twitter
    For Quick Alerts
    ALLOW NOTIFICATIONS  
    For Daily Alerts

    'ಬ್ಯೂಟಿಫುಲ್': ಇದು ಕನಸು ಕಂಗಳ ಹುಡುಗರ 'ಬ್ಯೂಟಿಫುಲ್' ಕಥೆ-ವ್ಯಥೆ

    By ನವೀನ್ ಭಟ್
    |

    ಸಿನಿಮಾವನ್ನು ನೋಡುವುದು ಸುಲಭ, ಆದರೆ ಸಿನಿಮಾ ಮಾಡುವುದು ತುಂಬಾನೇ ಕಷ್ಟ. ಈ ಕಷ್ಟವನ್ನು ಇಷ್ಟಪಟ್ಟು ಮಾಡಿದ್ದಾರೆ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು.

    ಹೌದು ಇಲ್ಲಿನ ವಿದ್ಯಾರ್ಥಿಗಳು ಬ್ಯೂಟಿಫುಲ್' 'ಕಥೆ ಒಂದು ಕಥೆ ಹಲವು' ಎಂಬ ಅಡಿಬರಹ ಇರುವ ಚಲನಚಿತ್ರವನ್ನು ನಿರ್ಮಿಸಿ ಸದ್ಯದಲ್ಲೇ ಬಿಡುಗಡೆ ಮಾಡುವ ಸಂಭ್ರಮದಲ್ಲಿದ್ದಾರೆ.[ಆಳ್ವಾಸ್ 'ಮೀಡಿಯಾ ಬಝ್' ಎಸ್.ಡಿ.ಎಂಗೆ ಸಮಗ್ರ ಪ್ರಶಸ್ತಿ]

    ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋದ ವತಿಯಿಂದ ಹೊರ ತಂದ ಈ ಚಿತ್ರಕ್ಕೆ ಸಾಥ್ ನೀಡಿದ್ದು ಉಜಿರೆಯ ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗ. ಈ ಚಿತ್ರ ಕಿರುಚಿತ್ರದ ಪಟ್ಟಿಗೆ ಸೇರೋದಿಲ್ಲ. ಏಕೆಂದರೆ ಈ ಚಿತ್ರದ ಕಾಲಾವಧಿ ಬರೋಬ್ಬರಿ 1:45 ಘಂಟೆ. ಚಿತ್ರದ ಆಡಿಯೋ ಈಗಾಗಲೇ ಬಿಡುಗಡೆಯಾಗಿದ್ದು, ಹಾಡುಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿಬಿಟ್ಟಿದೆ.[ಎಸ್.ಡಿ.ಎಂ ಕಾಲೇಜಿನ ಸಾಧನೆಗಳ 'ಸುವರ್ಣ ಪಥ' ಅನಾವರಣ]

    ಅಂದಹಾಗೆ ಬ್ಯೂಟಿಫುಲ್' ಚಲನಚಿತ್ರ ಮಾಡುವ ಯೋಚನೆ ಹುಟ್ಟಿದ್ದು ಎಸ್.ಡಿ.ಎಂ ಕಾಲೇಜಿನ ಕಳೆದ ವರ್ಷದ ಎಂ.ಸಿ.ಜೆ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ. ಇಲ್ಲಿನ ವಿದ್ಯಾರ್ಥಿಗಳು ಈ ಹಿಂದೆ ಥೂ ಪಾನ್', ರುಪೀ' ಎಸ್.ಆರ್.ಕೆ', ನಿಶಾಚರ' ಸೇರಿದಂತೆ ಹಲವಾರು ಕಿರುಚಿತ್ರಗಳನ್ನು ಮಾಡಿದ್ದರು. ಮುಂದೆ ಓದಿ....

    ವಿದ್ಯಾರ್ಥಿಗಳ ಪರಿಶ್ರಮ

    ವಿದ್ಯಾರ್ಥಿಗಳ ಪರಿಶ್ರಮ

    ಇದಕ್ಕೂ ಮೊದಲು ಮಾಡಿದ ಕೆಲವಾರು ಕಿರು ಚಿತ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಬಾಚಿತ್ತು. ಹೀಗಿರುವಾಗ ಪೂರ್ಣ ಪ್ರಮಾಣದ ಚಿತ್ರವೊಂದನ್ನು ನಿರ್ಮಿಸಿದರೆ ಹೇಗೆ ಎಂಬ ಯೋಚನೆ ಈ ವಿದ್ಯಾರ್ಥಿಗಳಿಗೆ ಬಂದ ಪರಿಣಾಮ 'ಬ್ಯೂಟಿಫುಲ್' ಸಿನಮಾ ತಯಾರಾಗಿದೆ. ಇದಕ್ಕೆ ಪತ್ರಿಕೋದ್ಯಮ ವಿಭಾಗ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು ಸಾಥ್ ಕೊಟ್ಟರು.[ಉಜಿರೆ ಎಸ್ ಡಿಎಂ ಕಾಲೇಜಿಗೆ ಸುವರ್ಣ ಮಹೋತ್ಸವ ಸಂಭ್ರಮ]

