»   » ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!

ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!

Written by: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ಯಾರು ಏನೇ ಹೇಳಿದರೂ, ಕನ್ನಡ ಪರ ಹೋರಾಟಗಾರರು ತಮ್ಮ ಬಿಗಿ ಪಟ್ಟನ್ನ ಸಡಲಿಸುವಂತೆ ಕಾಣುತ್ತಿಲ್ಲ. 'ಬಾಹುಬಲಿ-2' ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕನ್ನಡಿಗರನ್ನ ಬಹಿರಂಗವಾಗಿ ಕ್ಷಮೆ ಕೇಳುವವರೆಗೂ, ಕರ್ನಾಟಕದಲ್ಲಿ 'ಬಾಹುಬಲಿ-2' ಬಿಡುಗಡೆ ಸಾಧ್ಯವಿಲ್ಲ.

''ಸತ್ಯರಾಜ್ ಅವರು ಬಾಹುಬಲಿ-2' ಚಿತ್ರದ ನಿರ್ಮಾಪಕರಲ್ಲ. ಸ್ಟೋರಿ ರೈಟರ್ ಅಲ್ಲ. ಅಲ್ಲದೇ ಚಿತ್ರದ ಹೀರೋ ಸಹ ಅಲ್ಲ. ಒಂದು ಪಾತ್ರ ಅವರಿಗೆ ಇದೆ ಅಷ್ಟೇ. ಸತ್ಯರಾಜ್ ಅಭಿನಯ ಮಾಡಿದ್ರು.. ಸಂಭಾವನೆ ಪಡೆದು ಅವರ ಪಾಡಿಗೆ ಅವರು ಹೋದರು ಅಷ್ಟೇ. ಜನರು 'ಬಾಹುಬಲಿ-2' ಬಿಡುಗಡೆಗೆ ವಿರೋಧಿಸುವುದರಿಂದ ಸತ್ಯರಾಜ್ ಅವರಿಗೆ ಯಾವ ರೀತಿಯ ಎಫೆಕ್ಟ್ ಆಗುವುದಿಲ್ಲ'' ಎಂದು 'ಬಾಹುಬಲಿ-2' ಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಹೇಳುತ್ತಾರೆ.['ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?]

ಆದರೂ, ಸತ್ಯರಾಜ್ ಬಾಯಿಂದ 'ಸಾರಿ' ಎನ್ನುವ ಪದ ಬರುವವರೆಗೂ 'ಬಾಹುಬಲಿ-2' ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ಸಾ.ರಾ.ಗೋವಿಂದು. ಮುಂದೆ ಓದಿರಿ...

ಕನ್ನಡಿಗರ ಕಟ್ಟಪ್ಪಣೆ

ಕನ್ನಡಿಗರ ಕಟ್ಟಪ್ಪಣೆ

ಕಾವೇರಿ ವಿವಾದದ ಕುರಿತು ವರ್ಷಗಳ ಹಿಂದೆ ಕನ್ನಡಿಗರ ಬಗ್ಗೆ ಸತ್ಯರಾಜ್ ಆಡಿದ ಬೇಜವಾಬ್ದಾರಿ ಮಾತುಗಳು ಇಂದು 'ಬಾಹುಬಲಿ-2' ಚಿತ್ರಕ್ಕೆ ಕಂಟಕವಾಗಿ ಪರಿಣಮಿಸಿದೆ.[ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?]

ಇದು ಎಷ್ಟು ಸರಿ.?

ಇದು ಎಷ್ಟು ಸರಿ.?

''ಒಬ್ಬ ಕಲಾವಿದನ ಮೇಲಿನ ಸಿಟ್ಟಿನಿಂದ ಸಿನಿಮಾ ಬಿಡುಗಡೆಯನ್ನು ತಡೆಹಿಡಿಯುವುದು ಸರಿಯೇ'' ಎಂಬುದು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ರವರ ಪ್ರಶ್ನೆ.['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]

ನಿರ್ಮಾಪಕರು ಕೇಳಿಕೊಂಡಿದ್ದಾರಂತೆ.!

