»   » ಎಲ್ಲಾ ಇರೋ ಈ ನಟರಿಗೆ ಅದೊಂದು ಮಾತ್ರ ಇಲ್ಲ!

ಎಲ್ಲಾ ಇರೋ ಈ ನಟರಿಗೆ ಅದೊಂದು ಮಾತ್ರ ಇಲ್ಲ!

Written by: ಜೀವನರಸಿಕ
Subscribe to Filmibeat Kannada

ಎಲ್ಲಾ ಇದ್ದೂ ಏನನ್ನೋ ಕಳ್ಕೊಂಡ ಹಾಗಾಗೋದು ಎಂಥಹಾ ಹಿಂಸೇನೋ ಅಂತಹಾ ಹಿಂಸೆ ಈ ಸ್ಟಾರ್ ಗಳಿಗೆ ಖಂಡಿತಾ ಶುರುವಾಗಿರುತ್ತೆ. ಈ ನಟರಿಗೆ ಸಖತ್ ಪರ್ಸನಾಲಿಟಿ ಇದೆ. ಹೀರೋಗೆ ಬೇಕಾದ ಕ್ವಾಲಿಟೀಸ್ ಇದೆ. ಆದ್ರೆ ದುರಂತ ಅಂದ್ರೆ ಅದೃಷ್ಟ ಮಾತ್ರ ಕೈ ಕೊಡ್ತಿದೆ.

ಇಲ್ಲಿ ಕೆಲವರು ಗೆದ್ದು ಸೋತವರು. ಕೆಲವರು ಸ್ವಯಂಕೃತ ಅಪರಾಧಗಳಿಂದ ಎಡವಟ್ಟು ಮಾಡಿಕೊಂಡವ್ರು ಅಂದ್ರೆ ಕಥೆಗಳ ಆಯ್ಕೆಯಲ್ಲಿ ಎಡವಿದವರು. ಪಾತ್ರಗಳನ್ನ ರಾಂಗ್ ಚಾಯ್ಸ್ ಮಾಡಿದವ್ರು. ಸತತ ಸೋಲುಗಳನ್ನೇ ಕಾಣ್ತಿರೋ ಇವರಿಗೆ ಅದ್ಯಾವಾಗ ಬ್ರೇಕ್ ಸಿಗುತ್ತೋ ಅಂತ ಕಾದಷ್ಟೂ ಸಕ್ಸಸ್ ಹತ್ತಿರವಾಗ್ತಿಲ್ಲ.

ಬ್ಯಾಕ್ ಟು ಬ್ಯಾಕ್ ಸಿನಿಮಾ ಕೊಟ್ಟ ಈ ನಟರು ಸ್ಟಾರ್ ಗಳಾಗೋದನ್ನ ಜಸ್ಟ್ ಮಿಸ್ ಮಾಡ್ಕೊಂಡವರು. ಅಂತಹಾ ಸ್ಟಾರ್ ಗಳ ಮುಂದಿನ ಸಿನಿಮಾ ಯಾವ್ದು ಏನು ಕಥೆ ಅಂತ ನೋಡ್ತಾ ಹೋದ್ರೆ ನಿಮಗೇ ಅಚ್ಚರಿಯಾಗುತ್ತೆ.

ಯೋಗಿಗೆ ಗೆಲುವಿನ ಯೋಗ ಯಾವಾಗ?

ಯೋಗಿ ಅಭಿನಯದಲ್ಲಿ ಕಳೆದು ಹಾಕುವಂತಿಲ್ಲ, 25ನೇ ಸಿನಿಮಾ ಮಾಡ್ತಿರೋ ಯೋಗಿ ತೀರಾ ಅನನುಭವಿಯೇನೂ ಅಲ್ಲ. ಒಳ್ಳೆಯ ಡಾನ್ಸರ್ ಆದ್ರೆ ಈಗಿರೋ ಸಿನಿಮಾಗಳು 'ಕಾಲಭೈರವ', 'ಪ್ರಚಂಡ', 'ಕೋಲಾರ' ಮತ್ತು 'ಸ್ನೇಕ್ ನಾಗ' ಇತರೆ ಇತರೆ ಆದ್ರೆ ಯಾವ ಸಿನಿಮಾಗಳಿಗೂ ರಿಲೀಸ್ ಮಾಡೋ ಧೈರ್ಯ ಕಡಿಮೇನೆ. ಯೋಗಿಗೆ ಗೆಲುವಿನ ಯೋಗ ಯಾವ ಸಿನಿಮಾದಲ್ಲಿದ್ಯೋ ಗೊತ್ತಿಲ್ಲ.

