»   » ಚಿರು-ಅಮೂಲ್ಯ ನಡುವೆ ನಟಿ ಸಂಜನಾ ಲೀಲೆ

ಚಿರು-ಅಮೂಲ್ಯ ನಡುವೆ ನಟಿ ಸಂಜನಾ ಲೀಲೆ

Posted by:
Subscribe to Filmibeat Kannada

ಎನ್.ಆರ್.ಐ ಹುಡುಗಿ ಮತ್ತು ಐಟಂ ಗರ್ಲ್ ಪಾತ್ರಗಳಿಗೆ ಮಾತ್ರ ನಟಿ ಸಂಜನಾ ಇತ್ತೀಚೆಗೆ ಸೀಮಿತವಾಗುತ್ತಿರುವ ಹಾಗಿದೆ. 'ಸಾಗರ್', 'ಅಗ್ರಜ' ಸೇರಿದಂತೆ ಹಲವು ಚಿತ್ರಗಳಲ್ಲಿ ಹೀಗೆ ಬಂದು ಹಾಗೆ ಹೋಗಿದ್ದ ಸಂಜನಾ, ಈಗ ಅಂತದ್ದೇ ಪಾತ್ರವನ್ನ 'ರಾಮ್ ಲೀಲಾ' ಚಿತ್ರಕ್ಕಾಗಿ ಒಪ್ಪಿಕೊಂಡಿದ್ದಾರೆ.

'ರಾಮ್ ಲೀಲಾ' ಅಂದಕೂಡಲೆ, ಬಾಲಿವುಡ್ ಚಿತ್ರದೊಂದಿಗೆ ಕನ್ಫ್ಯೂಸ್ ಆಗುವ ಅಗತ್ಯ ಇಲ್ಲ. ಇದು ಚಿರಂಜೀವಿ ಸರ್ಜಾ ಮತ್ತು ಅಮೂಲ್ಯ ಅಭಿನಯದ ಕನ್ನಡದ 'ರಾಮ್ ಲೀಲಾ'. ಟಾಲಿವುಡ್ ನ ಹಿಟ್ 'ಲೌಕ್ಯಂ' ಚಿತ್ರದ ರೀಮೇಕ್ ಆಗಿರುವ ಕನ್ನಡದ 'ರಾಮ್ ಲೀಲಾ'ದಲ್ಲಿ ಚಿರು-ಅಮೂಲ್ಯ ನಡುವೆ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ನಟಿ ಸಂಜನಾ. [ಕನ್ನಡದ 'ರಾಮ್ ಲೀಲಾ'ದಲ್ಲಿ ಚಿರಂಜೀವಿ ಸರ್ಜಾ-ಅಮೂಲ್ಯ]

Sanjjanaa in Amulya and Chiranjeevi Sarja starrer Ramleela

'ವೆಲ್ ಕಮ್' ಚಿತ್ರದಲ್ಲಿ ಬಾಲಿವುಡ್ ನ ಹಾಟ್ ಕೇಕ್ ಮಲ್ಲಿಕಾ ಶೆರಾವತ್ ಪಾತ್ರವಿದ್ದ ಹಾಗೆ, 'ರಾಮ್ ಲೀಲಾ'ದಲ್ಲಿ ಸಂಜನಾ ಪಾತ್ರವಿದೆ. ಕೆಲವೇ ನಿಮಿಷಗಳ ಪಾತ್ರವಾಗಿದ್ದರೂ, ಇಡೀ ಚಿತ್ರದಲ್ಲಿ ಪರಿಣಾಮ ಬೀರುವುದರಿಂದ ಸಂಜನಾ ಒಪ್ಪಿಕೊಂಡರಂತೆ.

ಗೋಪಿಚಂದ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ತೆಲುಗಿನ 'ಲೌಕ್ಯಂ' ಚಿತ್ರವನ್ನ ಕನ್ನಡಕ್ಕೆ ತರುತ್ತಿರುವವರು ನಿರ್ದೇಶಕ ವಿಜಯ್ ಕಿರಣ್. ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ರಂತಹ ದೊಡ್ಡ ತಾರಾಬಳಗವಿರುವ 'ರಾಮ್ ಲೀಲಾ' ಚಿತ್ರದಲ್ಲಿ ಈಗ ಸಂಜನಾ ಸೇರಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. (ಏಜೆನ್ಸೀಸ್)

English summary
Kannada Actress Sanjjanaa has signed for Amulya-Chiranjeevi Sarja starrer 'Ramleela'. Sanjjanaa will be essaying pivotal character in the movie, which is the official remake of Telugu Superhit 'Loukyam'.
Please Wait while comments are loading...

Kannada Photos

Go to : More Photos