ನಿರ್ಮಾಪಕರು ಕೇಳಿಕೊಂಡಿದ್ದಾರಂತೆ.!

''ಸಿನಿಮಾದಲ್ಲಿ ಸತ್ಯರಾಜ್ ಒಬ್ಬ ನಟ ಅಷ್ಟೇ. ಅವರಿಂದಾಗಿ ಚಿತ್ರ ಬಿಡುಗಡೆಗೆ ತೊಂದರೆ ಮಾಡಬೇಡಿ. ನಾವು ಸಿನಿಮಾ ಮೇಲೆ ಕೋಟಿಗಟ್ಟಲೆ ಹಣ ಹೂಡಿದ್ದೇವೆ. ನಮ್ಮನ್ನ ಉಳಿಸಿ'' ಎಂದು 'ಬಾಹುಬಲಿ-2' ಚಿತ್ರದ ನಿರ್ಮಾಪಕರು ಕನ್ನಡ ಪರ ಹೋರಾಟಗಾರರ ಬಳಿ ಮನವಿ ಮಾಡಿಕೊಂಡಿದ್ದಾರಂತೆ.[ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ 'ಬಾಹುಬಲಿ-1' ಮರುಪ್ರದರ್ಶನ ರದ್ದು]

ಅವರು ಹೇಳಿದರೆ ಸಾಕೇ.!?

ಅವರು ಹೇಳಿದರೆ ಸಾಕೇ.!?

''ನಿರ್ಮಾಪಕರು ಕೇಳಿಕೊಂಡರೆ ಸಾಕೇ.. ಸತ್ಯರಾಜ್ ಕ್ಷಮೆ ಕೇಳಲಿ. ವಿಷಯ ಅಲ್ಲಿಗೆ ಬಿಡುತ್ತೇವೆ'' ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರು.

ರಜನಿಕಾಂತ್ ಕೂಡ ಕ್ಷಮೆ ಕೇಳಿದ್ದರು.!

ರಜನಿಕಾಂತ್ ಕೂಡ ಕ್ಷಮೆ ಕೇಳಿದ್ದರು.!

''ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ್ದ ರಜನಿಕಾಂತ್ ಕ್ಷಮೆ ಕೇಳಿದ್ದರು. ಅದೇ ರೀತಿ ಸತ್ಯರಾಜ್ ಕ್ಷಮಾಪಣೆ ಕೇಳಲಿ. ಇಲ್ಲಾಂದ್ರೆ, ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ'' ಅಂತಾರೆ ಸಾ.ರಾ.ಗೋವಿಂದು.

'ಬಾಹುಬಲಿ-2' ಬಿಡುಗಡೆಗೆ ದಿನಗಣನೆ

'ಬಾಹುಬಲಿ-2' ಬಿಡುಗಡೆಗೆ ದಿನಗಣನೆ

'ಬಾಹುಬಲಿ-2' ಬಿಡುಗಡೆಗೆ ದಿನಗಣನೆ ಶುರು ಆಗಿದೆ. ಕಟ್ಟಪ್ಪ ಕ್ಷಮೆ ಕೇಳುವವರೆಗೂ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯವಿಲ್ಲ ಅಂತ ಕನ್ನಡಿಗರು ಕಟ್ಟಪ್ಪಣೆ ಹೊರಡಿಸಿದ್ದು ಆಗಿದೆ. ಮುಂದೇನಾಗುತ್ತೋ... ನೋಡೋಣ...

English summary
Unless and Untill Actor Sathyaraj apologize, we won't let 'Baahubali-2' to release in Karnataka says KFCC President Sa.Ra.Govindu.
Please Wait while comments are loading...

Kannada Photos

Go to : More Photos