»   » ಬಾಲಕೃಷ್ಣರ 100ನೇ ಚಿತ್ರದಲ್ಲಿ ಶಿವಣ್ಣ: ಫಸ್ಟ್ ಲುಕ್ ರಿಲೀಸ್

ಬಾಲಕೃಷ್ಣರ 100ನೇ ಚಿತ್ರದಲ್ಲಿ ಶಿವಣ್ಣ: ಫಸ್ಟ್ ಲುಕ್ ರಿಲೀಸ್

Posted by:
Subscribe to Filmibeat Kannada

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅವರ 100ನೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆದ್ರೆ, ಅದು ಯಾವಾಗ, ಯಾವ ಪಾತ್ರದಲ್ಲಿ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಈಗ ಆ ಎಲ್ಲ ಕುತೂಹಲಕ್ಕೆ ತೆರೆಬಿದ್ದಿದೆ.

ಹೌದು, ತೆಲುಗು ಅಂಗಳಲ್ಲಿ ನಮ್ಮ ಹ್ಯಾಟ್ರಿಕ್ ಹೀರೋ ಅಬ್ಬರಿಸಿದ್ದಾರೆ. ಸದ್ದಿಲ್ಲದೇ ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ' ಚಿತ್ರದಲ್ಲಿ ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಅಭಿನಯಿಸಿ ಬಂದಿದ್ದಲ್ಲದೇ, ಈಗ ಶಿವಣ್ಣನ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಗೌತಮಿಪುತ್ರ ಶಾತಕರ್ಣಿ' ಚಿತ್ರತಂಡ, ಶಿವಣ್ಣನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಖತ್ ಕ್ರೇಜ್ ಹುಟ್ಟಿಸಿದೆ.

ಬಾಲಯ್ಯನ 100ನೇ ಚಿತ್ರದಲ್ಲಿ ಶಿವಣ್ಣ

ಬಾಲಯ್ಯನ 100ನೇ ಚಿತ್ರದಲ್ಲಿ ಶಿವಣ್ಣ

ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ' ಸಿನಿಮಾದಲ್ಲಿ, ಕರುನಾಡ ಚಕ್ರವರ್ತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೆ ಆಂಧ್ರಗೆ ಹೋಗಿದ್ದ ಶಿವಣ್ಣ, ಸೈಲಾಂಟ್ ಆಗಿ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾರೆ.[ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.!]

ಭರ್ಜರಿಯಾಗಿದೆ ಶಿವಣ್ಣನ ಫಸ್ಟ್ ಲುಕ್

ಭರ್ಜರಿಯಾಗಿದೆ ಶಿವಣ್ಣನ ಫಸ್ಟ್ ಲುಕ್

ಬಾಲಯ್ಯನ 100ನೇ ಚಿತ್ರದಲ್ಲಿ ಶಿವಣ್ಣನ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಭರ್ಜರಿಯಾಗಿದೆ. 2ನೇ ಶತಮಾನದ ಕಥೆಯಾದಾರಿತ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ರಾಜನ ಗೆಟಪ್ ಆಕರ್ಷಣೆಯಾಗಿದೆ.

ವಾರಿಯರ್ ಪಾತ್ರದಲ್ಲಿ ಸೆಂಚುರಿಸ್ಟಾರ್

ವಾರಿಯರ್ ಪಾತ್ರದಲ್ಲಿ ಸೆಂಚುರಿಸ್ಟಾರ್

ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು 'ಕಾಳಹಸ್ತಿಶ್ವರ' ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಕಾಳಹಸ್ತಿಶ್ವರ' ಪಾತ್ರದ ಏನು ಎಂಬುದು ನಿರ್ದಿಷ್ಟವಾಗಿ ಗೊತ್ತಿಲ್ಲದೇ ಹೋದರು, ಅವರು ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ತೆಲುಗಿನಲ್ಲಿ ಮೊದಲ ಚಿತ್ರ

ತೆಲುಗಿನಲ್ಲಿ ಮೊದಲ ಚಿತ್ರ

ಕನ್ನಡದಲ್ಲಿ ಸುಮಾರು 110ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವಣ್ಣ, ಬೇರೆ ಭಾಷೆಯಲ್ಲಿ ಒಂದು ಸಿನಿಮಾವನ್ನ ಮಾಡಿರಲಿಲ್ಲ. ರಾಮ್ ಗೋಪಾಲ್ ವರ್ಮ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಕನ್ನಡದಲ್ಲಿ ತಯಾರಾಗಿ ತೆಲುಗಿಗೆ ಡಬ್ ಮಾಡಲಾಗಿತ್ತು. ಹೀಗಾಗಿ, 'ಗೌತಮಿ ಪುತ್ರ ಶಾತಕರ್ಣಿ' ಶಿವರಾಜ್ ಕುಮಾರ್ ಪರಭಾಷೆಯಲ್ಲಿ ಅಭಿನಯಿಸುತ್ತಿರುವ ಮೊದಲ ಚಿತ್ರವಾಗಿದೆ.

