twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿ ವಿವಾದದ ಬಗ್ಗೆ ಕಿಡಿ ಕಾರಿದ ದರ್ಶನ್-ಪ್ರೇಮ್-ಸುದೀಪ್

    By Suneetha
    |

    ಕಾವೇರಿ ವಿವಾದದ ಹಿನ್ನಲೆಯಲ್ಲಿ ಸೆಪ್ಟೆಂಬರ್ 9, ಶುಕ್ರವಾರದಂದು ಇಡೀ ಕರ್ನಾಟಕ ಬಂದ್ ಗೆ ಹಲವು ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿದ್ದು, ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟ-ನಟಿಯರು ಅಂದು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಲವ್ಲಿ ಸ್ಟಾರ್ ಪ್ರೇಮ್, ನಟಿ ರಾಗಿಣಿ, ನಟ ಕಮ್ ನಿರ್ದೇಶಕ 'ಜೋಗಿ' ಪ್ರೇಮ್, ಅಕಾಡೆಮಿ ಅಧ್ಯಕ್ಷ ಸಾರಾ ಗೋವಿಂದು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.[ಕಾವೇರಿ ವಿವಾದದ ಬಗ್ಗೆ 'ಕುರುಬನ ರಾಣಿ' ನಗ್ಮಾ ಉವಾಚ]

    ಆದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಬಾರಿ ಕೂಡ ಪ್ರತಿಭಟನೆಗೆ ಮಿಸ್ ಆಗಿದ್ದಾರೆ. 'ಹೆಬ್ಬುಲಿ' ಶೂಟಿಂಗ್ ನಿಮಿತ್ತ ಸುದೀಪ್ ಅವರು ಕಾಶ್ಮೀರದಲ್ಲಿ ಬೀಡು ಬಿಟ್ಟಿರುವ ಕಾರಣದಿಂದ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ.

    Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

    ಆದರೆ ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿರುವ ಕಿಚ್ಚ ಅವರು ಟ್ವೀಟ್ ಮಾಡುವ ಮೂಲಕ, ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಲವ್ಲಿ ಸ್ಟಾರ್ ಪ್ರೇಮ್, ರಾಗಿಣಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ದರ್ಶನ್ ಮತ್ತು ಜೋಗಿ ಪ್ರೇಮ್ ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದೆ ಓದಿ...

    ರೈತರಿಗೆ ಸದಾ ಚಿತ್ರರಂಗದ ಬೆಂಬಲ ಇರುತ್ತೆ

    ರೈತರಿಗೆ ಸದಾ ಚಿತ್ರರಂಗದ ಬೆಂಬಲ ಇರುತ್ತೆ

    "ನಾನು ಶೂಟಿಂಗ್ ಪ್ರಯುಕ್ತ ತುಂಬಾ ದೂರದಲ್ಲಿ ಇದ್ದೇನೆ. ಕಾಶ್ಮೀರದ ಸನ್ ಮಾರ್ಗ್ ನಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಆದ್ದರಿಂದ ಪ್ರತಿಕ್ತಿಯಿಸಲು ಸಾಧ್ಯವಾಗಲಿಲ್ಲ. ಆದರೆ ಕಾವೇರಿ ನೀರಿನ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತೆ". ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.[ಕರ್ನಾಟಕ ಬಂದ್‌ಗೆ ಬಿಬಿಎಂಪಿ ಸದಸ್ಯರ ಬೆಂಬಲ]

    'ಸರ್ಕಾರ ಖಂಡಿತ ನ್ಯಾಯ ಒದಗಿಸುತ್ತೆ'

    'ಸರ್ಕಾರ ಖಂಡಿತ ನ್ಯಾಯ ಒದಗಿಸುತ್ತೆ'

    "ಎಲ್ಲರೂ ಶಾಂತವಾಗಿರಬೇಕು, ಶಾಂತಿಯುತ ಪ್ರತಿಭಟನೆ ನಡೆಸಬೇಕು, ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸುತ್ತದೆ ಅನ್ನೋ ನಂಬಿಕೆ ನನಗಿದೆ". -ಸುದೀಪ್.

    ರೈತರ ಜೊತೆ ಚಿತ್ರರಂಗ ಇದೆ

    ರೈತರ ಜೊತೆ ಚಿತ್ರರಂಗ ಇದೆ

    "ಚಿತ್ರರಂಗ ಜನರನ್ನು ಸದಾ ಬೆಂಬಲಿಸುತ್ತದೆ. ಈ ಹಿಂದೆ ಕೂಡ ಹಲವು ವಿಚಾರಗಳಿಗೆ ಜನರ ಬೆಂಬಲಕ್ಕೆ ನಾವು ನಿಂತಿದ್ದೇವೆ".-ಸುದೀಪ್.

