»   » ಕಳೆದ ವರ್ಷ ಸಲ್ಲು ಆದಾಯ ಬರೋಬ್ಬರಿ 270 ಕೋಟಿ ರು. !

ಕಳೆದ ವರ್ಷ ಸಲ್ಲು ಆದಾಯ ಬರೋಬ್ಬರಿ 270 ಕೋಟಿ ರು. !

Subscribe to Filmibeat Kannada

ನವದೆಹಲಿ, ಜ. 9: ಕಳೆದ ವರ್ಷ ಅತಿ ಹೆಚ್ಚು ಆದಾಯ ಗಳಿಸಿರುವ ಭಾರತದ ಜನಪ್ರಿಯ ವ್ಯಕ್ತಿಗಳ ಪಟ್ಟಿಯೊಂದನ್ನು ಫೋರ್ಬ್ಸ್ ಕಂಪನಿ ಬಿಡುಗಡೆಗೊಳಿಸಿದೆ. ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕಳೆದ ವರ್ಷ ಒಟ್ಟು 270 ಕೋಟಿ ರು. ಆದಾಯ ಗಳಿಸಿ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

Salman tops in Forbes India celebrity earning list of 2016

ಸಲ್ಮಾನ್ ನಂತರದ ಸ್ಥಾನ ನಟ ಶಾರೂಖ್ ಖಾನ್ ಅವರದ್ದು. 2016ರಲ್ಲಿ ಇವರ ಆದಾಯ 221 ಕೋಟಿ 75 ಲಕ್ಷ ರು. ಆಗಿದೆ. ಶಾರೂಖ್ ಖಾನ್ ನಂತರ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (134.44 ಕೋಟಿ ರು.) ಇದ್ದರೆ, 4ನೇ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ (203.03 ಕೋಟಿ ರು.) ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಲ್ಲಿ ವಿರಾಟ್ ಕೊಹ್ಲಿ ಆದಾಯ, ಅಕ್ಷಯ್ ಕುಮಾರ್ ಅವರಿಗಿಂತ ಕಡಿಮೆಯಿದ್ದರೂ, ಫೇಮ್ ಶ್ರೇಯಾಂಕದಲ್ಲಿ ಕೊಹ್ಲಿ, ಅಕ್ಷಯ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಫೇಮ್ ಶ್ರೇಯಾಂಕದಲ್ಲಿ ಕೊಹ್ಲಿ 1ನೇ ಸ್ಥಾನದಲ್ಲಿದ್ದರೆ, ಅಕ್ಷಯ್ 11ನೇ ಸ್ಥಾನದಲ್ಲಿದ್ದಾರೆ. ಪ್ರಾಯಶಃ ಇದೂ ಕೊಹ್ಲಿಯವರೇ 3ನೇ ಸ್ಥಾನ ಆಕ್ರಮಿಸಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು, 5ನೇ ಸ್ಥಾನದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (122.48 ಕೋಟಿ ರು.) ಇದ್ದರೆ, ಆನಂತರದ ಸ್ಥಾನಗಳಲ್ಲಿ ನಟಿ ದೀಪಿಕಾ ಪಡುಕೋಣೆ (69.75 ಕೋಟಿ ರು.), ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (58 ಕೋಟಿ ರು.), ಪ್ರಿಯಾಂಕಾ ಚೋಪ್ರಾ (76 ಕೋಟಿ ರು.), ಅಮಿತಾಭ್ ಬಚ್ಚನ್ (32.62 ಕೋಟಿ ರು.) ಇದ್ದಾರೆ. ಇನ್ನು, ಹತ್ತನೇ ಸ್ಥಾನದಲ್ಲಿ ಹೃತಿಕ್ ರೋಷನ್ (90.25 ಕೋಟಿ ರು.) ಇದ್ದಾರೆ. ಇಲ್ಲಿಯೂ ಸಹ ಜನಪ್ರಿಯತೆಯ ಶ್ರೇಯಾಂಕದಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾಗಿಂತ (ಕ್ರಮವಾಗಿ, 8 ಮತ್ತು 9), ಅಮಿತಾಭ್ ಬಚ್ಚನ್, ಹೃತಿಕ್ ರೋಷನ್ ಅವರಿಗಿಂತ (ಕ್ರಮವಾಗಿ 5 ಮತ್ತು 12) ಮುಂದಿದ್ದಾರೆ.

English summary
Salman Khan in no.1 spot in Fobes India's celebrity's list who has earned whopping amount in 2016.
Please Wait while comments are loading...

Kannada Photos

Go to : More Photos