»   » ಇದು 'ಏಪ್ರಿಲ್ ಫೂಲ್ ಸುದ್ದಿ' ಆಗದೇ ಇದ್ರೆ ಸಾಕು.!

ಇದು 'ಏಪ್ರಿಲ್ ಫೂಲ್ ಸುದ್ದಿ' ಆಗದೇ ಇದ್ರೆ ಸಾಕು.!

Posted by:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ 'ದಿ ವಿಲನ್'.

'ಜೋಗಿ' ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದ ಫೋಟೋಶೂಟ್ ಈಗಾಗಲೇ ಮುಗಿದಿದೆ. ಈಗ ಇದೇ ಫೋಟೋಶೂಟ್ ಗೆ ಸಂಬಂಧಪಟ್ಟ ಹಾಗೆ ಒಂದು ಸುದ್ದಿ ಹೊರಬಿದ್ದಿದೆ. ಅದು 'ಏಪ್ರಿಲ್ ಫೂಲ್ ಸುದ್ದಿ' ಆಗದೇ ಇದ್ರೆ.. ಅಭಿಮಾನಿಗಳಿಗೆ ಖುಷಿಯೋ, ಖುಷಿ.!

ಏನು ಆ ನ್ಯೂಸು.?

ಏನು ಆ ನ್ಯೂಸು.?

ಕಿಚ್ಚ ಸುದೀಪ್ ರವರಿಗೆ ಹೊಸ ಹೇರ್ ಸ್ಟೈಲ್ ಮಾಡಿಸಿ, ಶಿವಣ್ಣ ರವರಿಗೆ ಡಿಫರೆಂಟ್ ಲುಕ್ ಕೊಟ್ಟು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದ ನಿರ್ದೇಶಕ ಪ್ರೇಮ್, ಏಪ್ರಿಲ್ 1 ರಂದು 'ದಿ ವಿಲನ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುತ್ತಾರಂತೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

ಏಪ್ರಿಲ್ ಫೂಲ್ ಅಲ್ಲ ತಾನೇ.?

ಏಪ್ರಿಲ್ ಫೂಲ್ ಅಲ್ಲ ತಾನೇ.?

ಏಪ್ರಿಲ್ 1 ಅಂದ ಕೂಡಲೆ ಸಹಜವಾಗಿ ಎಲ್ಲರಿಗೂ ಥಟ್ ಅಂತ ನೆನಪಾಗುವುದು 'ಏಪ್ರಿಲ್ ಫೂಲ್'. ಹೀಗಾಗಿ, ಏಪ್ರಿಲ್ 1 ರಂದು 'ದಿ ವಿಲನ್' ಚಿತ್ರದ ಫಸ್ಟ್ ಲುಕ್ ಔಟ್ ಆಗಲಿದೆ ಎಂದು ಹೇಳಿ 'ಏಪ್ರಿಲ್ ಫೂಲ್' ಮಾಡದೇ ಇದ್ರೆ ಸಾಕು ಅಂತ ಶಿವಣ್ಣ ಹಾಗೂ ಕಿಚ್ಚ ಫ್ಯಾನ್ಸ್ ಕೇಳಿಕೊಳ್ಳುತ್ತಿದ್ದಾರೆ.!

ಯಾರು ವಿಲನ್.?

ಯಾರು ವಿಲನ್.?

'ದಿ ವಿಲನ್' ಚಿತ್ರದಲ್ಲಿ 'ವಿಲನ್' ಯಾರು ಎಂಬ ಕುತೂಹಲ ಎಲ್ಲರಲ್ಲಿಯೂ ಕಾಡುತ್ತಿದೆ. ಆ ಕುತೂಹಲಕ್ಕೆ 'ಫಸ್ಟ್ ಲುಕ್' ಬ್ರೇಕ್ ಹಾಕುತ್ತಾ ಅಂತ ಕಾದು ನೋಡಬೇಕು.!

ಚಿತ್ರೀಕರಣ ಪ್ರಾರಂಭ ಯಾವಾಗ.?

ಚಿತ್ರೀಕರಣ ಪ್ರಾರಂಭ ಯಾವಾಗ.?

ಇಷ್ಟೊತ್ತಿಗಾಗಲೇ, 'ದಿ ವಿಲನ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿ ಶೂಟಿಂಗ್ ಆರಂಭವಾಗಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ತಡವಾಗುತ್ತಿದೆ. ಅಂದ್ಹಾಗೆ, ನಾಯಕಿ ಪಾತ್ರಕ್ಕಿನ್ನೂ ನಿರ್ದೇಶಕ ಪ್ರೇಮ್ ಹುಡುಕಾಟದಲ್ಲಿದ್ದಾರೆ.

English summary
Kannada Actor Shiva Rajkumar and Sudeep starrer 'The Villain' first look to release on April 1st.
Please Wait while comments are loading...

Kannada Photos

Go to : More Photos