»   » ಸಾಯಿಪ್ರಕಾಶ್ ಕನ್ನಡ ಕಲಿಗಾಲ, ತೆಲುಗು ಜನ್ಮಸ್ಥಾನಂ

ಸಾಯಿಪ್ರಕಾಶ್ ಕನ್ನಡ ಕಲಿಗಾಲ, ತೆಲುಗು ಜನ್ಮಸ್ಥಾನಂ

Posted by:
Subscribe to Filmibeat Kannada

Om Saiprakash
ಓಂ ಸಾಯಿಪ್ರಕಾಶ್ ಅವರ 97ನೇ ಕಾಣಿಕೆ 'ಕಲಿಗಾಲ'. ಈ ಚಿತ್ರದ ಕೊನೆಯ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದೇ ಚಿತ್ರವನ್ನು ತೆಲುಗಿನಲ್ಲೂ ತೆರೆಗೆ ತರಲಾಗುತ್ತಿದ್ದು ಚಿತ್ರಕ್ಕೆ ಜನ್ಮಸ್ಥಾನಂ ಎಂದು ಹೆಸರಿಡಲಾಗಿದೆ. ತೆಲುಗು ಆವೃತ್ತಿಗಾಗಿ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಸಾಯಿಕುಮಾರ್, ಚಾರುಲತಾ, ರಂಗನಾಥ್ ಮುಂತಾದವರು ಪಾಲ್ಗೊಂಡಿದ್ದರು. ಈ ಬಾರಿ ಸಾಮಾಜಿಕ ಸಮಸ್ಯೆಯೊಂದರ ಸುತ್ತ ತಮ್ಮ ಚಿತ್ತ ಹರಿಸಿದ್ದಾರೆ ಸಾಯಿಪ್ರಕಾಶ್.

ಅಪರಾಧಕ್ಕೆ ತಕ್ಕ ಶಿಕ್ಷೆ ಬಗ್ಗೆ ಯೋಚನೆ ಹರಿಸಿರುವ ಚಿತ್ರವಿದು. ದೆಹಲಿಯ ನಿರ್ಭಯಾ ಪ್ರಕರಣದ ನಂತರ ಹೆಚ್ಚು ಪ್ರಸ್ತುತವಾದ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ತಪ್ಪು ಸಂಭವಿಸಿದರೆ ಅದಕ್ಕೆ ಶಿಕ್ಷೆ ಇಲ್ಲದೆ ಕಾನೂನಿನ ಸಹಾಯದಿಂದ ರಾಜಾರೋಷವಾಗಿ ಇರುವುದು ತಿಳಿದಿರುವ ವಿಚಾರ. ಅದನ್ನೇ ಚಿತ್ರದಲ್ಲೂ ನಿರ್ದೇಶಕರೂ ಅಳವಡಿಸಿಕೊಳ್ಳುತ್ತಿದ್ದಾರೆ.

ಸುಮನ್ ರಾಯ್ ಪ್ರೊಡಕ್ಷನ್ ರಾಯಣ್ಣ ಅವರು ಈ ಚಿತ್ರದ ನಿರ್ಮಾಪಕರು. ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ನಿರ್ದೇಶಕರು ಇಟ್ಟಿರುವ ಕಾಳಜಿ ಇಂದಿನ ಸಮಾಜದಲ್ಲಿ ಆಗಬೇಕು ಎನ್ನುತ್ತಾರೆ. ಈ ಚಿತ್ರದಲ್ಲಿ ಬರುವ ಸಂದೇಶ ಇಡೀ ಭಾರತ ದೇಶಕ್ಕೆ ಅನ್ವಯ ಎಂದು ಅವರು ಹೇಳುತ್ತಾರೆ.

ಈ ಚಿತ್ರದಲ್ಲಿ ಸಾಯಿಕುಮಾರ್ ಮತ್ತೆ ಲಾಠಿ ಕೈಗೆತ್ತಿಕೊಳ್ಳುತ್ತಿದ್ದಾರೆ. ವಕೀಲರಾಗಿ ಶ್ರೀನಿವಾಸಮೂರ್ತಿ, ಹೆಡ್ ಕಾನ್ಸ್ ಟೇಬಲ್ ಆಗಿ ರಮೇಶ್ ಭಟ್, ಎಂ ಎನ್ ಲಕ್ಷ್ಮೀದೇವಿ, ಅಕ್ಕಿ ಚನ್ನಬಸಪ್ಪ, ಪದ್ಮಾ ವಾಸಂತಿ, ಕ್ಷಮಾ, ರೂಪಿಕಾ, ಪಾವನಿ, ಆನಂದ್, ದರ್ಶನ್, ಸಂದೀಪ್ ಹಾಗೂ ಇನ್ನಿತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Om Sai Prakash's 97th Kannada film Kaligaala is titled as 'Janmasthanam' in Telugu. Sai Kumar plays 'Agni' a fire filled role. He is also in four get up for a song in this film 'Kaligala'.
Please Wait while comments are loading...

Kannada Photos

Go to : More Photos