twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನ 'ಶಿವಲಿಂಗ'ಕ್ಕೂ ತಟ್ಟಿತೇ ಥಿಯೇಟರ್ ಸಮಸ್ಯೆ ಬಿಸಿ

    By Suneetha
    |

    ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಕನ್ನಡ ಚಿತ್ರಗಳೇ ಥಿಯೇಟರ್ ಸಮಸ್ಯೆ ಎದುರಿಸುತ್ತಿರುವುದು ಇಂದು ನಿನ್ನೆಯ ಸಮಸ್ಯೆ ಅಲ್ಲಾ. ಬದ್ಲಾಗಿ ಬಹಳ ವರ್ಷಗಳಿಂದಲೂ ಇದು ಮುಂದುವರಿಯುತ್ತಾ ಬಂದಿದೆ.

    ಅಂದಹಾಗೆ ಇದೆಲ್ಲಾ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳಿಗೂ ಈ ಸಮಸ್ಯೆ ಸಂಭವಿಸುತ್ತಾ?, ಅನ್ನೋದು ಸದ್ಯಕ್ಕೆ ಎಲ್ಲರಲ್ಲಿ ಉದ್ಭವಿಸಿರುವ ಪ್ರಶ್ನೆ. ಹೌದು ಸದ್ಯಕ್ಕೆ ಈ ಥಿಯೇಟರ್ ಸಮಸ್ಯೆ ಎದುರಿಸುತ್ತಿರುವ ಸ್ಟಾರ್ ನಟ ಬೇರಾರು ಅಲ್ಲ, ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.[ಅಬ್ಬಾ! ಶಿವಣ್ಣ ಕಟೌಟ್ ಗೆ 1.25 ಲಕ್ಷ ರೂಪಾಯಿ ಮೌಲ್ಯದ ರುದ್ರಾಕ್ಷಿ ಮಾಲೆ]

    'ಚಿತ್ರ ತಯಾರಿಸುವುದು ಅಷ್ಟೇ ಅಲ್ಲ, ಅದನ್ನು ಬಿಡುಗಡೆ ಮಾಡುವುದು ಕೂಡ ಅದಕ್ಕಿಂತ ದೊಡ್ಡ ಕಷ್ಟ' ಎನ್ನುವ ಮಾತು ಗಾಂಧಿನಗರದಲ್ಲಿ ಇರುವಂತೆ. ವಿಶೇಷವಾಗಿ ನಮ್ಮ ಕನ್ನಡ ಚಿತ್ರಗಳು ಥಿಯೇಟರ್ ಸಮಸ್ಯೆ ಎದುರಿಸುತ್ತಿವೆ.

    ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ವಾರಕ್ಕೆ ಅಬ್ಬಾಬ್ಬ ಅಂದ್ರೂ 6 ರಿಂದ 8 ಸಿನಿಮಾಗಳು ತೆರೆ ಕಾಣುತ್ತಿವೆ. ಪರಭಾಷೆಗಳ ಹಾವಳಿಗಳ ನಡುವೆ ನಮ್ಮ ಕನ್ನಡ ಚಿತ್ರಗಳನ್ನು ಉಳಿಸಿಕೊಳ್ಳುವುದೇ ಕಷ್ಟ ಸಾಧ್ಯ.['ಶಿವಲಿಂಗ' ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡೋ ಸಿನಿಮಾವಂತೆ]

    ಇದೀಗ ನಮ್ಮ ಸೆಂಚುರಿ ಸ್ಟಾರ್ ಶಿವಣ್ಣ ಅವರಿಗೂ ಇದರ ಬಿಸಿ ತಟ್ಟಿದ್ದು, ಈ ವಾರ ಬಿಡುಗಡೆ ಆಗುತ್ತಿರುವ ಶಿವಣ್ಣ ಅವರ 'ಶಿವಲಿಂಗ' ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಎದುರಾಗಿದೆ.

    ಇನ್ನು ಶಿವರಾಜ್ ಕುಮಾರ್ ಅವರು ಚಿತ್ರರಂಗದ ವ್ಯವಸ್ಥೆಯ ಬಗ್ಗೆ ಕಿಡಿ ಕಿಡಿ ಆಗಿದ್ದಾರೆ. 'ನಮ್ಮ ಚಿತ್ರಗಳಿಗೂ ಥಿಯೇಟರ್ ಸಮಸ್ಯೆ ಇದೆ. ನಮಗೆ ಸಮಸ್ಯೆ ಆದಾಗ ಯಾರು ಕೂಡ ಕೇಳಲು ಬರೋದಿಲ್ಲ. ಹಾಗಂತ ಥಿಯೇಟರ್ ಸಮಸ್ಯೆ ಇದೆ ಎಂದು ನಾವು ಬರೀ ಅದನ್ನೇ ಹೇಳುತ್ತಾ ಕೂರೋದಿಲ್ಲ. ಸಿನಿಮಾ ರಿಲೀಸ್ ಆಗಿಯೇ ಆಗುತ್ತದೆ ಎಂದು ಶಿವಣ್ಣ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.[ರಿಲೀಸ್ ಗೂ ಮುನ್ನವೇ ಶಿವಣ್ಣ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್]

    ಪಿ.ವಾಸು ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ ಥ್ರಿಲ್ಲರ್-ಮಿಸ್ಟರಿ 'ಶಿವಲಿಂಗ' ಸಿನಿಮಾ (ಫೆಬ್ರವರಿ 12) ಇದೇ ಶುಕ್ರವಾರ ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.

    English summary
    Kannada Actor Shiva Rajkumar's 'Shivalinga' movie release this Friday (Feb 12th). Actor Shiva Rajkumar, Actress Vedika starrer Kannada Movie 'Shivalinga' also facing theatre problem. The movie is directed by P.Vasu.
    Thursday, February 11, 2016, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X