twitter
    For Quick Alerts
    ALLOW NOTIFICATIONS  
    For Daily Alerts

    ಕ್ರಿಕೆಟ್ ವರ್ಲ್ಡ್ ಕಪ್ ಮುಗಿದ್ರೆ ಸಾಕು ಕನ್ನಡ ಸಿನಿಮಾ ಹಬ್ಬ

    By ಜೀವನರಸಿಕ
    |

    ಈ ಬಾರಿಯ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಸ್ಯಾಂಡಲ್ ವುಡ್ ಗೆ ಅಂತಹಾ ಹೊಡೆತವನ್ನೇನೂ ಕೊಡೋದಿಲ್ಲ ಅಂತಲೇ ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಭಾರತ ನಾಲ್ಕು ಘಟಾನುಘಟಿ ತಂಡಗಳು ವರ್ಲ್ಡ್ ಕಪ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿವೆ.

    ಮಾರ್ಚ್ 29ರ ವರೆಗಂತೂ ಕ್ರಿಕೆಟ್ ಜ್ವರ 100 ಡಿಗ್ರಿ ದಾಟೋದ್ರಲ್ಲಿ ಅನುಮಾನವಿಲ್ಲ. ಹಾಗಾಗಿ ಸಿನಿಮಾ ನೋಡೋರ್ಯಾರು? ಆದ್ರೆ ಇನ್ನೇನಿದ್ರೂ ಒಂದು ವಾರ. ಅದಾದಮೇಲೆ ಎಂಟರ್ ಟೇನ್ ಮೆಂಟ್ ದುನಿಯಾವನ್ನ ಆಳೋದು ಸಿನಿಮಾಗಳೇ. ಈಗ ಆ ಸಿನಿಮಾಗಳು ಯಾವು ಅನ್ನೋ ಲೆಕ್ಕಚಾರ ಶುರುವಾಗಿದೆ. [ಕೃಷ್ಣ ಲೀಲಾ ಚಿತ್ರ ವಿಮರ್ಶೆ]

    ವರ್ಲ್ಡ್ ಕಪ್ ಗೆ ಬೆದರಲ್ಲ ಬೆಚ್ಚಲ್ಲ ಮುನ್ನುಗ್ತೀವಿ ಅಂತ ಬಂದ ರುದ್ರತಾಂಡವ, ಮೈತ್ರಿ ಸಿನಿಮಾಗಳು ಕಲೆಕ್ಷನ್ ಇಲ್ಲದೇ ಕಷ್ಟಪಡ್ತಿರೋ ಸುದ್ದಿಬಂದ ನಂತ್ರ ಉಳಿದ ಚಿತ್ರತಂಡಗಳೂ ಹಿಂದೇಟು ಹಾಕಿದ್ವು. ಆದ್ರೂ ರಾಟೆ, ಕೃಷ್ಣಲೀಲಾ ರಿಲೀಸಾಗಿ ಒಳ್ಳೆಯ ರೆಸ್ಪಾನ್ಸ್ ಪಡ್ಕೊಂಡಿವೆ. ರೆಸ್ಪಾನ್ಸ್ ಚೆನ್ನಾಗಿದ್ರೂ ವರ್ಲ್ಡ್ ಕಪ್ ನಿಂದಾಗಿ ಜನ್ರು ಥಿಯೇಟರ್ ಗೆ ಬರ್ತಿಲ್ಲ ಅನ್ನೋ ಮಾತನ್ನೂ ಚಿತ್ರತಂಡಗಳು ಒಪ್ಪಿಕೊಂಡಿವೆ. [ರಾಟೆ ಚಿತ್ರ ವಿಮರ್ಶೆ]

    ಮಾರ್ಚ್ 29ಕ್ಕೆ ವರ್ಲ್ಡ್ ಕಪ್ ಫೈನಲ್ ಮುಗಿದ್ರೆ ನಂತರದ ವಾರ ರಿಲೀಸ್ ಆಗೋಕೆ ಸಿನಿಮಾಗಳು ಥಿಯೇಟರ್ಗೆ ಮುಗಿಬಿದ್ದಿವೆ. ಆ ಸಿನಿಮಾಗಳ್ಯಾವುವು ಅನ್ನೋ ಲಿಸ್ಟ್ ಇಲ್ಲಿದೆ ನೋಡಿ. ವರ್ಲ್ಡ್ ಕಪ್ ಮುಗಿದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಅಕ್ಷರಶಃ ಸಿನಿಮಾ ಹಬ್ಬ.

