»   » ಪುನೀತ್-ಶಿವಣ್ಣ-ರಾಘಣ್ಣ ಚಿತ್ರಕ್ಕೆ ಮುಹೂರ್ತ ಫಿಕ್ಸ್..!

ಪುನೀತ್-ಶಿವಣ್ಣ-ರಾಘಣ್ಣ ಚಿತ್ರಕ್ಕೆ ಮುಹೂರ್ತ ಫಿಕ್ಸ್..!

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್. ಅಣ್ಣಾವ್ರ ಈ ಮೂವರು ಕುಡಿಗಳು ಒಂದಾಗಿ ಒಂದೊಳ್ಳೆ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ವರ್ಷಗಳಿಂದಲೂ ಹರಿದಾಡುತ್ತಲೇ ಇದೆ.

''ಉತ್ತಮ ಚಿತ್ರಕಥೆ ಸಿಕ್ಕರೆ ನಾವು ಸಿದ್ಧ'' ಅಂತ ಶಿವಣ್ಣ ಮತ್ತು ಅಪ್ಪು ಕೂಡ ಈ ಹಿಂದೆ ಹೇಳಿಕೆ ನೀಡಿದ್ದರು. ಅಂತಹ ಅತ್ಯುತ್ತಮ ಚಿತ್ರಕಥೆಯನ್ನ ಹೊತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ರವರನ್ನ ಒಟ್ಟಾಗಿಸುವುದಕ್ಕೆ ಸದ್ಯ ತಯಾರಾಗಿ ನಿಂತಿರುವುದು ಸ್ಟಂಟ್ ಮಾಸ್ಟರ್ ರವಿವರ್ಮ.

ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ರವಿವರ್ಮ, ಶಿವಣ್ಣ-ಅಪ್ಪು ಒಟ್ಟಾಗಿರುವ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಿದ್ದಾರೆ. ಹಾಗೆ, 'PRODUCTION-A' ಬಗ್ಗೆ ನಿರ್ದೇಶಕ ರವಿವರ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಮುಂದೆ ಓದಿ.......

'ಮುತ್ತುರಾಜ'ನ ಕುಡಿಗಳು ಒಂದಾಗಿರುವ 'PRODUCTION-A'

'ಮುತ್ತುರಾಜ'ನ ಕುಡಿಗಳು ಒಂದಾಗಿರುವ 'PRODUCTION-A'

ಹ್ಯಾಟ್ರಿಕ್ ಹೀರೋ ಶಿವಣ್ಣನ ಸಿನಿಮಾ ಅಂದ್ರೆ ಗಾಂಧಿನಗರದ ನೆಲ ನಡುಗುತ್ತೆ. ಇನ್ನೂ, ಪವರ್ ಸ್ಟಾರ್ ಸಿನಿಮಾ ಬರ್ತಿದೆ ಅಂದ್ರೆ ಅಭಿಮಾನಿಗಳ ಎದೆ ಬಡಿತ ಜೋರಾಗುತ್ತೆ. ಸ್ಯಾಂಡಲ್ ವುಡ್ ನ ಈ ಎರಡು ಮುತ್ತುಗಳು ಪ್ರಪ್ರಥಮ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು 'PRODUCTION-A' ಚಿತ್ರದಲ್ಲಿ.

'PRODUCTION-A' ಫಸ್ಟ್ ಲುಕ್ ಪೋಸ್ಟರ್ ಔಟ್

'PRODUCTION-A' ಫಸ್ಟ್ ಲುಕ್ ಪೋಸ್ಟರ್ ಔಟ್

ರವಿವರ್ಮ ಆಕ್ಷನ್ ಕಟ್ ಹೇಳುತ್ತಿರುವ ಅಣ್ಣಾವ್ರ ಎರಡು ಸುಪುತ್ರರು ಒಂದಾಗಿರುವ 'PRODUCTION-A' ಚಿತ್ರದ ಫಸ್ಟ್ ಲುಕ್ಪೋಸ್ಟರ್ ಔಟ್ ಆಗಿದೆ. ಕೈಲಿ ಗನ್ ಹಿಡಿದು ಅಪ್ಪು ಖಡಕ್ ಪೋಸ್ ನೀಡಿದ್ರೆ, ಶಿವಣ್ಣ ಕೂಡ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಏನಿದು 'PRODUCTION-A'..?