    ಮಂಡ್ಯದ ಮಣ್ಣಿನ ನೀರು ಕುಡಿದಿದ್ದೇನೆ

    ಮಂಡ್ಯದ ಮಣ್ಣಿನ ನೀರು ಕುಡಿದಿದ್ದೇನೆ

    "ನಾನು ನಟನಾಗಿ ಬಂದಿಲ್ಲ, ಈ ನಾಡಿನ ಒಬ್ಬ ಸಾಮಾನ್ಯ ಮನುಷ್ಯ ಆಗಿ ಬಂದಿದ್ದೇನೆ. ನಾನು ಈ ಮಣ್ಣಲ್ಲೇ ಬೆಳೆದವನು, ಇಲ್ಲಿನ ನಿರು ಕುಡಿದಿದ್ದೇನೆ. ಸಾಮಾನ್ಯ ಜನತೆಯ ಹಾಗೆ ನಾನಿಲ್ಲಿ, ಕುಳಿತು ರೈತರ ಜೊತೆ ಹೋರಾಟ ಮಾಡುತ್ತೇನೆ". ಅಂತ ದರ್ಶನ್ ಅವರು ಮಂಡ್ಯದಲ್ಲಿ ಹೋರಾಟ ಮಾಡುತ್ತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.[ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ ನಟ ದರ್ಶನ್]

    ರೈತರಿಗೆ ದರ್ಶನ್ ಸಾಥ್

    ರೈತರಿಗೆ ದರ್ಶನ್ ಸಾಥ್

    "ರೈತರ ಈ ಹೋರಾಟ ಬರೀ ಎರಡೇ ದಿನಕ್ಕೆ ಮುಗಿಯೋದಲ್ಲ, ಇಲ್ಲಿ ದಿನ ಮುಖ್ಯ ಅಲ್ಲ ನಾನು ಸಾಥ್ ಕೊಡ್ತೀನಿ ಅಷ್ಟೆ. ನಾವು ಅವರ ಬಳಿ ಕುಡಿಯೋಕೆ ನೀರು ಕೇಳಿದ್ದೀವಿ, ಆದರೆ ಅವರು ಬೆಳೆಯೋಕೆ ನೀರು ಕೇಳ್ತಾ ಇದ್ದಾರೆ. ಕರ್ನಾಟಕದ ಜನತೆ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮಹದಾಯಿ ವಿಚಾರ ಬಂದಾಗ ಕೂಡ ಹಾಗೆ ಮಾಡಿದ್ದಾರೆ. ಸಮುದ್ರ ಸೇರುವ ನೀರನ್ನು ಕೇಳಿದ್ವಿ, ಆದರೆ ಅವರು ಕೊಡಲಿಲ್ಲ. ಸರ್ಕಾರದ ಬಗ್ಗೆ ಮಾತಾಡೋವಷ್ಟು ನಾನು ದೊಡ್ಡವನಲ್ಲ, ಆದರೆ ರೈತರಿಗೆ ಸದಾ ಸಾಥ್ ಕೊಡ್ತೀನಿ". ದರ್ಶನ್.

    ನಮ್ಮವರಿಗೆ ತಲೆ ಕೆಟ್ಟಿದೆ

    ನಮ್ಮವರಿಗೆ ತಲೆ ಕೆಟ್ಟಿದೆ

    "ನಮ್ಮವರು ನೆಟ್ಟಗಿಲ್ಲ, ನೀರು ಬಿಟ್ರು ಅವರಿಗೆ ಹೋಗ್ತಾ ಇದೆ. ನಮ್ಮ ಮಂಡ್ಯದ ಜನ ಎಷ್ಟು ಪ್ರೀತಿಯಿಂದ ನೋಡ್ತಾರೋ, ಅಷ್ಟೇ ಕೆಟ್ಟವರು. ರೀ ಕುಡಿಯೋಕೆ ನೀರಿಲ್ಲ ಅಂದ್ರೆ, ಪರಿಹಾರ ಏನ್ರೀ ಕೊಡ್ತೀರಾ, ಬಾಟಲ್ ನೀರು ಕೊಡ್ತೀರಾ. ರಮ್ಯಾ ಹೇಳಿದ್ರು ಪರಿಹಾರ ಕೊಡ್ತೀವಿ ಅಂತ, ನಮಗೆ ಪರಿಹಾರ ಬೇಡ ನೀರು ಕೊಡಿ. ನಾವು ಬೆಳೆ ಬೆಳೆದು ಕೊಡ್ತೀವಿ ಸ್ವಾಮಿ". ಹೀಗಂತ ನಟ ಕಮ್ ನಿರ್ದೇಶಕ 'ಜೋಗಿ' ಪ್ರೇಮ್ ಅವರು ಮಂಡ್ಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಾನು ಕೂಡ ರೈತನ ಮಗ

