»   » 'ಭಲೇ ಭಲೇ' ಎಂದ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ

'ಭಲೇ ಭಲೇ' ಎಂದ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ

Posted by:
Subscribe to Filmibeat Kannada

'ಮಾಸ್ಟರ್ ಪೀಸ್' ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಟಿ ಶಾನ್ವಿ ಶ್ರೀವಾಸತ್ಸವ್ ಅವರು ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಆಫರ್ ಗಿಟ್ಟಿಸಿಕೊಂಡಿದ್ದಾರೆ.

ಹೌದು ತೆಲುಗು ನಟ ನಾನಿ ಕಾಣಿಸಿಕೊಂಡಿದ್ದ ಟಾಲಿವುಡ್ ನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಭಲೇ ಭಲೇ ಮಗಾಡಿವೊಯ್' ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು, ಅದಕ್ಕೆ ನಾಯಕನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಳ್ಳುತ್ತಾರೆ ಎಂದು ನಾವು ಈ ಮೊದಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ.[ಚಿನ್ನದ ಹುಡುಗನಿಗೆ ಆಕ್ಷನ್-ಕಟ್ ಹೇಳ್ತಾರಂತೆ, ರಮೇಶ್ ಅರವಿಂದ್.!]

ಇದೀಗ ಚಿನ್ನದ ಹುಡುಗನಿಗೆ ನಾಯಕಿ ಕೂಡ ಫಿಕ್ಸ್ ಆಗಿದ್ದು, ತೆಲುಗಿನಲ್ಲಿ ಲಾವಣ್ಯ ತ್ರಿಪಾಟಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ 'ಮಾಸ್ಟರ್ ಪೀಸ್' ಖ್ಯಾತಿಯ ನಟಿ ಶಾನ್ವಿ ಶ್ರೀವಾತ್ಸವ್ ಅವರು ಮಾಡಲಿದ್ದಾರೆ.

ನಿರ್ದೇಶಕ ರಮೇಶ್ ಅರವಿಂದ್ ಆಕ್ಷನ್-ಕಟ್ ಹೇಳಲಿರುವ ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಅಲ್ಲು ಅರವಿಂದ್ ಅವರು ಇಬ್ಬರು ಒಂದಾಗಿ ಬಂಡವಾಳ ಹಾಕಲಿದ್ದಾರೆ.[ಗೋಲ್ಡನ್ ಸ್ಟಾರ್ ಗಣಿಗೆ 'ಭಲೇ ಭಲೇ' ಎಂದ ರಾಕ್ ಲೈನ್!]

'ಕನ್ನಡದಲ್ಲಿ ಇದು ನನ್ನ ಮುಂದಿನ ಹೊಸ ಪ್ರಾಜೆಕ್ಟ್ ನಾನು ನಿಜವಾಗ್ಲೂ ತುಂಬಾ ರೋಮಾಂಚನಗೊಂಡಿದ್ದೇನೆ'. ಈಗಾಗಲೇ 'ಮಾಸ್ಟರ್ ಪೀಸ್' ಸಿನಿಮಾ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ' ಎಂದು ಕನ್ನಡದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿರುವ ಶಾನ್ವಿ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

English summary
Actress Shanvi Srivastava will reprise Lavanya Tripathi's role in the yet to be titled Kannada remake of Telugu blockbuster Bhale Bhale Magadivoy. The remake, to be jointly produced by Rockline Venkatesh and Telugu renowned producer Allu Aravind, directed by Ramesh Aravind and will feature Ganesh in the lead.
Please Wait while comments are loading...

Kannada Photos

Go to : More Photos