»   » ಆರ್.ಜಿ.ವಿ ನಿರ್ದೇಶನದಲ್ಲಿ ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ

ಆರ್.ಜಿ.ವಿ ನಿರ್ದೇಶನದಲ್ಲಿ ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ

Posted by:
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡಿಗ ಸಂಚಾರಿ ವಿಜಯ್ ಗೆ ಕೊನೆಗೂ ಒಂದು ಗೋಲ್ಡನ್ ಚಾನ್ಸ್ ಹುಡುಕಿಕೊಂಡು ಬಂದಿದೆ. 'ನಾನು ಅವನಲ್ಲ, ಅವಳು' ಚಿತ್ರಕ್ಕಾಗಿ ಪ್ರತಿಷ್ಠಿತ ನಾಷಿನಲ್ ಅವಾರ್ಡ್ ಪಡೆದ ಬಳಿಕ ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಸಂಚಾರಿ ವಿಜಯ್ ಗೆ ಬಹುಭಾಷಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರತ್ನಗಂಬಳಿ ಹಾಸಿದ್ದಾರೆ.

ಯೆಸ್, ಆರ್.ಜಿ.ವಿ ನಿರ್ದೇಶಿಸುತ್ತಿರುವ ದ್ವಿಭಾಷಾ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ನಲ್ಲಿ ಸಂಚಾರಿ ವಿಜಯ್ ಗೆ ಪ್ರಮುಖ ಪಾತ್ರವಿದೆ. ನಾಟ್ಯ ಸಾರ್ವಭೌಮ ಶಿವರಾಜ್ ಕುಮಾರ್ ಜೊತೆ ಪೊಲೀಸ್ ಆಫೀಸರ್ ಆಗಿ ಸಂಚಾರಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಖುದ್ದು ಸಂಚಾರಿ ವಿಜಯ್ 'ಫಿಲ್ಮಿಬೀಟ್ ಕನ್ನಡ'ಗೆ ಮಾಹಿತಿ ನೀಡಿದರು. [ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!]

Sanchari Vijay to star in RGV's 'Killing Veerappan'

ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ರೆಡಿಯಾಗುತ್ತಿರುವ ಸಿನಿಮಾ ಇದು. ಜೊತೆಗೆ, ತೆಲುಗು ಮತ್ತು ತಮಿಳಿನಲ್ಲಿ ಡಬ್ ಕೂಡ ಆಗಲಿದೆ. ಇದರಿಂದ ಬಾಲಿವುಡ್ ಗೆ ಅಧಿಕೃತವಾಗಿ ಸಂಚಾರಿ ವಿಜಯ್ ಎಂಟ್ರಿಕೊಟ್ಟರೆ, ಟಾಲಿವುಡ್ ಮತ್ತು ಕಾಲಿವುಡ್ ನಲ್ಲೂ ಮಿಂಚಲಿದ್ದಾರೆ. [ವೀರಪ್ಪನ್ ಬೇಟೆಗೆ ಹೊರಟ ಆರ್.ಜಿ.ವಿ-ಶಿವಣ್ಣ..!]

Sanchari Vijay to star in RGV's 'Killing Veerappan'

ಒಂದ್ಕಡೆ ಶಿವರಾಜ್ ಕುಮಾರ್, ಇನ್ನೊಂದ್ಕಡೆ ರಾಮ್ ಗೋಪಾಲ್ ವರ್ಮಾ. ಇಬ್ಬರ ಜೊತೆ ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡುವ ಅವಕಾಶ ಯಾರಿಗುಂಟು ಯಾರಿಗಿಲ್ಲ. ಇಂತಹ ಚಾನ್ಸ್ ಪಡೆದುಕೊಂಡಿರುವ ನಾನೇ ಧನ್ಯ ಅಂತಿದ್ದಾರೆ ಸಂಚಾರಿ ವಿಜಯ್. (ಫಿಲ್ಮಿಬೀಟ್ ಕನ್ನಡ)

English summary
National Award Winner Sanchari Vijay is roped into play a tough cop in Ram Gopal Varma directorial, Shivarajkumar starrer 'Killing Veerappan'.
Please Wait while comments are loading...

Kannada Photos

Go to : More Photos