»   » ಶಿವಣ್ಣ 54: ಯಾರ್ಯಾರು ಏನೇನು ಗಿಫ್ಟ್ ಕೊಟ್ಟರು.?

ಶಿವಣ್ಣ 54: ಯಾರ್ಯಾರು ಏನೇನು ಗಿಫ್ಟ್ ಕೊಟ್ಟರು.?

Posted by:
Subscribe to Filmibeat Kannada

ವಯಸ್ಸು 54 ಆದರೂ, ಸ್ಯಾಂಡಲ್ ವುಡ್ ನಲ್ಲಿ ಶಿವರಾಜ್ ಕುಮಾರ್ ಗೆ ಇರುವ ಕ್ರೇಜ್ ಬಹುಶಃ ಯಾರಿಗೂ ಇಲ್ಲ. ಅದಕ್ಕೆ ಇಂದು (ಜುಲೈ 12) ವಿಜೃಂಭಣೆಯಿಂದ ನಡೆಯುತ್ತಿರುವ 'ಹ್ಯಾಟ್ರಿಕ್ ಹೀರೋ' ಹುಟ್ಟುಹಬ್ಬವೇ ಸಾಕ್ಷಿ.

ಎಂದಿನಂತೆ ನಾಗವಾರದಲ್ಲಿ ಇರುವ ನಿವಾಸದಲ್ಲೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿರುವ ಅಣ್ಣಾವ್ರ ಮಗನಿಗೆ ಶುಭಾಶಯ ಕೋರಲು ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. [ಶಿವರಾಜ್ ಕುಮಾರ್ ಗೆ ಅಭಿಮಾನಿಗಳು ಹೀಗೂ ಇರ್ತಾರೆ..!]

ಬರೀ ವಿಶ್ ಮಾಡೋಕೆ ಮಾತ್ರ ಅಲ್ಲ, ದೊಡ್ಡ ದೊಡ್ಡ ಕೇಕ್ ಗಳ ಸಮೇತ ಅಭಿಮಾನಿಗಳು ಹಾಜರ್ ಆಗುತ್ತಿದ್ದಾರೆ. ಇನ್ನೂ ಕೆಲವರು ಉಡುಗೊರೆಗಳನ್ನ ಹೊತ್ತು ತರುತ್ತಿದ್ದಾರೆ. ಮುಂದೆ ಓದಿ....

ಶಿವಣ್ಣನಿಗೆ 'ಟಗರು' ಉಡುಗೊರೆ ಸಿಕ್ತು.!

ಶಿವಣ್ಣನಿಗೆ 'ಟಗರು' ಉಡುಗೊರೆ ಸಿಕ್ತು.!

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ ನಲ್ಲಿ 'ಟಗರು' ಸಿನಿಮಾ ಸೆಟ್ಟೇರುತ್ತಿರುವುದು ನಿಮಗೆ ಗೊತ್ತೇ ಇದೆ. ಅದೇ ಖುಷಿಯಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಟಗರನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

'ಟಗರು' ಪೋಸ್ಟರ್ ನೋಡಿದ್ರಾ.?

'ಟಗರು' ಪೋಸ್ಟರ್ ನೋಡಿದ್ರಾ.?

ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ 'ಟಗರು' ಚಿತ್ರದ ಪೋಸ್ಟರ್ ನೋಡಿ...

ಮಕ್ಕಳು ಕೊಟ್ಟ ಉಡುಗೊರೆ ಏನು.?

ಮಕ್ಕಳು ಕೊಟ್ಟ ಉಡುಗೊರೆ ಏನು.?

ಶಿವಣ್ಣನ ಮಕ್ಕಳಾದ ನಿರುಪಮ ಹಾಗೂ ನಿವೇದಿತಾ, ಅಪ್ಪನ ಹುಟ್ಟುಹಬ್ಬಕ್ಕೆ ಟೀ ಶರ್ಟ್ ಗಿಫ್ಟ್ ಮಾಡಿದ್ದಾರಂತೆ.

ವಿನಯ್ ಕೂಡ ಉಡುಗೊರೆ ತಂದಿದ್ರು.!

ವಿನಯ್ ಕೂಡ ಉಡುಗೊರೆ ತಂದಿದ್ರು.!

ನಟ ವಿನಯ್ ರಾಜ್ ಕುಮಾರ್ ಕೂಡ ಶಿವಣ್ಣನಿಗೆ ಟೀ-ಶರ್ಟ್ ಹಾಗೂ ಕೂಲಿಂಗ್ ಗ್ಲಾಸ್ ಉಡುಗೊರೆ ನೀಡಿದ್ರು.

