»   » ಗುರುನಂದನ್ ಜೊತೆ ನಟಿಸಲು ರಷ್ಯಾದಿಂದ ಬಂದ ರೂಪದರ್ಶಿ!

ಗುರುನಂದನ್ ಜೊತೆ ನಟಿಸಲು ರಷ್ಯಾದಿಂದ ಬಂದ ರೂಪದರ್ಶಿ!

Posted by:
Subscribe to Filmibeat Kannada

'ಫಸ್ಟ್ Rank ರಾಜು' ಖ್ಯಾತಿಯ Rank ಸ್ಟಾರ್ ಗುರುನಂದನ್ ಇತ್ತೀಚೆಗೆ ತಾನೆ 'ಸ್ಮೈಲ್ ಪ್ಲೀಸ್' ಚಿತ್ರದ ಮೂಲಕ 'ಜೀವಂತವಾಗಿ ಇರುವಷ್ಟು ದಿನ ನಮ್ಮ ಸುತ್ತಮುತ್ತಲಿನ ಜನರನ್ನು ನಗಿಸಬೇಕು. ಮುಖದಲ್ಲಿ ಮೂಡುವ ಸ್ಮೈಲ್ ಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ' ಎಂಬ ಸಂದೇಶವನ್ನು ಹೇಳಿದ್ರು.

ನಟ ಗುರುನಂದನ್ ತಮ್ಮ ಚೊಚ್ಚಲ ಚಿತ್ರದಿಂದಲೂ ಒಂದೊಳ್ಳೇ ಸಂದೇಶ ಇರುವಂತಹ ಚಿತ್ರಗಳಲ್ಲಿ ನಟಿಸುತ್ತಾ, ಚಿತ್ರಮಂದಿರದೊಳಗೆ ಕುಳಿತಷ್ಟು ಸಮಯ ಪ್ರೇಕ್ಷಕರನ್ನು ನಗಿಸುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.[100% ಮನರಂಜನೆ: 'ರಾಜು ಕನ್ನಡ ಮೀಡಿಯಂ' ಟೀಸರ್ ನೋಡಿದ್ರಾ?]

ಅಂದಹಾಗೆ Rank ಸ್ಟಾರ್ ಬಗೆಗಿನ ಲೇಟೆಸ್ಟ್ ಸುದ್ದಿ ಅಂದ್ರೆ, ತಮ್ಮ ಅಭಿನಯದಲ್ಲಿ ಮೂಡಿಬರುತ್ತಿರುವ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ರಷ್ಯಾದ ಮಾಡೆಲ್ ಒಬ್ಬರು ನಾಯಕಿ ಆಗಿ ಬಣ್ಣಹಚ್ಚಿದ್ದಾರೆ. ಅವರು ಯಾರು ತಿಳಿಯುವ ಕುತೂಹಲ ನಿಮಗಿದ್ರೆ ಮುಂದೆ ಓದಿರಿ.

ಕನ್ನಡ ಮೀಡಿಯಂ ರಾಜು ಗೆ ರಷ್ಯಾ ರೂಪದರ್ಶಿ ನಾಯಕಿ

ಕನ್ನಡ ಮೀಡಿಯಂ ರಾಜು ಗೆ ರಷ್ಯಾ ರೂಪದರ್ಶಿ ನಾಯಕಿ

'ಸ್ಮೈಲ್ ಪ್ಲೀಸ್' ನಂತರ ನಟ ಗುರುನಂದನ್ 'ರಾಜು ಕನ್ನಡ ಮೀಡಿಯಂ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗುರುನಂದನ್ ಗೆ ಈಗ ಜೋಡಿಯಾಗಿ ರಷ್ಯಾದ ಮಾಡೆಲ್ ಏಂಜೆಲಿನಾ ಡೆಸೆಡಿನಾ ಎಂಬುವವರು ಕಾಣಿಸಿಕೊಳ್ಳಲಿದ್ದಾರೆ.[ವಿಮರ್ಶೆ: ತೊಂದರೆ ಇರಲಿ, ಸಾವು ಎದುರಿಗೆ ಬರಲಿ ಸ್ಮೈಲ್ ಪ್ಲೀಸ್.. ಮುಖದಲ್ಲಿರಲಿ]

