»   » 'ಮಾಣಿಕ್ಯ' ಸಲುವಾಗಿ ಹಿಂದಡಿಯಿಟ್ಟ 'ಗಜಕೇಸರಿ'

'ಮಾಣಿಕ್ಯ' ಸಲುವಾಗಿ ಹಿಂದಡಿಯಿಟ್ಟ 'ಗಜಕೇಸರಿ'

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿರುವ ಭಾರಿ ಬಜೆಟ್ ನ ಮತ್ತೊಂದು ಚಿತ್ರ ಗಜಕೇಸರಿ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರದ ಬಿಡುಗಡೆ ಸದ್ಯಕ್ಕೆ ಇಲ್ಲ ಎನ್ನುತ್ತವೆ ಮೂಲಗಳು.

ಮೇ ತಿಂಗಳ ಎರಡನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಮೇ.16ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರ ಇದೀಗ ಮೇ.23ಕ್ಕೆ ಪೋಸ್ಟ್ ಪೋನ್ ಆಗಿದೆ. ಚಿತ್ರವನ್ನು ಮುಂದೂಡಲು ಕಾರಣ ಏನಿರಬಹುದು?

ಸುದೀಪ್ ಅಭಿನಯದ 'ಮಾಣಿಕ್ಯ' ಚಿತ್ರದ ನಿರ್ಮಾಪಕ ಎಂಎನ್ ಕುಮಾರ್ ಹಾಗೂ 'ಗಜಕೇಸರಿ'ಯ ಜಯಣ್ಣ ನಡುವಿನ ಪರಸ್ಪರ ಒಪ್ಪಂದದ ಮೇರೆಗೆ ಚಿತ್ರವನ್ನು ಎರಡು ವಾರ ಮುಂದೂಡಲಾಗಿದೆಯಂತೆ. ಇದರಿಂದ ಎರಡೂ ಚಿತ್ರಗಳಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ.

'ಗಜಕೇಸರಿ'ಗೆ ಸೆನ್ಸಾರ್ ಮಾತ್ರ ಬಾಕಿ ಇದೆ

'ಗಜಕೇಸರಿ'ಗೆ ಸೆನ್ಸಾರ್ ಮಾತ್ರ ಬಾಕಿ ಇದೆ

ಸದ್ಯಕ್ಕೆ ಮಾಣಿಕ್ಯ ಚಿತ್ರ ಬಾಕ್ಸ್ ಆಫೀಸಲ್ಲಿ ಒಳ್ಳೆಯ ಬಿಜಿನೆಸ್ ಮಾಡುತ್ತಿದೆ. ಎರಡು ವಾರ ಬಿಟ್ಟು ಬಿಡುಗಡೆ ಮಾಡುವುದರಿಂದ 'ಗಜಕೇಸರಿ' ಚಿತ್ರವೂ ಕೋಟಿ ಕೋಟಿ ಕೊಳ್ಳೆ ಹೊಡೆಯುವುದು ಗ್ಯಾರಂಟಿ. ಸದ್ಯಕ್ಕೆ ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಬೇಕಿದೆ.

ಥಾಯ್ಲೆಂಡ್ ನ‌ಲ್ಲಿ ಬಹುತೇಕ ಚಿತ್ರೀಕರಣ

ಥಾಯ್ಲೆಂಡ್ ನ‌ಲ್ಲಿ ಬಹುತೇಕ ಚಿತ್ರೀಕರಣ

ಇನ್ನು ಗಜಕೇಸರಿ ಚಿತ್ರದ ವಿಶೇಷಗಳು ಒಂದೆರಡಲ್ಲ. ಬಹುತೇಕ ಚಿತ್ರೀಕರಣ ಥಾಯ್ಲೆಂಡ್ ನ‌ಲ್ಲಿ ನಡೆಸಲಾಗಿದೆ. ಥಾಯ್ಲೆಂಡಿನಲ್ಲಿ ಇಲ್ಲಿಗಿಂತ ಚೆನ್ನಾಗಿ ಪಳಗಿದ ಆನೆಗಳಿರುವುದು ಒಂದು ಕಾರಣ ಎನ್ನುತ್ತದೆ ಚಿತ್ರ ತಂಡ.

