twitter
    For Quick Alerts
    ALLOW NOTIFICATIONS  
    For Daily Alerts

    ಮರಾಠಿ ಚಿತ್ರದ ಮೇಲೆ ರಾಕ್ ಲೈನ್ ವೆಂಕಟೇಶ್ ಕಣ್ಣು ಬಿದ್ದದ್ದು ಹೇಗೆ.?

    By Harshitha
    |

    ಕನ್ನಡ ಚಿತ್ರರಂಗದ 'ಧೀರ' ಅಂತಲೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೆಸರುವಾಸಿ. ಸ್ಯಾಂಡಲ್ ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಟ್ಟು, ಟಾಲಿವುಡ್, ಕಾಲಿವುಡ್ ಕಡೆ ಮುಖ ಮಾಡಿದ ರಾಕ್ ಲೈನ್ ಸಾಹೇಬ್ರು ಸೂಪರ್ ಸ್ಟಾರ್ ರಜಿನಿಕಾಂತ್ ಗಾಗಿ 'ಲಿಂಗ' ಚಿತ್ರ ನಿರ್ಮಾಣ ಮಾಡಿದ್ರು.

    ತದನಂತರ ಬಾಲಿವುಡ್ ಗೆ ಹಾರಿ ಸಲ್ಮಾನ್ ಖಾನ್ ಗಾಗಿ 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೆ ಬಂಡವಾಳ ಹೂಡಿದರು. ಎಲ್ಲಾ 'ವುಡ್' ಗಳಲ್ಲೂ ತಮ್ಮ ಛಾಪು ಮೂಡಿಸಿರುವ ರಾಕ್ ಲೈನ್ ವೆಂಕಟೇಶ್ ಕಣ್ಣು ಸದ್ಯ ಮರಾಠಿ ಚಿತ್ರರಂಗದ ಮೇಲೆ ಬಿದ್ದಿದೆ.

    ಮರಾಠಿ ಸಿನಿ ಅಂಗಳದಲ್ಲಿ ಕೋಟಿ ಕೋಟಿ ಬಾಚಿರುವ ಸೈರತ್ (ಸೈರಾಟ್) ಚಿತ್ರವನ್ನ ಕಣ್ತುಂಬಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ರೀಮೇಕ್ ಮಾಡುವ ನಿರ್ಧಾರ ಮಾಡಿದ್ದಾರೆ. [ಮರಾಠಿ 'ಸೈರಟ್' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ರಾಕ್ ಲೈನ್]

    ಅಸಲಿಗೆ ಈ ಪ್ಲಾನ್ ಹೇಗಾಯ್ತು ಎಂಬುದರ ಬಗ್ಗೆ ರಾಕ್ ಲೈನ್ ವೆಂಕಟೇಶ್ ಬಾಯ್ಬಿಟ್ಟಿದ್ದಾರೆ. ಸಂಪೂರ್ಣ ವಿವರಕ್ಕಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...

    ಬಾಕ್ಸ್ ಆಫೀಸ್ ಉಡೀಸ್ ಮಾಡಿರುವ 'ಸೈರಾಟ್'

    ಬಾಕ್ಸ್ ಆಫೀಸ್ ಉಡೀಸ್ ಮಾಡಿರುವ 'ಸೈರಾಟ್'

    ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ, ಬಿಡುಗಡೆಯಾದ 40 ದಿನಗಳಲ್ಲಿ 100ಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿರುವ 'ಸೈರಾಟ್' ಚಿತ್ರದ ಸಕ್ಸಸ್ ಮೀಟ್ ಮುಂಬೈನ ಟ್ರೈಡೆಂಟ್ ಹೋಟೆಲ್ ನಲ್ಲಿ ಇತ್ತೀಚೆಗಷ್ಟೇ ನಡೆಯಿತು.

    ರೀಮೇಕ್ ಸುದ್ದಿ ಘೋಷಿಸಿದ್ದು ಅಲ್ಲೇ.!

    ರೀಮೇಕ್ ಸುದ್ದಿ ಘೋಷಿಸಿದ್ದು ಅಲ್ಲೇ.!

    ಮುಂಬೈನ ಟ್ರೈಡೆಂಟ್ ಹೋಟೆಲ್ ನಲ್ಲಿ ನಡೆದ ಸಂತೋಷ ಕೂಟದಲ್ಲೇ ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ 'ಸೈರಾಟ್' ರೀಮೇಕ್ ಆಗುತ್ತಿರುವ ವಿಷಯ ಘೋಷಿಸಲಾಯಿತು.

    ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಏನಂದ್ರು.?

    ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಏನಂದ್ರು.?