ಮೂರನೇ ನಾಯಕಿ ಆಗಿ ಏಂಜೆಲಿನಾ

ಮೂರನೇ ನಾಯಕಿ ಆಗಿ ಏಂಜೆಲಿನಾ

ಅಂದಹಾಗೆ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಈಗಾಗಲೇ 'ರಂಗಿತರಂಗ' ಖ್ಯಾತಿಯ ಅವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್ ತೆರೆ ಹಂಚಿಕೊಂಡಿದ್ದು, ರಷ್ಯಾದ ರೂಪದರ್ಶಿ ಏಂಜೆಲಿನಾ ಮೂರನೇ ನಾಯಕಿ ಆಗಿ Rank ಸ್ಟಾರ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

Rank ಸ್ಟಾರ್ ಗೆ ಮೂರು ಹಂತಗಳಲ್ಲಿ ಮೂವರು ಹೀರೋಯಿನ್

Rank ಸ್ಟಾರ್ ಗೆ ಮೂರು ಹಂತಗಳಲ್ಲಿ ಮೂವರು ಹೀರೋಯಿನ್

ಚಿತ್ರದಲ್ಲಿ ನಟ ಗುರುನಂದನ್ ಮೂರು ವಿಭಿನ್ನ ಹಂತದ ಕಥೆಗಳಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂರು ಹಂತಗಳಿಗೂ ಸರಿಹೊಂದುವ ಮೂವರು ನಾಯಕಿಯರನ್ನು ನಿರ್ಮಾಪಕರು ಆಯ್ಕೆ ಮಾಡಿದ್ದಾರಂತೆ.

ಥೈಲ್ಯಾಂಡ್ ನಲ್ಲಿ ಚಿತ್ರೀಕರಣ

ಥೈಲ್ಯಾಂಡ್ ನಲ್ಲಿ ಚಿತ್ರೀಕರಣ

'ರಾಜು ಕನ್ನಡ ಮೀಡಿಯಂ' ಚಿತ್ರತಂಡ ಇತ್ತೀಚೆಗಷ್ಟೇ ಥೈಲ್ಯಾಂಡ್ ನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿದೆ.

ಚಿತ್ರದ ತಾರಾಬಳಗ

ಚಿತ್ರದ ತಾರಾಬಳಗ

ಟೀಸರ್ ನಿಂದಲೇ 100% ಮನರಂಜನೆ ನೀಡುವ ಭರವಸೆ ನೀಡಿರುವ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ನಟ ಗುರುನಂದನ್ ಗೆ ಅವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಏಂಜೆಲಿನಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಾಮಿಡಿ ಕಿಂಗ್ ಸಾಧು ಕೋಕಿಲ, ಕುರಿ ಪ್ರತಾಪ್, ಹಿರಿಯ ನಟ ಚಂದ್ರಶೇಖರ್ ಅಭಿನಯಿಸಿದ್ದಾರೆ.

'ರಾಜು ಕನ್ನಡ ಮೀಡಿಯಂ' ತೆರೆ ಮೇಲೆ ಯಾವಾಗ?

'ರಾಜು ಕನ್ನಡ ಮೀಡಿಯಂ' ತೆರೆ ಮೇಲೆ ಯಾವಾಗ?

ಗುರುನಂದನ್ ಮತ್ತು ಏಂಜೆಲಿನಾ ಜೊತೆಯ ಸಾಂಗ್ ಶೂಟಿಂಗ್ ಒಂದು ಬಾಕಿ ಉಳಿದಿದ್ದು, ಚಿತ್ರತಂಡ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ನಲ್ಲಿಯೂ ತೊಡಗಿಕೊಂಡಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.

English summary
Russian model Angelina Desedina has been selected, after clearing auditions, for Kannada Actor Gurunandan-starrer 'Raju Kannada Medium' Movie.
Please Wait while comments are loading...

Kannada Photos

Go to : More Photos