»   » ಗಾಂಧೀ ತಾತ ನಗ್ತಾ ನಗ್ತಾ ಕೈತುಂಬಾ ಬಂದ್ರು

ಗಾಂಧೀ ತಾತ ನಗ್ತಾ ನಗ್ತಾ ಕೈತುಂಬಾ ಬಂದ್ರು

Posted by:
Subscribe to Filmibeat Kannada

Sharan's Rambo different advertisement
'ಗಾಂಧೀ ತಾತ ನಗ್ತಾ ನಗ್ತಾ ಕೈತುಂಬಾ ಬಂದ್ರು, Happy B'day ಗಾಂಧೀ ತಾತ' ಇದು Rambo ಚಿತ್ರತಂಡ ಇಂದಿನ ದೈನಿಕಕ್ಕೆ ನೀಡಿದ ಜಾಹೀರಾತು.

ಗಾಂಧೀ ಜಯಂತಿಯ ದಿನದಂದು ಚಿತ್ರದ ನಾಯಕ ಕಮ್ ನಿರ್ಮಾಪಕ ಶರಣ್, ಕೈಯಲ್ಲಿ ಸಾವಿರ ರೂಪಾಯಿಯ ನೋಟು ಹಿಡಿದು ಕೊಂಡು ನಗು ನಗುತ್ತಾ ಫೋಸ್ ನೀಡಿ ಚಿತ್ರದ ಯಶಸ್ಸನ್ನು ತೋರಿಸಿದ ವಿಶಿಷ್ಟ ಜಾಹೀರಾತು.

ಈ ವರ್ಷದ ಸರ್ಪ್ರೈಸ್ ಹಿಟ್ ಚಿತ್ರದ ಪಟ್ಟಿಗೆ ಸೇರಿರುವ Rambo ಚಿತ್ರ ನಾಲ್ಕನೇ ವಾರ ತನ್ನ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ರಾಜ್ಯಾದ್ಯಂತ 40ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಅಲ್ಲದೇ ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ, ಲಾಸ್ ಎಂಜಲೀಸ್ ನಗರದಲ್ಲೂ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಕನ್ನಡದ ಜನಪ್ರಿಯ ಹಾಸ್ಯ ನಟರಲ್ಲಿ ಒಬ್ಬರಾದ ಶರಣ್ ನಿರ್ಮಾಣಕ್ಕೆ ಕೈಹಾಕಿ ನಿರ್ಮಿಸಿದ್ದ ಈ ಚಿತ್ರ ಶರಣ್ ಗೆ ಉತ್ತಮ ಫಸಲು ತಂದುಕೊಟ್ಟಿದೆ. ಇದು ಶರಣ್ ಅವರ ನೂರನೇ ಚಿತ್ರ ಬೇರೆ.

ಕಥೆಯಲ್ಲಿ ಯಾವುದೇ ಹೊಸತನ ಕಂಡುಬರದಿದ್ದರೂ ನಿರೂಪಣೆಯಲ್ಲಿ ಹೊಸತನ ಹಾಗೂ ತಾಜಾತನ ಎರಡೂ ಹೊಂದಿದ್ದ ಈ ಚಿತ್ರವನ್ನು ಎಂ ಎಸ್ ಶ್ರೀನಾಥ್ ನಿರ್ದೇಶಿಸಿದ್ದರು.

ಚಿತ್ರಕ್ಕೆ ಅರ್ಜುನ್ ಜನ್ಯಾ ಹಿನ್ನೆಲೆ ಅವರ ಸಂಗೀತವಿದ್ದು ಹಾಗೂ ಎರಡು ಹಾಡುಗಳು 'ಮನೆ ತಂಕ ಬಾರೇ...' ಹಾಗೂ 'ಜಯಾ ಜಾಯಾ ಜಾಕೆಟ್ಟು.' ಹಾಡುಗಳು ಜನಪ್ರಿಯಗೊಂಡಿದ್ದವು.

English summary
Sharan's rambo movie one of the surprise hit of the year running successfully 4th week. Rambo team has given different advertisement in today's daily.
Please Wait while comments are loading...

Kannada Photos

Go to : More Photos