    ''ಮರಾಠಿ ಸಿನಿಮಾ ನಾನು ಅಷ್ಟಾಗಿ ನೋಡುವುದಿಲ್ಲ. ಆದ್ರೆ, 'ಸೈರಾಟ್' ಚಿತ್ರವನ್ನು ವೀಕ್ಷಿಸುವ ಅವಕಾಶ ನನಗೆ ಲಭಿಸಿತು. ನಿಜಕ್ಕೂ, ಚಿತ್ರ ನನ್ನ ಮನಸ್ಸು ಮುಟ್ಟಿತು. ಆಗಲೇ, ಈ ಚಿತ್ರವನ್ನು ರೀಮೇಕ್ ಮಾಡುವ ನಿರ್ಧಾರ ತೆಗೆದುಕೊಂಡೆ'' ಎಂದರು ರಾಕ್ ಲೈನ್ ವೆಂಕಟೇಶ್.

    ಜೀ ಸ್ಟುಡಿಯೋ ಜೊತೆ ಜಂಟಿ ನಿರ್ಮಾಣ

    ಜೀ ಸ್ಟುಡಿಯೋ ಜೊತೆ ಜಂಟಿ ನಿರ್ಮಾಣ

    ''ಸೈರಾಟ್' ರೀಮೇಕ್ ಮಾಡುವ ಸಲುವಾಗಿ, ಚಿತ್ರ ನಿರ್ಮಿಸಿರುವ ಜೀ ಸ್ಟುಡಿಯೋದವರನ್ನು ಭೇಟಿ ಮಾಡಿದೆ. ರೀಮೇಕ್ ರೈಟ್ಸ್ ಬಗ್ಗೆ ಮಾತನಾಡಿದಾಗ, ಅವರು ತಾವೇ ಈ ಚಿತ್ರವನ್ನು ದಕ್ಷಿಣದ ಭಾಷೆಗಳಲ್ಲಿ ನಿರ್ಮಿಸುವುದಾಗಿ ಹೇಳಿದರು. ಬೇಕಾದ್ರೆ, ಜಂಟಿ ನಿರ್ಮಾಣ ಮಾಡಬಹುದು ಎಂದರು'' - ರಾಕ್ ಲೈನ್ ವೆಂಕಟೇಶ್

    ಚಿತ್ರ ಬಿಡುವ ಮನಸ್ಸು ಇರ್ಲಿಲ್ಲ.!

    ಚಿತ್ರ ಬಿಡುವ ಮನಸ್ಸು ಇರ್ಲಿಲ್ಲ.!

    ''ನಾನು ಇದುವರೆಗೂ ಜಂಟಿ ನಿರ್ಮಾಣದಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಹಾಗೆಯೇ, ಈ ಚಿತ್ರವನ್ನು ಬಿಡುವ ಮನಸ್ಸಿರಲಿಲ್ಲ. ಹಾಗಾಗಿ, ಜೀ ಸ್ಟುಡಿಯೋಸ್ ನವರ ಜೊತೆಗೆ ಸೇರಿಕೊಂಡು, ಈ ಚಿತ್ರವನ್ನು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಿಸುತ್ತಿದ್ದೇನೆ. ಈ ಪೈಕಿ ತೆಲುಗು ಚಿತ್ರ ಮೊದಲು ಶುರುವಾಗಲಿದೆ. ಮರಾಠಿ ಚಿತ್ರವನ್ನು ನಿರ್ದೇಶಿಸಿದ್ದ ನಾಗರಾಜ್ ಮಂಜುಳೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಂತರದ ದಿನಗಳಲ್ಲಿ ಬೇರೆ ಭಾಷೆಗಳ ಇದೇ ಚಿತ್ರವನ್ನು ಮಾಡಲಿದ್ದೇವೆ'' - ರಾಕ್ ಲೈನ್ ವೆಂಕಟೇಶ್

    'ಸೈರಾಟ್' ಚಿತ್ರದ ಬಗ್ಗೆ....

    'ಸೈರಾಟ್' ಚಿತ್ರದ ಬಗ್ಗೆ....

    'ಸೈರಾಟ್' ಚಿತ್ರದಲ್ಲಿ ರಿಂಕು ರಾಜಗುರು, ಆಕಾಶ್ ತೋಸರ್, ತಾನಾಜಿ, ಆರ್ಬಾಜ್ ಶೇಖ್, ಛಾಯಾ ಕದಂ ಮುಂತಾದವರು ಅಭಿನಯಿಸಿದ್ದು, ನಾಗರಾಜ್ ಮಂಜುಳೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿತಿನ್ ಖೇಣಿ, ನಿಖಿಲ್ ಸಾಣೆ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಅವರ ಸಂಗೀತವಿದೆ.

    English summary
    Popular Kannada Producer Rockline Venkatesh spoke about remaking of Marathi Film 'Sairat' in South Indian languages during the Success Meet held at Trident Hotel, Mumbai
    Tuesday, June 14, 2016, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X