ಬೆಳ್ಳಿತೆರೆಗೆ 'ಗಂಡ ಹೆಂಡತಿ' ಸಂಜನಾ ಸಹೋದರಿ

Posted by:

ಸ್ಯಾಂಡಲ್ ವುಡ್ ಲೋಕಕ್ಕೆ ಮತ್ತೊಂದು ಚಿಗರೆಯ ಆಗಮನವಾಗಿದೆ. ಈಕೆ ಬೇರಾರು ಅಲ್ಲ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಅವರ ಸಹೋದರಿ. ಹೆಸರು ನಿಕ್ಕಿ ಗಲ್ ರಾಣಿ. ಇಷ್ಟು ದಿನ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಕೊಂಡಿದ್ದರು.

ಈಗ ಚಿರಂಜೀವಿ ಸರ್ಜಾ ಅಭಿನಯಿಸುತ್ತಿರುವ 'ಅಜಿತ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಜಿತ್ ಚಿತ್ರ ತಮಿಳಿನ ಯಶಸ್ವಿ 'ಪೈಯಾ' ಚಿತ್ರದ ರೀಮೇಕ್. ಇದೇ ಜನವರಿ ತಿಂಗಳಾಂತ್ಯಕ್ಕೆ ಚಿತ್ರಕ್ಕೆ ಸೆಟ್ಟೇರಲಿದೆ. ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು.


"ಚೆಲ್ಲುಚೆಲ್ಲಾದ ಯುವ ತಾರೆಯ ನಿರೀಕ್ಷಿಸುತ್ತಿದ್ದೆವು. ಆಗ ನಮ್ಮ ಕಣ್ಣಿಗೆ ನಿಕ್ಕಿ ಬಿದ್ದರು. ಆಡಿಷನ್ ನಲ್ಲಿ ಅವರನ್ನು ಆಯ್ಕೆ ಮಾಡಿಕೊಂಡೆವು" ಎಂದಿದ್ದಾರೆ ಮಹೇಶ್ ಬಾಬು. ಚಿತ್ರದ ಆರಂಭದ ಹಂತಗಳನ್ನು ರಾಜ್ಯದಲ್ಲೇ ಚಿತ್ರೀಕರಿಸುತ್ತೇವೆ. ಕೊನೆಯ ಹಂತ ಮಾತ್ರ ಮುಂಬೈನಲ್ಲಿ ಚಿತ್ರೀಕರಿಸುವುದಾಗಿ ಅವರು ತಿಳಿಸಿದರು.

ತಾರೆಗಳಾದ ಐಂದ್ರಿತಾ ರೇ ಹಾಗೂ ಕೃತಿ ಖರಬಂದ ಅವರು ತಮ್ಮ ಚಿತ್ರಗಳ ಮೂಲಕವೇ ಬೆಳ್ಳಿಪರದೆಗೆ ಪರಿಚಯವಾಗಿದ್ದು. ಅವರೆಲ್ಲಾ ಈಗ ಜನಪ್ರಿಯರಾಗಿದ್ದಾರೆ. ಈಗ ನಿಕ್ಕಿ ಸಹ ಅಷ್ಟೇ ತಮ್ಮ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಅವರು ಮುಂದೊಂದು ದಿನ ಜನಪ್ರಿಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ನಿರ್ದೇಶಕರು. (ಏಜೆನ್ಸೀಸ್)

Read more about: ಸಂಜನಾ, ಚಿರಂಜೀವಿ ಸರ್ಜಾ, sanjana, chiranjeevi sarja

English summary
South Indian actress Sanjjanaa's sister Nikki Galrani is ready to make her debut in Sandalwood. She has been signed to pair up opposite Chiranjeevi Sarja in forthcoming Kannada film Ajith.
Please Wait while comments are loading...

Kannada Photos

Go to : More Photos