twitter
    For Quick Alerts
    ALLOW NOTIFICATIONS  
    For Daily Alerts

    ಅಬ್ಬಾ! ಶಿವಣ್ಣ ಕಟೌಟ್ ಗೆ 1.25 ಲಕ್ಷ ರೂಪಾಯಿ ಮೌಲ್ಯದ ರುದ್ರಾಕ್ಷಿ ಮಾಲೆ

    By Suneetha
    |

    ಸಾಮಾನ್ಯವಾಗಿ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಹೀರೋ ಒಬ್ಬರ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ ಅಭಿಮಾನಿಗಳು ಭಯಂಕರ ಬ್ಯುಸಿ ಆಗಿ ಬಿಡುತ್ತಾರೆ. ತಮ್ಮ ನೆಚ್ಚಿನ ಹೀರೋನ ಬೃಹತ್ ಕಟೌಟ್ ಹಾಕೋದೇನು, ಅದಕ್ಕೆ ವಿಶೇಷ ಶೃಂಗಾರ ಮಾಡೋದು ಎಲ್ಲಾ ಮಾಮೂಲಿಯಾಗಿ ಗಾಂಧಿನಗರದಲ್ಲಿ ಆಗಾಗ ನಡೆಯುವ ವಿಷಯ.

    ಇನ್ನು ಇದೇ ವಾರ ಬಿಡುಗಡೆ ಆಗುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ಶಿವಲಿಂಗ' ಸಿನಿಮಾ ಕೂಡ ಇದಕ್ಕೆ ಹೊರತಾಗಿಲ್ಲ.['ಶಿವಲಿಂಗ' ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡೋ ಸಿನಿಮಾವಂತೆ]

    ಅಂದಹಾಗೆ ಫೆಬ್ರವರಿ 12 ಕ್ಕೆ ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ಬಿಡುಗಡೆ ಆಗುತ್ತಿರುವ ಶಿವಣ್ಣ ಅವರ 'ಶಿವಲಿಂಗ' ಚಿತ್ರದ ಬಗ್ಗೆ ಕೂಡ ಅಭಿಮಾನಿಗಳಲ್ಲಿ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಚಿತ್ರದ ಬಗ್ಗೆ ಯಾವ ರೀತಿ ವಿಭಿನ್ನವಾಗಿ ಪ್ರಚಾರ ಕೈಗೊಳ್ಳಬಹುದು ಎಂಬುದರ ಬಗ್ಗೆ ಅಭಿಮಾನಿ ಸಂಘದವರು ಭಾರಿ ಚರ್ಚೆ ನಡೆಸುತ್ತಿದ್ದಾರೆ.['ಮಾಸ್ಟರ್ ಪೀಸ್' 50 ದಿನ ಆದ ಕೂಡಲೇ 'ಶಿವಲಿಂಗ' ಪ್ರತಿಷ್ಠಾಪನೆ]

    ಚಿತ್ರಮಂದಿರದ ಎದುರು ಚಿತ್ರದ ನಾಯಕನ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡೋದೆಲ್ಲಾ ಸಾಮಾನ್ಯ ಸಂಗತಿ. ಆದರೆ ಶಿವಣ್ಣ ಅವರ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೃಹತ್ ಕಟೌಟ್ ಗೆ ರುದ್ರಾಕ್ಷಿ ಮಾಲೆ ಹಾಕುವ ಪ್ಲ್ಯಾನ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

    27 ಅಡಿ ಎತ್ತರದ ಕಟೌಟ್

    27 ಅಡಿ ಎತ್ತರದ ಕಟೌಟ್

    ಸುಮಾರು 27 ಅಡಿ ಎತ್ತರದ ಶಿವಣ್ಣ ಅವರ ಬೃಹತ್ ಕಟೌಟ್ ಅನ್ನು ಅವರ ಅಭಿಮಾನಿ ಸಂಘದವರು ಬರೋಬ್ಬರಿ ತಯಾರು ಮಾಡಿದ್ದು ಇದಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಿ ರುದ್ರಾಕ್ಷಿ ಮಾಲೆ ಹಾಕಲಿದ್ದಾರೆ. ಸುಮಾರು 20 ದಿನಗಳಿಂದ ಇದರ ಕೆಲಸ ನಡೆಯುತ್ತಿದ್ದು, ಶಿವಣ್ಣ ಅವರು ಬಿಳಿ ಬಣ್ಣದ ಸಿಲ್ಕ್ ಪಂಚೆ ಉಟ್ಟ ಸಂಪ್ರದಾಯಬದ್ಧ ಕಟೌಟ್ ಹಾಕಲಿದ್ದಾರೆ.[ರಿಲೀಸ್ ಗೂ ಮುನ್ನವೇ ಶಿವಣ್ಣ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್]