ಅರ್ಜುನ ಎಂಬ ಆನೆ ಯಶ್ ಸಂಗಾತಿ

ಅರ್ಜುನ ಎಂಬ ಆನೆ ಯಶ್ ಸಂಗಾತಿ

ಥಾಯ್ಲೆಂಡಿನ ಎಲಿಫೆಂಟ್ ಪಾರ್ಕ್ ನಲ್ಲಿ 30 ಆನೆಗಳ ನಡುವೆ ಚಿತ್ರೀಕರಣ ನಡೆಸಲಾಗಿದೆ. ಕೇರಳದ 15 ಅಡಿ ಎತ್ತರದ ಅರ್ಜುನ ಎಂಬ ಆನೆ ಗಜಕೇಸರಿ ಯಶ್ ಸಂಗಾತಿಯಾಗಿ ವಿಶೇಷವಾಗಿ ಕಾಣಿಸಿಕೊಳ್ಳಲಿದೆ.

ಇದೇ ಮೊದಲ ಬಾರಿ ಅಮೂಲ್ಯ ಜೊತೆ ಯಶ್

ಇದೇ ಮೊದಲ ಬಾರಿ ಅಮೂಲ್ಯ ಜೊತೆ ಯಶ್

ಮುದ್ದಾಗಿ ಕಾಣುವ ಅಮೂಲ್ಯ ಮೊದಲ ಬಾರಿಗೆ ಯಶ್ ಗೆ ಜೋಡಿಯಾಗಿದ್ದಾರೆ. ಇದರ ಜತೆಗೆ ಕೃಷ್ಣ ಅವರು ನಿರ್ದೇಶಕನಾಗಿ ಬಡ್ತಿ ಪಡೆದಿರುವುದು, ಯಶ್ ಚಿತ್ರ ಮೊದಲ ಬಾರಿಗೆ ನಿರ್ದೇಶಿಸುತ್ತಿರುವುದು, ಹಿಟ್ ಚಿತ್ರ ನೀಡಿ ಕೂಡಾ ಸಹಾಯಕ ನಿರ್ದೇಶಕರಾಗಿ ತರುಣ್ ಸುಧೀರ್ ಅವರು ಕಲಿಕೆಗಾಗಿ ಈ ಚಿತ್ರದಲ್ಲಿ ದುಡಿದಿರುವುದು ಚಿತ್ರದ ಹೈಲೇಟ್ ಎನಿಸಲಿದೆ.

ದೊಡ್ಡ ಟೆನ್ಷನ್ ತಂದ ಹೇರ್ ಎಕ್ಷಟೆನ್ಷನ್

ದೊಡ್ಡ ಟೆನ್ಷನ್ ತಂದ ಹೇರ್ ಎಕ್ಷಟೆನ್ಷನ್

ಗಂಡು ಸಿಂಹಕ್ಕೆ ಕುತ್ತಿಗೆಯ ಸುತ್ತ ಕೇಸರ ಇರೋ ಹಾಗೆ ತನ್ನ ತಲೆಗೆ ಹೇರ್ ಎಕ್ಷಟೆನ್ಷನ್ ಮಾಡಿಸಿಕೊಂಡ ಯಶ್ ಗೆ ಈ ಹೇರ್ ಎಕ್ಷಟೆನ್ಷನ್ನೇ ದೊಡ್ಡ ಟೆನ್ಷನ್ ಆಗಿತ್ತಂತೆ. ಯಶ್ ಈ ಕೂದಲನ್ನ ಮೇಂಟೇನ್ ಮಾಡೋಕೆ ಕಷ್ಟಪಟ್ಟು ನಿರ್ದೇಶಕರಿಗೆ ಕೈಮುಗಿದು ಬಿಟ್ರಂತೆ.

English summary
Rocking Star Yash lead movie 'Gajakesari' will release on 23rd May. The film was earlier scheduled to release on 16th May. Sudeep's 'Maanikya' which released on May 1 is doing great business at box office and therefore Gajakesari will release one more later than expected.
Please Wait while comments are loading...

Kannada Photos

Go to : More Photos