಿಗೆ ಜಯವಾಗಲಿ

    ಕಾರ್ಯಕ್ರಮದುದ್ದಕ್ಕೂ ವಿಷ್ಣುವರ್ಧನ ಅವರ ಅಭಿಮಾನಿಗಳ ಜಯಕಾರ ಮೊಳಗುತ್ತಲೇ ಇತ್ತು. ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು.

    ರಾಮಲಿಂಗಾ ರೆಡ್ಡಿ, ಅಶೋಕ್ ಉಭಯಕುಶಲೋಪರಿ

    ರಾಮಲಿಂಗಾ ರೆಡ್ಡಿ, ಅಶೋಕ್ ಉಭಯಕುಶಲೋಪರಿ

    ಅಶೋಕ್ : ಏನ್ ರಾಮಲಿಂಗಾ ರೆಡ್ಡಿಯವರೆ, ಕೇಂದ್ರದಲ್ಲಿ ಈ ಬಾರಿ ಯಾವ ಸರಕಾರ ಬರಬಹುದು ಅಂತೀರಾ?

    ರಾಮಲಿಂಗಾ ರೆಡ್ಡಿ : (ತಲೆ ಕೆರೆದುಕೊಳ್ಳುತ್ತ) ನೀವೇನೇ ಹೇಳಿ ರಾಹುಲ್ ಗಾಂಧಿ ಪ್ರಧಾನಿ ಆಗೋದು ಗ್ಯಾರಂಟಿ!

    ಭಾರತಿ ವಿಷ್ಣುವರ್ಧನ ಅವರಿಗೆ ಸ್ಮರಣಿಕೆ

    ಭಾರತಿ ವಿಷ್ಣುವರ್ಧನ ಅವರಿಗೆ ಸ್ಮರಣಿಕೆ

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಾರತಿ ಅವರಿಗೆ ಅನಂತ್ ಕುಮಾರ್ ಅವರಿಂದ ಸ್ಮರಣಿಕೆ ಪ್ರದಾನ.

    ನಾನು ಕೂಡ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದೆ

    ನಾನು ಕೂಡ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದೆ

    ಮಾಜಿ ಮುಖ್ಯಮಂತ್ರಿ ಆರ್ ಅಶೋಕ್ ಅವರು ವಿಷ್ಣುವರ್ಧನ್ ಅವರನ್ನು ಕೊಂಡಾಡುತ್ತ, ತಾವು ನೋಡಿದ ವಿಷ್ಣು ಚಿತ್ರಗಳನ್ನು ಮೆಲಕು ಹಾಕಿದರು.

    ಮಾವನ ಮೇಲಿಟ್ಟ ಅಭಿಮಾನಕ್ಕೆ ನಾನು ಋಣಿ

    ಮಾವನ ಮೇಲಿಟ್ಟ ಅಭಿಮಾನಕ್ಕೆ ನಾನು ಋಣಿ

    ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಅವರು ವಿಷ್ಣು ಅವರ ನಂತರವೂ ಅವರ ಕುರಿತಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇತ್ತೀಚಿಗೆ ವಿಷ್ಣು ಅವರ ಕಾಮಿಕ್ಸ್ ಕೂಡ ಬಿಡುಗಡೆಯಾಯಿತು. [ವಿಷ್ಣು ಹುಟ್ಟುಹಬ್ಬದಂದು]

    ಬನಶಂಕರಿಯಲ್ಲಿ ಜನಸಾಗರವೋ ಜನಸಾಗರ

    ಬನಶಂಕರಿಯಲ್ಲಿ ಜನಸಾಗರವೋ ಜನಸಾಗರ

    ಚುರುಗುಟ್ಟುವ ಬಿಸಿಲಿದ್ದರೂ ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿ ದೇವರುಗಳು ವಿಷ್ಣುವರ್ಧನ್ ರಸ್ತೆ ನಾಮಕರಣಕ್ಕೆ ಆಗಮಿಸಿದ್ದರು.

    ಈ ನಗು ಎಂದೆಂದಿಗೂ ಚಿರಾಯು

    ಈ ನಗು ಎಂದೆಂದಿಗೂ ಚಿರಾಯು

    ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಫುರಧ್ರುಪಿ ನಟರುಗಳಲ್ಲಿ ಒಬ್ಬರಾಗಿದ್ದ ವಿಷ್ಣುವರ್ಧನ್ ಅವರ ನಗುನಗುತ್ತಿದ್ದ ಭಾವಚಿತ್ರ ಮೆರವಣಿಗೆಯ ರಥದಲ್ಲಿ ವಿರಾಜಮಾನವಾಗಿತ್ತು.

    English summary
    Road between Banashankari and Kengeri has been named after the legendary actor Late Sahasasimha Dr. Vishnuvardhan on 2nd February, 2014. Bharathi Vishnuvardhan, Ananth Kumar, R Ashok, Bangalore mayor Sathyanarayana and others participated in the event. This 14.3 km length road is considered as lengthiest road named after any artist in India.
    Monday, February 3, 2014, 14:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X