    ನಾನು ಕೂಡ ರೈತನ ಮಗ

    ಸ್ವಾಮಿ ನಾನು ಕೂಡ ಒಬ್ಬ ರೈತನೇ, ರೈತನ ಮಗ. ನಾನು ಕೂಡ ಎಮ್ಮೆ ಮೈ ತೊಳೆದಿದ್ದೆ, ಕಬ್ಬು ಬೆಳೆ ಮಾಡಿದ್ದೆ, ಒಬ್ಬ ರೈತನಿಗೆ ನೀರು ಎಷ್ಟು ಮುಖ್ಯ, ನೀರಿನ ಅವಶ್ಯಕತೆ ಎಷ್ಟಿದೆ ಅಂತ ನನಗೆ ಗೊತ್ತು. ನಾನು ಹೊಲದಲ್ಲಿ ದುಡಿದೇ ಬೆಂಗಳೂರಿನಲ್ಲಿ ಹೋಗಿ ನಿರ್ದೇಶಕ ಆಗಿರೋದು".-ಜೋಗಿ ಪ್ರೇಮ್.

    ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ರೆ ಚೆನ್ನ

    ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ರೆ ಚೆನ್ನ

    "ರೈತರ ಹೋರಾಟಕ್ಕೆ ಇಡೀ ಚಿತ್ರರಂಗ ಬೆಂಬಲ ಕೊಡುತ್ತೆ. ಚಿತ್ರರಂಗದ ಎಲ್ಲಾ ಗಣ್ಯರು ಮಂಡ್ಯಕ್ಕೆ ಬಂದು ಸಪೋರ್ಟ್ ಮಾಡಿ, ಮಂಡ್ಯದಲ್ಲಿ ಜನತೆಯ ತುಂಬಾ ಪ್ರೀತಿಯುಳ್ಳ ಜನ ಆದ್ರಿಂದ ಬೆಂಗಳೂರಿನಲ್ಲಿ ಮಾಡೋದಕ್ಕಿಂತ ಮಂಡ್ಯದಲ್ಲಿ ಪ್ರತಿಭಟನೆ ನಡೆಸೋದು ಒಳ್ಳೆಯದು". ಅಂತ ಜೋಗಿ ಪ್ರೇಮ್ ಅವರು ಮಂಡ್ಯದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಲವ್ಲಿ ಸ್ಟಾರ್ ಪ್ರೇಮ್

    ಲವ್ಲಿ ಸ್ಟಾರ್ ಪ್ರೇಮ್

    "ಕಾವೇರಿ ನೀರು ವಿವಾದದ ಬಗ್ಗೆ ನಮ್ಮ ರಾಜ್ಯ ಸರ್ಕಾರ ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕು. ಇದು ರೈತರ ಮಾನ-ಮರ್ಯಾದೆ ಮತ್ತು ಪ್ರಾಣ, ಎಲ್ಲದರ ಪ್ರಶ್ನೆ. ಆದ್ದರಿಂದ ದಯವಿಟ್ಟು ಈ ಸಮಯದಲ್ಲಾದರೂ ಕರ್ನಾಟಕ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿ ಅಂತ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಇನ್ನು ನಾನು ಅಮೆರಿಕದಲ್ಲಿ ಇರೋದ್ರಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಹಾಗಾಗಿ ಕ್ಷಮೆ ಇರಲಿ ಅಂತ ಕರ್ನಾಟಕ ಜನತೆ ಬಳಿ ಕೇಳಿಕೊಳ್ಳುತ್ತೇನೆ. ಅಕ್ಕ ಸಮ್ಮೇಳನದಲ್ಲಿ ಇದ್ದೇನೆ. ಬಂದ ಕೂಡಲೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ". ಅಂತ ನಟ ಪ್ರೇಮ್ ಅವರು ತಿಳಿಸಿದ್ದಾರೆ.

    ನಟಿ ರಾಗಿಣಿ

    ನಟಿ ರಾಗಿಣಿ

    "ಕಾವೇರಿ ನಮ್ಮದು, ನಾವು ಬಿಡೋಲ್ಲ, ನಮಗೆ ಕುಡಿಯೋಕೆ ನೀರಿಲ್ಲ ಅಂದ್ರೆ ಅವರಿಗ್ಯಾಕೆ ಕೊಡಬೇಕು. ಬನ್ನಿ ಆಚೆ ಬನ್ನಿ ಹೋರಾಟ ಮಾಡಿ, ರೈತರ ಜೊತೆ ನಿಲ್ಲಿ, ನಾನಿದ್ದೇನೆ ನೀವೂ ಬನ್ನಿ". ಅಂತ ರಾಗಿಣಿ ಅವರು ಕಾವೇರಿ ಮಾತೆಯನ್ನು ರಕ್ಷಿಸಿಕೊಳ್ಳಲು, ಹೋರಾಟಕ್ಕೆ ಕರೆ ನೀಡಿದ್ದಾರೆ.

    English summary
    Amid anger over lack of support from Sandalwood for the Cauvery issue, some actors have expressed support for farmers.
    Thursday, September 8, 2016, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X