    ಏಪ್ರಿಲ್ 3ಕ್ಕೆ ಕಟ್ಟೆ

    ಏಪ್ರಿಲ್ 3ಕ್ಕೆ ಕಟ್ಟೆ

    ಓಂಪ್ರಕಾಶ್ ರಾವ್ ನಿರ್ದೇಶನದ ತಮಿಳಿನ 'ಕೇಡಿ ಬಿಲ್ಲಾ ಕಿಲಾಡಿ ರಂಗ' ಚಿತ್ರದ ರೀಮೇಕ್ 'ಕಟ್ಟೆ' ಏಪ್ರಿಲ್ ಮೂರಕ್ಕೆ ಕಣಕ್ಕಿಳಿಯೋಕೆ ರೆಡಿ ಅಂತ ಘೋಷಿಸಿದೆ. ನಾಗಶೇಖರ್ ಚಂದನ್ ಮುಖ್ಯಪಾತ್ರದಲ್ಲಿರೋ ಚಿತ್ರದಲ್ಲಿ ನಗೆಹಬ್ಬದ ಜೊತೆಗೆ ಓಂಪ್ರಕಾಶ್ ರಾವ್ ನಿರ್ದೇಶನದ ಬಗ್ಗೆ ನಿರೀಕ್ಷೆಯಿಡಬಹುದು.

    ಭಟ್ಟರ ವಾಸ್ತುಪ್ರಕಾರ

    ಭಟ್ಟರ ವಾಸ್ತುಪ್ರಕಾರ

    ವರ್ಲ್ಡ್ ಕಪ್ ನಿಂದಾಗಿ ವಾಸ್ತು ಸರಿಯಿಲ್ಲ ಅಂತ ಸೈಡಿಗಿದ್ದ ಭಟ್ರು ಈಗ ವಾಸ್ತುಪ್ರಕಾರವಾಗಿ ಒಳ್ಳೆಯ ಸಮಯ ಅಂತ ಕ್ರಿಕೆಟ್ ವರ್ಲ್ಡ್ ಕಪ್ ಮುಗಿದ ನಂತರ ತೆರೆಗಿಳೀತಿದ್ದಾರೆ. ಜಗ್ಗೇಶ್, ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಚಿತ್ರದ ಬಗ್ಗೆ, ಭಟ್ರ ನಿರ್ದೇಶನದ ಬಗ್ಗೆ ಪ್ರೇಕ್ಷಕರಿಗೂ ಸಿಕ್ಕಾಪಟ್ಟೆ ಕುತೂಹಲವಿದೆ.

    ರನ್ನ ಮೇ ತಿಂಗಳಲ್ಲಿ ರನ್ನಿಂಗ್

    ರನ್ನ ಮೇ ತಿಂಗಳಲ್ಲಿ ರನ್ನಿಂಗ್

    ಏಪ್ರಿಲ್ ಮೂರಕ್ಕೆ ನಾವ್ ರೆಡಿ ಅಂತಿದ್ದ ಕಿಚ್ಚ ಅಂಡ್ ಟೀಂ ಸ್ವಲ್ಪ ಮುಂದಕ್ಕೆ ಹೋಗಿದೆ. ಇನ್ನೂ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ ಅಂತಿದ್ರೂ ಚಿತ್ರತಂಡ ಈಗ ಲೇಟಾಗಿ ಬಂದ್ರೂ ಲೇಟೆಸ್ಟಾಗಿ ಬರ್ತೀವಿ ಅಂತಿದೆ.

    ಅಪೂರ್ವ ಏಪ್ರಿಲ್ ಫೂಲ್ ಇಲ್ಲ

    ಅಪೂರ್ವ ಏಪ್ರಿಲ್ ಫೂಲ್ ಇಲ್ಲ

    ತಂದೆ ವೀರಾಸ್ವಾಮಿಯವ್ರ ಹುಟ್ಟುಹಬ್ಬಕ್ಕೆ ತೆರೆಗೆ ತರ್ಬೇಕು ಅಂದುಕೊಂಡಿರೋ ಚಿತ್ರದ ಅಂತಿಮ ಹಂತದ ತಯಾರಿಯಲ್ಲಿ ಕ್ರೇಜಿ ಸ್ಟಾರ್ ಬಿಜಿಯಾಗಿದ್ದಾರೆ. ಎಂಟತ್ತು ಸ್ಟಾರ್ ಗಳನ್ನ ಒಂದಾಗಿಸಿರೋ 'ಅಪೂರ್ವ' ಚಿತ್ರ ಬೇಸಿಗೆ ರಜೆಯಲ್ಲಿ ರಂಗೇರಲಿದೆ.