ಏನಿದು 'PRODUCTION-A'..?

ಶಿವಣ್ಣ-ಅಪ್ಪು ಒಟ್ಟಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಪ್ರೀ-ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ನೀಡಿರುವ ಕಾರಣ 'PRODUCTION-A' ಅಂತ ನಾಮಕರಣ ಮಾಡಲಾಗಿದೆ. ಸಾಮಾನ್ಯವಾಗಿ 'PRODUCTION-1', 'PRODUCTION-2' ಅಂತ ಎಲ್ಲರೂ ಹೆಸರಿಡುತ್ತಾರೆ. ಆದ್ರೆ 'PRODUCTION-A' ಅರ್ಥ ಏನು ಅಂದ್ರೆ ನಿರ್ದೇಶಕ ರವಿವರ್ಮ ಕೊಟ್ಟ ಉತ್ತರ ವಿಭಿನ್ನವಾಗಿತ್ತು.

'PRODUCTION-A'

'PRODUCTION-A'

''ನಾವಿನ್ನೂ ಟೈಟಲ್ ಹುಡುಕಾಟದಲ್ಲಿದ್ದೀವಿ. ಎಲ್ಲರೂ 'PRODUCTION-1,2' ಅಂತ ಇಟ್ಟುಕೊಳ್ಳುತ್ತಾರೆ. ಆದ್ರೆ, ಶಿವಣ್ಣ ಮತ್ತು ಅಪ್ಪು ಮೊದಲ ಬಾರಿ ಒಂದಾಗುತ್ತಿರುವ ಸಿನಿಮಾ ಇದು. ನನ್ನ ನಿರ್ದೇಶನದ ಮೊದಲ ಸಿನಿಮಾ. ಹೀಗಾಗಿ ಸ್ವಲ್ಪ ಡಿಫರೆಂಟ್ ಆಗಿರ್ಬೇಕು ಅಂತ 'PRODUCTION-A' ಅಂತ ಇಟ್ಟಿದ್ದೀವಿ. ಮಕ್ಕಳಿಗೆ ಓದೋಕೆ ಹೇಳಿಕೊಡುವಾಗ ಮೊದಲ A ಅಕ್ಷರದಿಂದ ಶುರುಮಾಡ್ತಾರೆ. ಈ ಚಿತ್ರ ಕೂಡ ಅನೇಕ ಮೊದಲುಗಳಿಗೆ ಸಾಕ್ಷಿಯಾಗಿರುವುದರಿಂದ 'PRODUCTION-A' ಅಂತ ಟೆನ್ಟೇಟಿವ್ ಟೈಟಲ್ ಇಟ್ಟಿದ್ದೀವಿ'' - ರವಿವರ್ಮ, ನಿರ್ದೇಶಕ

ಚಿತ್ರದಲ್ಲಿರುತ್ತಾರಾ ರಾಘವೇಂದ್ರ ರಾಜ್ ಕುಮಾರ್?

ಚಿತ್ರದಲ್ಲಿರುತ್ತಾರಾ ರಾಘವೇಂದ್ರ ರಾಜ್ ಕುಮಾರ್?

