twitter
    For Quick Alerts
    ALLOW NOTIFICATIONS  
    For Daily Alerts

    ಪಾಕ್ ಪರ ರಮ್ಯಾ ಹೇಳಿಕೆ: ಒನ್ಇಂಡಿಯಾ ಓದುಗರ ನಿಲುವು ಏನು?

    By Harshitha
    |

    ''ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ. ಅಲ್ಲಿಯ ಜನ ನಮ್ಮ ರೀತಿನೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಅನ್ಯೋನ್ಯವಾಗಿಯೇ ಮಾತನಾಡಿಸಿದರು'' ಅಂತ ಪಾಕ್ ಪರ ರಮ್ಯಾ ಕೊಟ್ಟ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಯ್ತು. ನಟ, ರಾಜಕಾರಣಿ ಜಗ್ಗೇಶ್ ಛೀಮಾರಿ ಹಾಕಿದರು.

    ಆದರೂ, ''ನಾನು ಮೋದಿ ವಿರೋಧಿಯಲ್ಲ, ದೇಶ ದ್ರೋಹಿ ಕೂಡ ಅಲ್ಲ, ಕ್ಷಮೆಯಾಚಿಸುವುದಿಲ್ಲ'' ಅಂತ ರಮ್ಯಾ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

    ರಮ್ಯಾ ಹೇಳಿಕೆ ಖಂಡನಾರ್ಹ ಅಂತ ಕೆಲವರು ತೊಡೆ ತಟ್ಟಿ ನಿಂತಿದ್ರೆ, ರಮ್ಯಾ ಪರವಾಗಿ ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

    ಪಾಕ್ ಪರ ರಮ್ಯಾ ಕೊಟ್ಟ ಹೇಳಿಕೆ ಕುರಿತು ನಿನ್ನೆ (ಆಗಸ್ಟ್ 22) 'ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ'ದಲ್ಲಿ POLL ಕಂಡಕ್ಟ್ ಮಾಡಿದ್ವಿ. ಅದಕ್ಕೆ ನಮ್ಮ ಓದುಗರಿಂದ ಬಂದ ಪ್ರತಿಕ್ರಿಯೆಯನ್ನ ಯಥಾವತ್ ಆಗಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಕೆಳಗಿರುವ ಫೋಟೋ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

    POLL ನಲ್ಲಿ ಏನಿತ್ತು?

    POLL ನಲ್ಲಿ ಏನಿತ್ತು?

    'ಪಾಕಿಸ್ತಾನ'ದ ಬಗ್ಗೆ ನಟಿ ರಮ್ಯಾ ನೀಡಿರುವ ಹೇಳಿಕೆ ಕುರಿತು ಕೆಳಗಿರುವ ನಾಲ್ಕು ಆಯ್ಕೆಗಳನ್ನ ನಮ್ಮ ಓದುಗರ ಮುಂದೆ ಇಟ್ಟಿದ್ವಿ..

    A ಸರಿಯಾಗಿದೆ, ಅಲ್ಲಿರುವವರು ನಮ್ಮ ಹಾಗೆ ಮನುಷ್ಯರು

    B ಮಾಧ್ಯಮಗಳಲ್ಲಿ ರಮ್ಯಾ ಹೇಳಿಕೆ ತಿರುಚಲಾಗಿದೆ

    C ಇದರಲ್ಲಿ ರಾಜಕೀಯ ಇದೆ

    D ದೇಶಪ್ರೇಮಿಗಳು ರಮ್ಯಾ ಹೇಳಿಕೆಯನ್ನ ಖಂಡಿಸಬೇಕು

    ಹೆಚ್ಚು ವೋಟ್ ಗಳು ಬಂದಿದ್ದು....

    ಹೆಚ್ಚು ವೋಟ್ ಗಳು ಬಂದಿದ್ದು....

    ''ದೇಶಪ್ರೇಮಿಗಳು ರಮ್ಯಾ ಹೇಳಿಕೆಯನ್ನು ಖಂಡಿಸಬೇಕು'' ಎಂಬುದಕ್ಕೆ ಹೆಚ್ಚಿನ ವೋಟ್ (54%) ಲಭ್ಯವಾಗಿದೆ. [ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ]

    ಸರಿಯಾಗಿದೆ ಎಂದವರು ಇದ್ದಾರೆ.!

    ಸರಿಯಾಗಿದೆ ಎಂದವರು ಇದ್ದಾರೆ.!

