twitter
    For Quick Alerts
    ALLOW NOTIFICATIONS  
    For Daily Alerts

    ಪ್ರಧಾನಿ ನರೇಂದ್ರ ಮೋದಿ ವಿರುದ್ದ ನಟಿ ರಮ್ಯಾ ಟ್ವೀಟ್ ಪ್ರಹಾರ

    |

    ಸಿನಿಮಾ ಮತ್ತು ರಾಜಕೀಯ ವೃತ್ತಿ ಬದುಕಿನಲ್ಲಿ ಗೊಂದಲದಲ್ಲಿರುವ ಲಕ್ಕಿ ಸ್ಟಾರ್ ಮತ್ತು ಮಾಜಿ ಸಂಸದೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಟ್ವಿಟರ್ ನಲ್ಲಿ ಹರಿಹಾಯ್ಡಿದ್ದಾರೆ.

    ತನ್ನ ಅಭಿಮಾನಿಗಳು ಮತ್ತು ಪಕ್ಷದ ಮುಖಂಡರ ಜೊತೆ ಅಜ್ಞಾತವಾಸ ಮುಂದುವರಿಸಿರುವ ರಮ್ಯಾ, ಪ್ರಧಾನಿ ಮೋದಿಯವರ ಇತ್ತೀಚಿನ ಚೀನಾ ಪ್ರವಾಸದ ಬಗ್ಗೆ ಅಣಕವಾಡಿದ್ದಾರೆ.

    ಈ ಹಿಂದೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪರ ಬ್ಯಾಟ್ ಮಾಡಿ ಚರ್ಚೆಯ ಕೇಂದ್ರಬಿಂದುವಾಗಿದ್ದ ರಮ್ಯಾ ಈಗ ಪ್ರಧಾನಿ ಮೋದಿ ವಿರುದ್ದ ಸಾಲುಸಾಲು ಟ್ವೀಟ್ ಸಂದೇಶ ರವಾನಿಸಿ ಮತ್ತೊಮ್ಮೆ ಮೈನ್ ಸ್ಟ್ರೀಂಗೆ ಬರುವತ್ತ ಮುಖ ಮಾಡಿದ್ದಾರೆ.

    ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿದ್ದ ಶಿವರಾಜ್ ಕುಮಾರ್ ಜೊತೆಗಿನ 'ಆರ್ಯನ್' ಚಿತ್ರದ ನಂತರ, ಸಿನಿಮಾ ಜೀವನದ ಬಗ್ಗೆ ರಮ್ಯಾ ಹೆಚ್ಚಿನ ಆಸಕ್ತಿ ತೋರಲಿಲ್ಲ.

    ಜೊತೆಗೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಡಿಮೆ ಅಂತರದಿಂದ ಜೆಡಿಎಸ್ ಅಭ್ಯರ್ಥಿ ವಿರುದ್ದ ಸೋತಿದ್ದ ರಮ್ಯಾ ನಂತರ ಲಂಡನ್ ಪ್ರವಾಸಕ್ಕೆ ತೆರಳಿದ್ದರು.

    ಲಂಡನ್ ನಿಂದ ಕಳೆದ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ರಮ್ಯಾ ವಾಪಸ್ ಆಗಿದ್ದಾರೆ ಎನ್ನುವ ಸುದ್ದಿಯಿದ್ದರೂ, ರಮ್ಯಾ ಎಲ್ಲಿದ್ದಾರೆ, ಹೇಗಿದ್ದಾರೆ ಎನ್ನುವ ಸುದ್ದಿ ಮಾತ್ರ ಇನ್ನೂ ಗೌಪ್ಯವಾಗಿಯೇ ಉಳಿದಿದೆ.

    ರಮ್ಯಾ, ಪ್ರಧಾನಿ ಮೋದಿ ಆಡಳಿತ ವೈಖರಿ ಖಂಡಿಸಿ ಕಳುಹಿಸಿದ ಸಾಲು ಸಾಲು ಟ್ವೀಟ್ ಸಂದೇಶ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

    ಮೋದಿಗೆ ರಮ್ಯಾ ಕಳುಹಿಸಿದ ಟ್ವೀಟ್

    ಮೋದಿಗೆ ರಮ್ಯಾ ಕಳುಹಿಸಿದ ಟ್ವೀಟ್

    ನೀವು ಮೇಕ್ ಇನ್ ಇಂಡಿಯಾಗಾಗಿ ಮೇಡ್ ಇನ್ ಇಂಡಿಯಾ ನಾಶ ಮಾಡುತ್ತಿದ್ದೀರಾ. ಆದರೆ ನೀವು, ಮೇಡ್ ಇನ್ ಇಂಡಿಯಾವನ್ನು ಉಳಿಸುವುದಾದರೆ ಯಾವುದೇ ತಕರಾರಿಲ್ಲ.