    ಮಲಯಾಳಂನ 'ಕೇರಳ ಕೆಫೆ' ಸ್ಫೂರ್ತಿ

    ಮಲಯಾಳಂನ 'ಕೇರಳ ಕೆಫೆ' ಸ್ಫೂರ್ತಿ

    ಜೀವನಕ್ಕೆ ಮೌಲ್ಯಯುತವಾಗುವಂತಹಾ ಕಥೆ ಚಿತ್ರದಲ್ಲಿರಬೇಕು ಎಂದು ಚಿತ್ರತಂಡದವರು ಯೋಚಿಸುತ್ತಿರುವಾಗ ಇವರ ಕಣ್ಣೆದುರು ಬಂದಿದ್ದು `ಕೇರಳ ಕೆಫೆ' ಎಂಬ ಮಲಯಾಳಂ ಚಿತ್ರ. ಇದು 'ಬ್ಯೂಟಿಫುಲ್' ಚಿತ್ರತಂಡದ ಯೋಚನೆಗೆ ರಹದಾರಿಯಾಯಿತು ಎಂದರೆ ತಪ್ಪಾಗಲಾರದು.

    ಕಥಾಹಂದರ

    ಕಥಾಹಂದರ

    `ಬ್ಯೂಟಿಫುಲ್' ಚಿತ್ರದಲ್ಲಿ ಒಟ್ಟಾರೆ 4 ಭಾಗಗಳಿರುತ್ತದೆ. ಜೀವನದಲ್ಲಿ ತುಂಬಾ ನೊಂದಿರುವ ವ್ಯಕ್ತಿಯೊಬ್ಬ, ನೊಂದು ಮನೆ ಬಿಟ್ಟು ಹೋಗುವ ಸಮಯದಲ್ಲಿ ಆತನಿಗೆ ಕೆಲವೊಂದು ಅಂಶದಿಂದ ಜ್ಞಾನೋದಯವಾಗುತ್ತದೆ. ಆ ಅಂಶಗಳ್ಯಾವುದು ಎಂಬುವುದನ್ನು ಚಿತ್ರದಲ್ಲಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

    ಮೂವರು ನಿರ್ದೇಶಕರು

    ಮೂವರು ನಿರ್ದೇಶಕರು

    `ಬ್ಯೂಟಿಫುಲ್' ಚಲನಚಿತ್ರಕ್ಕೆ ಚೇತನ್ ಕೆ.ಸಿ, ಮೊಹಮ್ಮದ್ ದಾನೀಶ್ ಮತ್ತು ಮಾಧವ ಹೊಳ್ಳ ಅವರ ನಿರ್ದೇಶನವಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸದಾಶಿವ, ಚೇತನ್ ಕೆ.ಸಿ, ವರ್ಣಕಾ, ರೋಹಿತ್, ಪ್ರಕೃತಿ, ಶ್ರಾವ್ಯಾ, ತುಕಾರಾಂ ಮುಂತಾದವರಿದ್ದಾರೆ.

    ಶಿಳ್ಳೆ ಮಂಜು ಸಾಥ್

    ಶಿಳ್ಳೆ ಮಂಜು ಸಾಥ್

    ಇವರು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಹೆಸರಾಂತ ಬಾಲ ನಟ ಶಿಳ್ಳೆ ಮಂಜು ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡದ ನಾನಾ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸಂಗೀತ ನಿರ್ದೇಶಕ ಸಾಕೇತ್ ವಿಶ್ವಕರ್ಮ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದಲ್ಲಿ 6 ಹಾಡುಗಳಿವೆ.

    ನಿರ್ದೇಶಕರ ಮಾತು

    ನಿರ್ದೇಶಕರ ಮಾತು

    ಕಿರುಚಿತ್ರವನ್ನು ಕಾಲೇಜುಗಳಲ್ಲಿ ನಾವೂ ಸೇರಿದಂತೆ ಅನೇಕರು ಮಾಡಿದ್ದಾರೆ. ಇದನ್ನು ಬಿಟ್ಟು ಪೂರ್ಣ ಪ್ರಮಾಣದ ಚಲನಚಿತ್ರ ನಿರ್ಮಿಸಿದರೆ ಹೇಗೆ ಎಂಬ ಪ್ಲಾನ್ ನಮಗೆ ಬಂತು. ಆ ಸಮಯದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಬಾಸ್ಕರ್ ಹೆಗ್ಡೆ, ಉಪನ್ಯಾಸಕರುಗಳಾದ ಸುನಿಲ್ ಹೆಗ್ಡೆ, ಮಾಧವ ಹೊಳ್ಳ ಸೇರಿದಂತೆ ಸ್ನೇಹಿತರು ಪ್ರೋತ್ಸಾಹ ತುಂಬಿದರು. ಇದರ ಫಲವಾಗಿಯೇ ಇಂದು `ಬ್ಯೂಟಿಫುಲ್' ಚಲನಚಿತ್ರ ಬಿಡುಗಡೆಗೆ ತಯಾರಾಗಿದೆ'' ಎಂಬುವುದು ನಿರ್ದೇಶಕರಲ್ಲೊಬ್ಬರಾದ ಚೇತನ್ ಕೆ.ಸಿ ಅವರ ಮನದ ಮಾತು.

    English summary
    SDM College Journalism Students Making Kannada Short Movie 'Beautiful'.
    Monday, April 11, 2016, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X