»   » ದರ್ಶನ್ ಹುಟ್ಟು ಹಬ್ಬಕ್ಕೆ ಬೆಳ್ಳಿತೆರೆಯ ಯಾರೆಲ್ಲಾ ವಿಶ್ ಮಾಡಿದ್ದಾರೆ..?

ದರ್ಶನ್ ಹುಟ್ಟು ಹಬ್ಬಕ್ಕೆ ಬೆಳ್ಳಿತೆರೆಯ ಯಾರೆಲ್ಲಾ ವಿಶ್ ಮಾಡಿದ್ದಾರೆ..?

Posted by:
Subscribe to Filmibeat Kannada
ಇಂದು (ಫೆಬ್ರವರಿ 16) ಕರುನಾಡ ಕಲಾರತ್ನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 40 ನೇ ಹುಟ್ಟುಹಬ್ಬ. ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳ ದಿನ ಎಂದೇ ಹೇಳುವ ದರ್ಶನ್, ಬರ್ತ್ ಡೇ ಜೊತೆಗೆ 15 ವರ್ಷಗಳಲ್ಲಿ 48 ಸಿನಿಮಾ ಗಳನ್ನು ಮಾಡಿದ ಸಂತಸದಲ್ಲೂ ಇದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಬಂದ ತಾಜಾ ಸುದ್ದಿ ಇದು.!]

ದಾಸ ದರ್ಶನ್ ಅವರಿಗೆ ಅಭಿಮಾನಿಗಳು ಮಾತ್ರವಲ್ಲದೇ, ಸ್ಯಾಂಡಲ್ ವುಡ್ ನ ಹಲವು ತಾರೆಯರು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ದರ್ಶನ್ ಅವರಿಗೆ ಬೆಳ್ಳಿತೆರೆಯ ಯಾರೆಲ್ಲಾ ವಿಶ್ ಮಾಡಿದ್ದಾರೆ, ಅವರ ಮುಂದಿನ ಪ್ರಾಜೆಕ್ಟ್ ಗಳು ಯಾವುವು ನೋಡೋಣ ಬನ್ನಿ.

ಲಾಟ್ ಆಫ್ ಹ್ಯಾಪಿನೆಸ್ ಇರಲಿ ಎಂದ್ರು ಚಿರಂಜೀವಿ ಸರ್ಜಾ

ಲಾಟ್ ಆಫ್ ಹ್ಯಾಪಿನೆಸ್ ಇರಲಿ ಎಂದ್ರು ಚಿರಂಜೀವಿ ಸರ್ಜಾ

ನಟ ಚಿರಂಜೀವಿ ಸರ್ಜಾ ದರ್ಶನ್ ಅವರಿಗೆ ಹ್ಯಾಪಿ ಬರ್ತ್ ಡೇ ಎಂದು ವಿಶ್ ಮಾಡಿದ್ದು, ಅವರ ಎಲ್ಲಾ ಕನಸುಗಳಿಗೆ ದೇವರು ಆಶೀರ್ವಾದ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.['ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?]

ದರ್ಶನ್ ಗೆ ಜಗ್ಗೇಶ್ ಶುಭಾಶಯಗಳು

ದರ್ಶನ್ ಗೆ ಜಗ್ಗೇಶ್ ಶುಭಾಶಯಗಳು

ನವರಸನಾಯಕ ಜಗ್ಗೇಶ್ ಅವರು ನಲ್ಮೆಯ ಕಲಾಬಂಧು ದರ್ಶನ್ ಗೆ ಬರ್ತ್ ಡೇ ವಿಶ್ ಜೊತೆಗೆ 100 ವರ್ಷ ಕನ್ನಡಿಗರನ್ನು ರಂಜಿಸಿ ಎಂದು ಹಾರೈಸಿದ್ದಾರೆ.

ಹ್ಯಾಪಿ ಬರ್ತ್ ಡೇ ಚಕ್ರವರ್ತಿ ಎಂದ ಧನಂಜಯ್

ಹ್ಯಾಪಿ ಬರ್ತ್ ಡೇ ಚಕ್ರವರ್ತಿ ಎಂದ ಧನಂಜಯ್

ಸ್ಪೆಷಲ್ ಸ್ಟಾರ್ ಧನಂಜಯ್ ಅವರು ತಮ್ಮ ಸ್ಫೂರ್ತಿ ನಟನಿಗೆ ಹೀಗೆ ರಾಕ್ ಆಗಿರಿ ಎಂಬ ಶುಭಾಶಯ ತಿಳಿಸಿದ್ದಾರೆ.