ತರುಣ್ ಬಾಳಿನಲ್ಲಿ ಚಂದ್ರನೆಲ್ಲಿ?

ಸ್ಯಾಂಡಲ್ ವುಡ್ ನ ಚಾಕೋಲೇಟ್ ಬಾಯ್ ತರುಣ್ ಚಂದ್ರ ಪದೇ ಪದೇ ಪ್ರಯತ್ನ ಪಟ್ರೂ ಸೋಲಿನ ಸರಪಳಿಯಿಂದ ಹೊರಬರೋಕೇ ಸಾಧ್ಯವಾಗ್ತಿಲ್ಲ. ಸದ್ಯ ಗೋವಾ ರಿಲೀಸ್ ಗೆ ಕಾದಿರೋ ತರುಣ್ ಗೆ ಗೋವಾ ಬ್ರೇಕ್ ಕೊಡುತ್ತಾ ಕಾದು ನೋಡ್ಬೇಕು.

ಕೋಮಲ್ ಚಮ್ಕಾಯ್ಸಿ ಚಿಂದಿ ಉಡಾಯಿಸ್ತಾರಾ...

ಒಂದಾದ ನಂತರ ಮತ್ತೊಂದರಂತೆ ಸೋಲಿನ ಪುಂಗಿ ಊದಿದ ಕೋಮಲ್ ಸಿನಿಮಾಗಳು ಗೆಲುವಿನ ದಡದಲ್ಲಿ ಸುಳಿಯೋದೇ ಕಷ್ಟವಾಗ್ತಿದೆ. ಸದ್ಯ ಗೋವಾ ಮತ್ತು ಲೊಡ್ಡೆ ಸಿನಿಮಾಗಳು ಕೋಮಲ್ ಕೈಯ್ಯಲ್ಲಿವೆ.

ಪ್ರಜ್ವಲ್ ಪ್ರಜ್ವಲಿಸಬೇಕಿದೆ

ಪ್ರಜ್ವಲ್ ದೇವರಾಜ್ ಎಷ್ಟೇ ಹೊಸ ಹೊಸ ಪ್ರಯತ್ನಗಳಲ್ಲಿದ್ರೂ ಪ್ರೇಕ್ಷಕರು ಒಪ್ಪಿಕೊಳ್ತಿಲ್ಲ. ಹೋಂ ಬ್ಯಾನರ್ನ 'ನೀನಾದೆನಾ' ಚಿತ್ರ ಕೂಡ ನೆಲಕಚ್ತು. ಇನ್ನು 'ಮೃಗಶಿರ' ಚಿತ್ರ ರಿಲೀಸ್ ಗೆ ಕಾದಿದೆ.

ಆದಿತ್ಯ ರೆಬೆಲ್ ಆಗ್ತಾರಾ?

ಹೈಟು ಪರ್ಸನಾಲಿಟಿಯಲ್ಲಿ ಸ್ಯಾಂಡಲ್ ವುಡ್ ನ ಯಾವ ಹೀರೋಗೂ ಕಮ್ಮಿ ಇಲ್ಲ. ಆದ್ರೆ ಎಷ್ಟೇ ಎತ್ತರ ಇದ್ರೂ ಗೆಲುವಿನ ಗಾಳಿಪಟ ಕೈಗೆ ಸಿಗ್ತಿಲ್ಲ. ರೆಬೆಲ್ ರಿಲೀಸ್ ಆಗೋಕೆ ಕಾದು ಎರಡು ವರ್ಷಗಳೇ ಕಳೆದಿದೆ. ಆದಿತ್ಯ ಮುಂದಿನ ಹಾದಿ ಗೊತ್ತಿಲ್ಲ.

ಡೈಮಂಡ್ ಸ್ಟಾರ್ ದರ್ಬಾರ್ ಯಾವಾಗ?

ಸಂಜು ವೆಡ್ಸ್ ಗೀತಾ ಗೆದ್ದ ನಂತ್ರ ಕಿಟ್ಟಿಗೆ ಪ್ರೇಕ್ಷಕ ಬಹುಪರಾಕ್ ಅನ್ನಲೇ ಇಲ್ಲ. ಸುಬ್ರಮಣಿ, ದ್ರೋಹ, ಗೀತಾಂಜಲಿ, ಶಂಕ್ರ ಸೇರಿದಂತೆ ಹಲವು ಸಿನಿಮಾಗಳು ಕಿಟ್ಟಪ್ಪ ಲಿಸ್ಟ್ ನಲ್ಲಿವೆ ಯಾವ ಸಿನಿಮಾ ಬ್ರೇಕ್ ಕೊಡುತ್ತೆ ಅನ್ನೋದಷ್ಟೇ ಮುಂದಿರೋ ಪ್ರಶ್ನೆ.