    ರಮ್ಯಾ ನೀಡಿರುವ ಹೇಳಿಕೆ ಸರಿಯಾಗಿದೆ. ಅಲ್ಲಿರುವವರು ನಮ್ಮ ಹಾಗೆ ಮನುಷ್ಯರು ಎಂಬುದಕ್ಕೆ (24%) ಮಂದಿ ವೋಟ್ ಮಾಡಿದ್ದಾರೆ.

    ರಾಜಕೀಯ ಇದ್ಯಾ.?

    ರಾಜಕೀಯ ಇದ್ಯಾ.?

    ನಮ್ಮ ಓದುಗರ ಪೈಕಿ 17% ಮಂದಿ ರಮ್ಯಾ ನೀಡಿರುವ ಹೇಳಿಕೆಯಲ್ಲಿ 'ರಾಜಕೀಯ ಇದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಪಾತ್ರ?

    ಮಾಧ್ಯಮಗಳ ಪಾತ್ರ?

    ಮಾಧ್ಯಮಗಳು ರಮ್ಯಾ ಹೇಳಿಕೆಯನ್ನು ತಿರುಚಿವೆ ಅಂತ ಕೇವಲ 4% ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ

    ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ

    ಪಾಕ್ ಪರ ರಮ್ಯಾ ಕೊಟ್ಟ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ 'ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ'ದಲ್ಲಿ ಕಂಡಕ್ಟ್ ಮಾಡಿದ್ದ POLL ನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮಿಶ್ರ ಪ್ರತಿಕ್ರಿಯೆ ಹೆಚ್ಚು

    ಮಿಶ್ರ ಪ್ರತಿಕ್ರಿಯೆ ಹೆಚ್ಚು

    ಹಲವರು ರಮ್ಯಾ ಹೇಳಿಕೆ ಸರಿ ಎಂದಿದ್ದರೆ, ಕೆಲವರು ಖಂಡಿಸಬೇಕು ಅಂತ ಎಂದಿದ್ದಾರೆ.

    ನಟಿ ಆಗಿ ಏನಾದ್ರೂ ಹೇಳ್ಬಹುದಿತ್ತು!

    ನಟಿ ಆಗಿ ಏನಾದ್ರೂ ಹೇಳ್ಬಹುದಿತ್ತು!

    ''ಆಕೆ ಒಂದು ನಟಿ ಆಗಿ ಏನಾದ್ರೂ ಹೇಳ್ಲಿ, ಅವರ ವೈಯುಕ್ತಿಕ ಅಭಿಪ್ರಾಯ ಅನ್ನಬಹುದು. ಆದರೆ ದುರಾದೃಷ್ಟವಶಾತ್ ಆಕೆ ಜನ ಪ್ರತಿನಿಧಿ, ಜನ ಪ್ರತಿನಿಧಿ ಆಗಿ ಈ ತರಹ ಹೇಳಿಕೆ ನೀಡುವುದು ತಪ್ಪು. ಯಾಕಂದ್ರೆ, ಮುಂದೆ ರಾಜಕೀಯದಲ್ಲಿ ಉನ್ನತ ಅಧಿಕಾರ ಸ್ವೀಕರಿಸಿದರೆ ಶತ್ರು ರಾಷ್ಟ್ರಗಳ ಪರ ಮಾತಾಡಿದ್ರೆ ನಮ್ಮ ದೇಶನ ನೆಲಸಮ ಮಾಡಿದ್ರೂ, ಇಂತವ್ರು ಏನು ಕ್ರಮ ಕೈಗೊಳ್ಳಲು ಮನಸ್ಸು ಮಾಡಲ್ಲ. ಆಕೆ ಸಾಮಾನ್ಯ ಮನುಷ್ಯಳಾಗಿ ಏನಾದ್ರೂ ಹೇಳ್ಲಿ ನಮ್ಗೇನು'' - ಪ್ರದೀಪ್ ತನ್ಮಯಿ

    ನಿಮ್ಮ ಅಭಿಪ್ರಾಯವನ್ನೂ ತಿಳಿಸಿ...

    ನಿಮ್ಮ ಅಭಿಪ್ರಾಯವನ್ನೂ ತಿಳಿಸಿ...

    ರಮ್ಯಾ ನೀಡಿರುವ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

    English summary
    According to the Poll Survey conducted by Oneindia Kannada and Filmibeat Kannada, Readers has given mixed opinion over Kannada Actress, EX MP, Congress Politician Ramya/Divya Spandana statement favouring Pakistan.
    Tuesday, August 23, 2016, 16:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X