ಪವನ್ ಒಡೆಯರ್ ಶುಭಾಶಯ...

ಪವನ್ ಒಡೆಯರ್ ಶುಭಾಶಯ...

ನಿರ್ದೇಶಕ ಪವನ್ ಒಡೆಯರ್ ' ಚಾಲೆಂಜ್ ಗಳ ಕಿಂಗ್ ದರ್ಶನ್ ಸರ್ ಗೆ ಎಲ್ಲಾ ಕನಸುಗಳು ನನಸಾಗಲಿ' ಎಂದು ಟ್ವೀಟ್ ಮಾಡಿದ್ದಾರೆ.

ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ

ನಟಿ ಹರ್ಷಿಕಾ ಪೂಣಚ್ಚ ದರ್ಶನ್ ಅವರಿಗೆ ಬರ್ತ್ ಡೇ ವಿಶ್ ಜೊತೆಗೆ, ಈ ವರ್ಷ ಸೂಪರ್ ಡೂಪರ್ ಆಗಿರಲಿ ಎಂದು ಹೇಳಿದ್ದಾರೆ.

ಹ್ಯಾಪಿನೆಸ್ ಸದಾ ಜೊತೆಗಿರಲಿ

ಹ್ಯಾಪಿನೆಸ್ ಸದಾ ಜೊತೆಗಿರಲಿ

ರೋರಿಂಗ್ ಸ್ಟಾರ್ ಶ್ರೀಮುರಳಿ ಹ್ಯಾಪಿ ಬರ್ತ್ ಡೇ ದಶು..ಅದ್ಭುತ ವರ್ಷ ಇದಾಗಿರಲಿ ಎಂದು ಹಾರೈಸಿದ್ದು, ಫನ್ ಎಂದಿಗೂ ಇರಲಿ ಎಂದು ಹೇಳಿದ್ದಾರೆ.

'ಪೊರ್ಕಿ' ನಟಿ ಶುಭಾಶಯಗಳು

'ಪೊರ್ಕಿ' ನಟಿ ಶುಭಾಶಯಗಳು

'ಪೊರ್ಕಿ' ಚಿತ್ರದಲ್ಲಿ ದರ್ಶನ್ ಗೆ ಕಾಂಬಿನೇಷನ್ ಆಗಿ ನಟಿಸಿದ್ದ ನಟಿ ಪ್ರಣಿತಾ ಸುಭಾಷ್ ಪ್ರೆಸ್ ಮೀಟ್ ಒಂದರ ಜೊತೆಯಲ್ಲಿದ್ದ ಫೋಟೋ ಜೊತೆಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ದರ್ಶನ್ ಅವರ ಮುಂದಿನ ಪ್ರಾಜೆಕ್ಟ್ ಗಳಿವು

ದರ್ಶನ್ ಅವರ ಮುಂದಿನ ಪ್ರಾಜೆಕ್ಟ್ ಗಳಿವು

ತಮ್ಮ ಪ್ರಾಜೆಕ್ಟ್ ಗಳ ಕುರಿತು ಹೇಳಿರುವ ದರ್ಶನ್ ಮುಂದಿನ ಹದಿನೈದು ವರ್ಷಗಳಲ್ಲಿ 10-15 ಸಿನಿಮಾ ಮಾಡುವುದು ಡೌಟ್ ಎಂದಿದ್ದಾರೆ. ಸದ್ಯಕ್ಕೆ ದರ್ಶನ್ ಮಿಲನ ಪ್ರಕಾಶ್ ಅವರ 'ತಾರಕ್' ಮುಗಿಸಿ, ನಂತರ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರೆ.

English summary
Challenging Star Darshan has been Celebrating his 39th birthday. Here is what Sandalwood Celebrities Wishes to Darshan on his Birthday.
Please Wait while comments are loading...

Kannada Photos

Go to : More Photos