    ದೇಶದ ಬಗ್ಗೆ ರಮ್ಯಾ ಕಾಳಜಿ

    ದೇಶದ ಬಗ್ಗೆ ರಮ್ಯಾ ಕಾಳಜಿ

    ಭಾರತದಲ್ಲಿ ಬುದ್ದಿ, ಜಾಣ್ಮೆ, ಶಕ್ತಿ ಎಲ್ಲಾ ಇದೆ, ನಾವು ಸ್ವಾಲಂಬಿಗಳಾಗಬಹುದು. ನಮಗೆ ಉತ್ತಮ ರಾಜನೀತಿಯ ಅವಶ್ಯಕತೆಯಿದೆ.

    ಮೇಕ್ ಇನ್ ಇಂಡಿಯಾ ಬಗ್ಗೆ ರಮ್ಯಾ

    ಮೇಕ್ ಇನ್ ಇಂಡಿಯಾ ಬಗ್ಗೆ ರಮ್ಯಾ

    ಮೇಕ್ ಇನ್ ಇಂಡಿಯಾದಿಂದ ಚೀನಾ ಉತ್ಪನ್ನಗಳಿಗೆ ಇನ್ನಷ್ಟು ಅನುಕೂಲವಾಗಲಿದೆ.

    ರೈತರ ಬಗ್ಗೆ ರಮ್ಯಾ

    ರೈತರ ಬಗ್ಗೆ ರಮ್ಯಾ

    ನಮ್ಮ ರೈತರು ಬೆಳೆದ ಮಾವಿನಹಣ್ಣಿಗೆ ಅಮೆರಿಕಾದಲ್ಲಿ ಮಾರುಕಟ್ಟೆ ಸಿಗಲಿಲ್ಲ.

    ಆಮದು ಮತ್ತು ರಫ್ತು

    ಆಮದು ಮತ್ತು ರಫ್ತು

    ಕೆಲವೊಂದು ಉತ್ಪನ್ನಗಳಲ್ಲಿ ನಾವು ಸ್ವಾವಲಂಬಿಗಳಾಗಿರುವಾಗ, ಆದಾಯ ಶುಂಕ ಯಾಕೆ ಕಡಿತಗೊಳಿಸಬೇಕು?

    ಚೀನಾ ಉತ್ಪನ್ನಗಳೇ ಚೀಪ್

    ಚೀನಾ ಉತ್ಪನ್ನಗಳೇ ಚೀಪ್

    ಆದಾಯ ಶುಂಕ ಕಿರಿಕಿರಿಯಾಗುವುದಂತೆ ಕಡಿತಗೊಳಿಸಲಾಗಿದೆ. ಇದರಿಂದ ಚೀನಾದ ಉತ್ಪನ್ನಗಳ ಬೆಲೆ ಭಾರತದ ಬೆಲೆಗಿಂತ ಕಮ್ಮಿಯಾಗುವುದಿಲ್ಲವೇ?

    ಚೀನಾದ ರಾಷ್ಟ್ರಪತಿ ಹೀಗೆ ಮಾಡುವುದಿಲ್ಲ

    ಚೀನಾದ ರಾಷ್ಟ್ರಪತಿ ಹೀಗೆ ಮಾಡುವುದಿಲ್ಲ

    ಭಾರತದ ಪ್ರಧಾನಿ ಮಾಡಿದಂತೆ ಚೀನಾದ ರಾಷ್ಟ್ರಪತಿಗಳು ಅಲ್ಲಿನ ಜನರಿಗೆ ಮಾಡುವುದಿಲ್ಲ. ಚೀನೀಯರ ಜೊತೆ ಉತ್ತಮ ಸಂಬಂಧಕ್ಕಾಗಿ ಪ್ರಧಾನಿ ನಮ್ಮ ರೈತರು ತಲೆತಗ್ಗಿಸುವಂತೆ ಮಾಡಿದರು.

    ಸಬ್ಸಿಡಿ

    ಸಬ್ಸಿಡಿ

    ಚೀನಾ ದೇಶ ಅಲ್ಲಿನ ಉತ್ಪಾದಕರಿಗೆ ಮತ್ತು ರಫ್ತುದಾರರಿಗೆ ಸಬ್ಸಿಡಿ ನೀಡುತ್ತದೆ. ಹೀಗಾಗಿ, ಚೀನಿಯರು ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಇದರಿಂದ ಉತ್ತೇಜನ ನೀಡಿದಂತಾಗುತ್ತದೆ.

    ದೂರದೃಷ್ಟಿ ಇಲ್ಲ

    ದೂರದೃಷ್ಟಿ ಇಲ್ಲ

    ನಿಮ್ಮ ಯೋಜನೆಗಳು ಮುಂದಿನ ದಿನಗಳಲ್ಲಿ ರೈತರ ಮತ್ತು ಕೈಗಾರಿಕೆಯ ಸಂರಕ್ಷಣೆಗೆ ಮಾರಕವಾಗಲಿದೆ.

    English summary
    Sandalwood actress is once again back with a bang in social networking site Twitter. This time the glamorous actress has Tweeted PM Modi about his tour to China.
    Friday, May 22, 2015, 17:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X