»   » ಗಾಂಧಿನಗರದಲ್ಲಿ ದಾಖಲೆ ನಿರ್ಮಿಸಿದ ಶಿವಣ್ಣನ ಕಟೌಟ್

ಗಾಂಧಿನಗರದಲ್ಲಿ ದಾಖಲೆ ನಿರ್ಮಿಸಿದ ಶಿವಣ್ಣನ ಕಟೌಟ್

Subscribe to Filmibeat Kannada

ಇದೇ ವಾರ ತೆರೆಗೆ ಬರುವುದಕ್ಕೆ ರೆಡಿಯಾಗಿರುವ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ರಿಲೀಸ್ ಗೂ ಮೊದಲೇ ದಾಖಲೆಯೊಂದನ್ನ ಬರೆದಿದೆ. ಆದರೆ ಈ ಚಿತ್ರ ದಾಖಲೆ ಮಾಡಿರುವುದು ಹಣದ ಮೂಲಕ ಅಲ್ಲ, ಅಭಿಮಾನದ ಮೂಲಕ.!

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ರಿಲೀಸ್ ಪ್ರಯುಕ್ತ ದೊಡ್ಮನೆ ಭಕ್ತರು ಬರೋಬ್ಬರಿ 35 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಮಾಡಿದ್ದಾರೆ. ಕೆ.ಜಿ ರಸ್ತೆಯಲ್ಲಿ ಈ ರೀತಿಯ ಬೃಹತ್ ಕಟೌಟ್ ರಾರಾಜಿಸುತ್ತಿರುವುದು ಇದೇ ಮೊದಲ ಬಾರಿಗೆ.

Shiva Rajkumar's 'Bangara s/o Bangarada Manushya' makes cutout record

ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಈ ಕಟೌಟ್ ನ ಉದ್ಘಾಟಿಸಿದರು. ಶಿವರಾಜ್ ಕುಮಾರ್ ಜೊತೆಗೆ 'ಬಂಗಾರದ ಮನುಷ್ಯ' ಚಿತ್ರದ ರಾಜಣ್ಣ ಅವರ ಚಿತ್ರ ಕೂಡ ಕಟೌಟ್ ನಲ್ಲಿ ಕಂಗೊಳಿಸುತ್ತಿದೆ.

Shiva Rajkumar's 'Bangara s/o Bangarada Manushya' makes cutout record

ಅಂದಹಾಗೆ, ಅಖಿಲ ಕರ್ನಾಟಕ ಡಾ|| ಶಿವರಾಜ್ ಕುಮಾರ್ ಸೇನಾ ಸಮಿತಿ‌, ಗಂಡುಗಲಿ ಡಾ|| ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಸಂಘಗಳ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

English summary
Shiva Rajkumar's 'Bangara s/o Bangarada Manushya' makes cutout record in Bengaluru
Please Wait while comments are loading...

Kannada Photos

Go to : More Photos