ನವೀನ್ ಕೃಷ್ಣ ಜಸ್ಟ್ ಮಿಸ್

ಕಲಾವಿದ ನವೀನ್ ಕೃಷ್ಣ. ಅದ್ಭುತ ಪೋಷಕ ಕಲಾವಿದ ಶ್ರೀನಿವಾಸಮೂರ್ತಿಯವ್ರ ಪುತ್ರ ನವೀನ್ ಕೃಷ್ಣ ಕಲಾವಿದ ಅನ್ನೋ ಹೆಸರಿಗೆ ಅನ್ವರ್ಥವೂ. ಅವರ ಅಭಿನಯವನ್ನ ಕಳೆಯೋ ಹಾಗಿಲ್ಲ. ಆದ್ರೆ ಗೆಲವು ಮಾತ್ರ ಕೈಗೆಟುಕ್ತಿಲ್ಲ.

ಅಜೆಯ್ ರಾವ್ ಅಜೇಯರಾಗ್ತಿಲ್ಲ

ಅಜೆಯ್ ರಾವ್ ಗೆ ಒಂದು ಬಿಗ್ ಬ್ರೇಕ್ ಬೇಕಾಗಿದೆ. ಸಿನಿಮಾಗಳು ಸಾಲು ಸಾಲಾಗಿ ತೆರೆಗೆ ಬರ್ತಿದ್ರೂ ಅಷ್ಟ್ರಲ್ಲೇ ಜಸ್ಟ್ ಮಿಸ್ ಅನ್ನೋ ಹಾಗೆ ಎಡವ್ತಿದ್ದಾರೆ ಅಜೆಯ್ ರಾವ್. ಎಂದೆಂದಿಗೂ, ಕೃಷ್ಣ ಲೀಲಾ, ಎ ಸೆಕೆಂಡ್ ಹ್ಯಾಂಡ್ ಲವರ್ ಸಿನಿಮಾಗಳು ರೆಡಿಯಾಗಿ ನಿಂತಿವೆ ಗೆಲುವು ಯಾವ ಬುತ್ತಿಯಲ್ಲಿದ್ಯೋ ಕಾದು ನೋಡ್ಬೇಕು.

ದಿಗಂತ್ ದಿಗ್ವಿಜಯ ಇದೆಯಾ?

ಒಂದು ರೀತಿಯ ಸಿನಿಮಾಗಳಿಗೆ ಮಾತ್ರ ಸೀಮಿತವಾದ ದಿಗಂತ್ ಈಗ 'ಪರಪಂಚ'ದಲ್ಲಿ ತೆರೆಗೆ ಬರ್ತಿದ್ದಾರೆ. ಬೆತ್ತಲೆ ಚಿತ್ರದ ಮೂಲಕ ಸುದ್ದಿಯಾದ ದಿಗಂತ್ ಸದ್ಯ ಮಿಂಚಾಗಿ ನೀನು ಬರಲು ಚಿತ್ರದಲ್ಲಿ ಕೃತಿ ಖರಬಂದ ಜೊತೆ ಅಭಿನಯಿಸಿದ್ದಾರೆ. ದಿಗಂತ್ ಅದೃಷ್ಟ ಲಕ್ಷ್ಮಿ ಎಲ್ಲಿದ್ದಾಳೋ.

ಕಿಸ್ಮತ್ ಟೆಸ್ಟ್ ನಲ್ಲಿ ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಏನೇ ರಣತಂತ್ರ ಮಾಡಿದ್ರೂ ಸತತ ಸೋಲುಗಳನ್ನೇ ಎದುರಿಸ್ತಿದ್ದಾರೆ. ಕಲಾವಿದನಾಗಿ ಎಲ್ಲೂ ಎಡವದ ವಿಜಯ್ ಗೆ ವಿಜಯ ಮಾತ್ರ ಮರೀಚಿಕೆ. ಸದ್ಯ ರಣತಂತ್ರದೊಂದಿಗೆ ಕಿಸ್ಮತ್ ಟೆಸ್ಟ್ ಮಾಡಿ ಸಕ್ಸಸ್ ನ ಟೇಸ್ಟ್ ಮಾಡ್ತಾರಾ ಗೊತ್ತಿಲ್ಲ.

English summary
Sandalwood actors who are continuesly failed in box office are looking for big break. Srinagara Kitty, Vijay Raghavendra, Diganth like actors are in a no-win situation.
Please Wait while comments are loading...

Kannada Photos

Go to : More Photos