     ಸಂತೋಷ್ ಚಿತ್ರಮಂದಿರದಲ್ಲಿ ಬೃಹತ್ ಕಟೌಟ್

    ಸಂತೋಷ್ ಚಿತ್ರಮಂದಿರದಲ್ಲಿ ಬೃಹತ್ ಕಟೌಟ್

    ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ ಶಿವಣ್ಣ ಅವರ 'ಶಿವಲಿಂಗ' ಸಿನಿಮಾ ಬಿಡುಗಡೆ ಆಗಲಿದ್ದು, ಚಿತ್ರಮಂದಿರದ ಎದುರು 27 ಅಡಿ ಎತ್ತರದ ಬೃಹತ್ ಕಟೌಟ್ ಹಾಕಲಿದ್ದು, ಇದಕ್ಕಾಗಿ 'ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ' ಸುಮಾರು 1.25 ಲಕ್ಷ ರೂಪಾಯಿ ವ್ಯಯಿಸಿ ರುದ್ರಾಕ್ಷಿ ಮಾಲೆ ಹಾಕಲಿದ್ದಾರೆ.

    ರುದ್ರಾಕ್ಷಿ ಪ್ರಿಯ ಶಿವ

    ರುದ್ರಾಕ್ಷಿ ಪ್ರಿಯ ಶಿವ

    ಈ ವಿಚಾರದ ಬಗ್ಗೆ ಮಾತನಾಡಿದ ಅಭಿಮಾನಿ ಸಂಘದ ಅಧ್ಯಕ್ಷ ಹೊನ್ನಯ್ಯ ಗೌಡ 'ರುದ್ರಾಕ್ಷಿ' ಶಿವ ದೇವನಿಗೆ ವಿಶೇಷ ಮತ್ತು ಪ್ರಿಯವಾದದ್ದು, ನಮ್ಮ ನೆಚ್ಚಿನ ನಾಯಕನ ಸಿನಿಮಾದ ಹೆಸರು ಕೂಡ 'ಶಿವಲಿಂಗ' ಆಗಿರುವುದರಿಂದ ಕಟೌಟ್ ಗೆ ರುದ್ರಾಕ್ಷಿ ಮಾಲೆ ಹಾಕೋದು ಸೂಕ್ತ ಎಂದೆನಿಸಿ ಈ ಪ್ರಯೋಗ ಮಾಡಿದ್ದೇವೆ' ಎಂದಿದ್ದಾರೆ.

    ಕರ್ನಾಟಕದ ಇತರೇ ಭಾಗದಲ್ಲೂ ಸಿದ್ಧತೆ

    ಕರ್ನಾಟಕದ ಇತರೇ ಭಾಗದಲ್ಲೂ ಸಿದ್ಧತೆ

    ಬರೀ ಸಂತೋಷ್ ಚಿತ್ರಮಂದಿರ ಮಾತ್ರವಲ್ಲದೇ, ಕರ್ನಾಟಕದ ಇತರೇ ಪ್ರಮುಖ ಚಿತ್ರಮಂದಿರಗಳಲ್ಲಿ ಕೂಡ ಇದೇ ರೀತಿ ಬೃಹತ್ ಕಟೌಟ್ ಹಾಕಿ ಸಂಭ್ರಮಿಸಲು ಅಭಿಮಾನಿಗಳ ಸಂಘ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

    ಫೆಬ್ರವರಿ 12 ಕ್ಕೆ ಭರ್ಜರಿ ರಿಲೀಸ್

    ಫೆಬ್ರವರಿ 12 ಕ್ಕೆ ಭರ್ಜರಿ ರಿಲೀಸ್

    ನಿರ್ದೇಶಕ ಪಿ.ವಾಸು ಅವರು ಆಕ್ಷನ್-ಕಟ್ ಹೇಳಿರುವ 'ಶಿವಲಿಂಗ' ಚಿತ್ರದಲ್ಲಿ ಶಿವಣ್ಣ ಅವರು ಸಿ.ಐ.ಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಜೊತೆ ನಟಿ ವೇದಿಕಾ ಅವರು ಇದೇ ಮೊದಲ ಬಾರಿಗೆ ಮಿಂಚಿದ್ದಾರೆ. ಫೆಬ್ರವರಿ 12 ಕ್ಕೆ ಇಡೀ ಕರ್ನಾಟಕದಾದ್ಯಂತ 'ಶಿವಲಿಂಗ' ಪ್ರತಿಷ್ಟಾಪನೆ ಆಗಲಿದೆ.

    English summary
    Kannada Actor Shiva Rajkumar's 'Shivalinga' movie release this Friday (Feb 12th). Ardent fans of Shivanna are making the release even more unique by getting a rudraksha mala made for the 75-foot cutout of Shivarajkumar. To be installed at the main theatre, Santosh in Majestic, Akhila Karanataka Shivarajkumar’s Abhimanagala Sangha is spending around Rs 1.25 lakh for the rudraksha and garlands.
    Wednesday, February 10, 2016, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X