    ರಣವಿಕ್ರಮ ಏಪ್ರಿಲ್ 24

    ರಣವಿಕ್ರಮ ಏಪ್ರಿಲ್ 24

    ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಣವಿಕ್ರಮವನ್ನ ತೆರೆಗೆ ತರೋ ಸರ್ವಪ್ರಯತ್ನವನ್ನೂ ಮಾಡ್ತಿದ್ದಾರೆ ನಿರ್ದೇಶಕ ಪವನ್ ಒಡೆಯರ್. ಚಿತ್ರದ ಆಡಿಯೋ ರಿಲೀಸ್ ಸದ್ಯದಲ್ಲೇ ಇದ್ದು ರಣವಿಕ್ರಮ ಬಿರುಗಾಳಿಯಂತೆ ಸ್ಯಾಂಡಲ್ ವುಡ್ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ.

    ಐರಾವತ ರೆಡಿ ಆಯಿತಾ?

    ಐರಾವತ ರೆಡಿ ಆಯಿತಾ?

    ದರ್ಶನ್ ರನ್ನ ತೆರೆಮೇಲೆ ನೋಡೋಕೆ ಕಾದಿರೋ ದರ್ಶನ್ ಅಭಿಮಾನಿಗಳು ನಾವೂ ರೆಡಿ ಅಂತಿದ್ದಾರೆ. ಆದ್ರೆ ಅರ್ಜುನ ಇನ್ನೂ ಬಾಣ ಹೂಡಿದಂತಿಲ್ಲ. ದರ್ಶನ್ ಸಿನಿಮಾ ಅಂದ್ರೆ ಐರಾವತದಂತೇನೇ ಅನ್ನೋದನ್ನ ಮರೆಯೋ ಹಾಗಿಲ್ಲ, ಯಾವಾಗ ಬೇಕಾದ್ರೂ ಆನೆ ನಡೆದಿದ್ದೇ ದಾರಿ ಅಂತ ಥಿಯೇಟರ್ ಗೆ ನುಗ್ಗಿಬಿಡಬಹುದು..

    ವಜ್ರಕಾಯಕ್ಕಾಗಿ ಕಾಯ್ತಾ ಇರಿ

    ವಜ್ರಕಾಯಕ್ಕಾಗಿ ಕಾಯ್ತಾ ಇರಿ

    ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡಿಕೊಳ್ಳಲಿರೋ ಶಿವಣ್ಣ ಹರ್ಷ ಕಾಂಬಿನೇಷನ್ನ ವಜ್ರಕಾಯ ತೆರೆಗೆ ಬರೋದು ಏಪ್ರಿಲ್ ಕೊನೆಯಲ್ಲೇ. ಮತ್ತೊಂದು ಭಜರಂಗಿಯಂತಹಾ ಸಿನಿಮಾಗಾಗಿ ಕಾದಿರೋ ಪ್ರೇಕ್ಷಕರಿಗೆ ವಜ್ರಕಾಯಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಾದ ಅನಿವಾರ್ಯತೆ.

    ಕಾದಿದ್ದು ವರ್ಲ್ಡ್ ಕಪ್ ಗಾಗಿ

    ಕಾದಿದ್ದು ವರ್ಲ್ಡ್ ಕಪ್ ಗಾಗಿ

    ಇಲ್ಲೀವರೆಗೂ ಹದಿನೈದಕ್ಕೂ ಹೆಚ್ಚು ಸಿನಿಮಾಗಳು ವರ್ಲ್ಡ್ ಕಪ್ ಮುಗೀಲಿ ಅಂತ ಕಾದಿದ್ವು. ಈಗ ವಾರಕ್ಕೆ 4 ರಂತೆ ಚಿತ್ರಗಳು ತೆರೆಗಪ್ಪಳಿಸಲಿವೆ. ಇನ್ನೇನಿದ್ರೂ ಪ್ರತಿವಾರ ವೆರೈಟಿ ವೆರೈಟಿ ಸಿನಿಮಾಗಳು ಕಾಯ್ತಾ ಇರಿ.

    English summary
    Sandalwood film industry is waiting for ICC Cricket World Cup final match. After that, series of movies are set for release. Vaastu Prakaara, Katte, Ranna, Apoorva, Airavata, Vajrakaya are some of them.
    Tuesday, March 24, 2015, 11:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X