'ಶ್ರೀಕಂಠ' ಮೋಷನ್ ಪೋಸ್ಟರ್ ಬಿಡುಗಡೆ ಆಯ್ತು.!

'ಶ್ರೀಕಂಠ' ಮೋಷನ್ ಪೋಸ್ಟರ್ ಬಿಡುಗಡೆ ಆಯ್ತು.!

ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಮಂಜು ಸ್ವರಾಜ್ ನಿರ್ದೇಶಿಸಿರುವ 'ಶ್ರೀಕಂಠ' ಚಿತ್ರದ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ. [ಕಾಮನ್ ಮ್ಯಾನ್ ಆದ ಶಿವಣ್ಣನ ಸ್ಟೈಲ್ ನೋಡ್ರಲ್ಲಾ.!]

'ಶಂಕರ್ ಗುರು' ಪೋಸ್ಟರ್ ನೋಡಿ

'ಶಂಕರ್ ಗುರು' ಪೋಸ್ಟರ್ ನೋಡಿ

ಯುವ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಆಕ್ಷನ್ ಕಟ್ ಹೇಳುತ್ತಿರುವ ಶಿವಣ್ಣ ಅಭಿನಯಿಸಲು ಒಪ್ಪಿಕೊಂಡಿರುವ 'ಶಂಕರ್ ಗುರು' ಚಿತ್ರದ ಪೋಸ್ಟರ್ ಇಲ್ಲಿದೆ ನೋಡಿ...

ಶಿವಣ್ಣ ಏನಂದ್ರು.?

ಶಿವಣ್ಣ ಏನಂದ್ರು.?

''ಈ ವರ್ಷ ತುಂಬಾ ವಿಶೇಷ. ಮಗಳು ಮದುವೆ ಆಗಿ ಆಷಾಡಕ್ಕೆ ಅಂತ ಮನೆಗೆ ಬಂದಿದ್ದಾಳೆ. ನನ್ನ ಮದುವೆ ಆಗಿ ಮೊದಲ ಹುಟ್ಟುಹಬ್ಬಕ್ಕೆ ನಿರುಪಮಾ ಹುಟ್ಟಿದ್ದು. ಅದೇ ಖುಷಿ ಇವತ್ತಿಗೂ ಇದೇ ನನಗೆ. ಅಭಿಮಾನಿಗಳ ಪ್ರೀತಿ ಮರೆಯೋಕೆ ಸಾಧ್ಯ ಇಲ್ಲ. ಅಭಿಮಾನಿಗಳು ಟಗರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದನ್ನ ಸಾಕೋದಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ'' ಅಂತ ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವಣ್ಣ ಮಾತನಾಡಿದ್ರು.

ಬಿಡುಗಡೆಗೆ ಸಿದ್ಧವಾಗಿದೆ 'ಕಬೀರ'

ಬಿಡುಗಡೆಗೆ ಸಿದ್ಧವಾಗಿದೆ 'ಕಬೀರ'

ಶಿವಣ್ಣ ಅಭಿನಯದ 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

'ಬಂಗಾರದ ಮನುಷ್ಯ' ಶೂಟಿಂಗ್ ಶುರುವಾಗಲಿದೆ.!

'ಬಂಗಾರದ ಮನುಷ್ಯ' ಶೂಟಿಂಗ್ ಶುರುವಾಗಲಿದೆ.!

ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಶಿವಣ್ಣ ಸದ್ಯದಲ್ಲೇ 'ಬಂಗಾರ S/O ಬಂಗಾರದ ಮನುಷ್ಯ' ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

ಆಗಸ್ಟ್ 12 ಕ್ಕೆ 'ದಿ ವಿಲನ್' ಶುರು.!

ಆಗಸ್ಟ್ 12 ಕ್ಕೆ 'ದಿ ವಿಲನ್' ಶುರು.!

ಆಗಸ್ಟ್ 12 ರಂದು ಶಿವಣ್ಣ-ಸುದೀಪ್ ಒಟ್ಟಾಗಿ ನಟಿಸುವ 'ದಿ ವಿಲನ್' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. [ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

ನೀವೂ ವಿಶ್ ಮಾಡಿ....

ನೀವೂ ವಿಶ್ ಮಾಡಿ....

ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಶಿವರಾಜ್ ಕುಮಾರ್ ಗೆ ನೀವೂ ವಿಶ್ ಮಾಡಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ....

English summary
Kannada Actor Shiva Rajkumar is celebrating his 54th birthday today (July 12th). On this occasion, who gifted what.? Read the article to know.
Please Wait while comments are loading...

Kannada Photos

Go to : More Photos