»   » ಪುನೀತ್ ’ರಣವಿಕ್ರಮ’ ಚಿತ್ರಕ್ಕೆ ನಾಯಕಿ ಅಂತಿಮ

ಪುನೀತ್ ’ರಣವಿಕ್ರಮ’ ಚಿತ್ರಕ್ಕೆ ನಾಯಕಿ ಅಂತಿಮ

Posted by:
Subscribe to Filmibeat Kannada

ಚಿತ್ರದ ಮಹೂರ್ತದಿಂದಲೇ ಕ್ರೇಜ್ ಹುಟ್ಟಿಸಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮುಂದಿನ ಚಿತ್ರ 'ಧೀರ ರಣವಿಕ್ರಮ' ಚಿತ್ರಕ್ಕೆ ನಾಯಕಿ ಯಾರು ಎನ್ನುವ ಊಹಾಪೋಹಗಳಿಗೆ ತೆರೆಬಿದ್ದಿದೆ.

ಚಿತ್ರಕ್ಕೆ ಪಕ್ಕದ ತಮಿಳು, ತೆಲುಗು ಚಿತ್ರೋದ್ಯಮದಿಂದ ತಮನ್ನಾ, ಶೃತಿ ಹಾಸನ್ ಹೀಗೆ ಹಲವು ನಾಯಕಿಯರುಗಳ ಹೆಸರು ಚಾಲ್ತಿಯಲ್ಲಿತ್ತು. ಈಗ ಚಿತ್ರದಲ್ಲಿನ ಇಬ್ಬರು ಹಿರೋಯಿನ್ ಗಳ ಪೈಕಿ ಒಬ್ಬರ ಹೆಸರನ್ನು ಚಿತ್ರದ ನಿರ್ಮಾಪಕ ಜಯಣ್ಣ ಫೈನಲ್ ಮಾಡಿದ್ದಾರೆ.

ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರಚಿತಾ ರಾಮ್ 'ಧೀರ ರಣವಿಕ್ರಮ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. [ರಣವಿಕ್ರಮ ಪವರ್ ಫುಲ್ ಸ್ಟಾರ್ಟ್]

ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡವಿದ್ದು ಯುಗಾದಿ ಹಬ್ಬದ ವೇಳೆಗೆ ಚಿತ್ರದ ಸಂಪೂರ್ಣ ತಾರಾಗಣ ಅಂತಿಮವಾಗಲಿದೆ ಎಂದು ಜಯಣ್ಣ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನಿರ್ದೇಶಕರ ಪ್ರಕಾರ

ನಿರ್ದೇಶಕರ ಪ್ರಕಾರ

ಪುನೀತ್ ಈ ಚಿತ್ರದಲ್ಲಿ ವಿದ್ಯಾರ್ಥಿ ಮತ್ತು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾ. ಚಿತ್ರದಲ್ಲಿ ಇಬ್ಬರು ನಾಯಕಿಯರುಗಳು ಇದ್ದು, ಇದರಲ್ಲಿ ಒಬ್ಬರಾಗಿ ರುಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.

ಪಾರ್ವತಿ ಮೆನನ್ ಎನ್ನಲಾಗುತ್ತಿತ್ತು

ಪಾರ್ವತಿ ಮೆನನ್ ಎನ್ನಲಾಗುತ್ತಿತ್ತು

ಮಿಲನ ಮತ್ತು ಪೃಥ್ವಿ ಚಿತ್ರದ ಮೂಲಕ ಪುನೀತ್ ಗೆ ಫೆವರೇಟ್ ಜೋಡಿಯಾಗಿದ್ದ ಪಾರ್ವತಿ ಮೆನನ್ ಅವರದ್ದು ಚಿತ್ರದಲ್ಲಿ ಗಮನಾರ್ಹ ಪಾತ್ರವಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.

ರುಚಿತಾ ರಾಮ್

ರುಚಿತಾ ರಾಮ್

ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರುಚಿತಾ ರಾಮ್, ನಂತರ ಗಣೇಶ್ ಅಭಿನಯದ ದಿಲ್ ರಂಗೀಲಾ ಚಿತ್ರದಲ್ಲೂ ನಾಯಕಿಯಾಗಿದ್ದರು. ಈಗ ದರ್ಶನ್, ಅಂಬರೀಶ್ ಪ್ರಮುಖ ಭೂಮಿಕೆಯಲ್ಲಿರುವ 'ಅಂಬರೀಷ್' ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅಪ್ಪು ಜನ್ಮದಿನದಂದು ಮಹೂರ್ತ

ಅಪ್ಪು ಜನ್ಮದಿನದಂದು ಮಹೂರ್ತ

ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು (ಮಾ 17) ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತ್ತು. ಸಾಧಾರಣವಾಗಿ ಪುನೀತ್ ಚಿತ್ರಗಳಿಗೆ ಕ್ಲಾಪ್ ಮಾಡುತ್ತಿದ್ದ ರವಿಚಂದ್ರನ್ ಅಂದು ಗೈರುಹಾಜರಾಗಿದ್ದರು. ಬದಲಿಗೆ ಶಿವರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು.

ಖಡಕ್ ಪೊಲೀಸ್ ಆಫೀಸರ್

ಖಡಕ್ ಪೊಲೀಸ್ ಆಫೀಸರ್

ಪವರ್ ಸ್ಟಾರ್ ಎಂತಹಾ ಪಾತ್ರಗಳನ್ನ ಮಾಡಿದ್ರೂ ಲೀಲಾಜಾಲವಾದ ಅಭಿನಯ ನೀಡಿರೋ ನಟ. ಆದ್ರೆ ಪುನೀತ್ 'ಧೀರ ರಣವಿಕ್ರಮ' ಚಿತ್ರದಲ್ಲಿ ಮೊದಲ ಬಾರಿಗೆ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡ್ತಿದ್ದಾರೆ.

English summary
Ruchita Ram has been selected as heroine of Puneeth Rajkumar next movie 'Dheera Rana VIkrama'. Movie directed by Pavan Wadeyar.
Please Wait while comments are loading...

Kannada Photos

Go to : More Photos