ಸ್ನೇಹಪೂರ್ವಕ ನಟನೆ

ಸ್ನೇಹಪೂರ್ವಕ ನಟನೆ

ತೆಲುಗು ನಟ ಬಾಲಕೃಷ್ಣ ಹಾಗೂ ಕರುನಾಡು ಚಕ್ರವರ್ತಿ ಶಿವರಾಜ್ ಕುಮಾರ್ ಇಬ್ಬರು ಗೆಳೆಯರು. ಮೊದಲಿನಿಂದಲೂ ಬಾಲಯ್ಯ ಹಾಗೂ ಶಿವಣ್ಣನ ನಡುವೆ ಉತ್ತಮ ಸ್ನೇಹಬಾಂಧವ್ಯವಿದೆ. ಕನ್ನಡದಲ್ಲಿ ಈಗಾಗಲೇ 100 ಸಿನಿಮಾಗಳನ್ನ ಪೂರೈಸಿರುವ ಶಿವರಾಜ್ ಕುಮಾರ್, ಬಾಲಕೃಷ್ಣ ಅವರ 100ನೇ ಸಿನಿಮಾಗೆ ಸಾಥ್ ಕೊಡುತ್ತಿರುವುದು ಕೂಡ ಸ್ನೇಹಕೋಸ್ಕರ.

ಐತಿಹಾಸಿಕ ಚಿತ್ರ 'ಗೌತಮಿಪುತ್ರ ಶಾತಕರ್ಣಿ'

ಐತಿಹಾಸಿಕ ಚಿತ್ರ 'ಗೌತಮಿಪುತ್ರ ಶಾತಕರ್ಣಿ'

2ನೇ ಶತಮಾನದ ಶಾತವಾಹನ ದೊರೆ 'ಗೌತಮಿಪುತ್ರ ಶಾತಕರ್ಣಿ'ಯ ಕಥೆಯಾಧಾರಿತ ಸಿನಿಮಾ ಇದು. 'ಗೌತಮಿಪುತ್ರ ಶಾತಕರ್ಣಿ' ಪಾತ್ರದಲ್ಲಿ ಬಾಲಕೃಷ್ಣ ಅಭಿನಯಿಸಿದ್ದು, ಶಿವರಾಜ್ ಕುಮಾರ್, ಶ್ರೇಯಾಶರಣ್, ಹೇಮಮಾಲಿನಿ, ಕಬೀರ್ ಬೇಡಿ ಸೇರಿದಂತೆ ಹಲವು ದಿಗ್ಗಜ ಕಲಾವಿದರು ಈ ಚಿತ್ರದಲ್ಲಿ ಅಭಿನಯಸುತ್ತಿದ್ದಾರೆ.

ಮುಂದಿನ ವರ್ಷ ರಿಲೀಸ್

ಮುಂದಿನ ವರ್ಷ ರಿಲೀಸ್

ಎಲ್ಲಾ ಅಂದುಕೊಂಡಂತೆ ಆದ್ರೆ, ಮುಂದಿನ ವರ್ಷದ ಆರಂಭದಲ್ಲಿ 'ಗೌತಮಿಪುತ್ರ ಶಾತಕರ್ಣಿ' ಸಿನಿಮಾ ತೆರೆಗೆ ಬರಲಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಟಾಲಿವುಡ್ ಪ್ರೇಕ್ಷಕರಿಗೆ ಮಾತ್ರವಲ್ಲದೇ, ಸ್ಯಾಂಡಲ್ ವುಡ್ ಅಭಿಮಾನಿಗಳೂ ಈ ಸಿನಿಮಾಗಾಗಿ ಕಾಯಬೇಕಿದೆ.

    English summary
    Kannada Actor Shiva Rajkumar's first look poster release from the epic historical film “Gautamiputra Satakarni”. The film is Nandamuri Balakrishna's 100th film as an actor and Shivarajakumar is seen in a special role in this film.
    Please Wait while comments are loading...

    Kannada Photos

    Go to : More Photos