ಶಿವಣ್ಣ ಮತ್ತು ಅಪ್ಪು ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದೇನೋ ಸರಿ. ಆದ್ರೆ, ಇದೇ ಸಿನಿಮಾದಲ್ಲಿ ರಾಘಣ್ಣ ಕೂಡ ಮಿಂಚಿದರೆ, 'ರಾಜವಂಶ'ದ ಅಭಿಮಾನಿಗಳ ಬಹುದಿನಗಳ ಕನವರಿಕೆ ಈಡೇರಿದಂತಾಗುತ್ತದೆ. ಇದಕ್ಕೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ''ರಾಘಣ್ಣನ ಬಗ್ಗೆ ಪ್ಲಾನ್ ಇದೆ. ನೋಡೋಣ, ಎಲ್ಲವೂ ಅಂದುಕೊಂಡಂತಾದ್ರೆ, ಅಣ್ಣಾವ್ರ ಮೂರು ಮಕ್ಕಳನ್ನೂ ಸಿನಿಮಾದಲ್ಲಿ ನೋಡಬಹುದು'' ಅಂತ ನಿರ್ದೇಶಕ ರವಿವರ್ಮ ಹೇಳಿದರು.

ಪಕ್ಕಾ ಆಕ್ಷನ್ ಎಂಟರ್ಟೇನ್ಮೆಂಟ್ ಸಿನಿಮಾ

ಪಕ್ಕಾ ಆಕ್ಷನ್ ಎಂಟರ್ಟೇನ್ಮೆಂಟ್ ಸಿನಿಮಾ

ಹೇಳಿ ಕೇಳಿ ಇದು ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ. ಬಾಲಿವುಡ್ ನಲ್ಲಿ ಬಹುಬೇಡಿಕೆಯ ಸಾಹಸ ನಿರ್ದೇಶಕನಾಗಿ ಬೆಳೆಯುತ್ತಿರುವ ರವಿವರ್ಮ, ಪವರ್ ಸ್ಟಾರ್ ಮತ್ತು ಸೆಂಚುರಿ ಸ್ಟಾರ್ ಜೊತೆ ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಚಿತ್ರದಲ್ಲಿ ಖಂಡತ ಆಕ್ಷನ್ ಭರ್ಜರಿಯಾಗಿರುವುದಲ್ಲಿ ಅನುಮಾನ ಬೇಡ. [ಪುನೀತ್ ಜತೆ ಶಿವರಾಜ್ ಕುಮಾರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್]

''ಇಡೀ ಭಾರತಕ್ಕೆ ಸಂಬಂಧಪಟ್ಟ ಕಥೆ''

''ಇಡೀ ಭಾರತಕ್ಕೆ ಸಂಬಂಧಪಟ್ಟ ಕಥೆ''

'PRODUCTION-A' ಚಿತ್ರಕಥೆ ಬಗ್ಗೆ ಹೆಚ್ಚು ಗುಟ್ಟುಬಿಟ್ಟುಕೊಡದ ನಿರ್ದೇಶಕ ರವಿವರ್ಮ, ''ಇದು ಪಕ್ಕಾ ಆಕ್ಷನ್ ಓರಿಯೆಂಟೆಡ್ ಸಿನಿಮಾ. ಇಡೀ ಭಾರತಕ್ಕೆ ಸಂಬಂಧ ಪಟ್ಟ ಕಥೆ. ಎಲ್ಲರ ಮನಸ್ಸಿಗೂ ತೀರಾ ಹತ್ತಿರವಾಗುವ ಸಿನಿಮಾ'' ಅಂತ ಹೇಳಿದ್ರು.

ಅಪ್ಪು ಹುಟ್ಟುಹಬ್ಬಕ್ಕೆ ಸೂಪರ್ ಗಿಫ್ಟ್

ಅಪ್ಪು ಹುಟ್ಟುಹಬ್ಬಕ್ಕೆ ಸೂಪರ್ ಗಿಫ್ಟ್

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ, ಅವರಿಗೆ ವಿಷ್ ಮಾಡುವ 'PRODUCTION-A' ಫಸ್ಟ್ ಲುಕ್ ಪೋಸ್ಟರ್ ಔಟ್ ಆಗಿದೆ. ಈಗಾಗಲೇ ಸಿನಿಮಾ ಸ್ಕ್ರಿಪ್ಟಿಂಗ್ ನಲ್ಲಿ ರವಿವರ್ಮ ಬಿಜಿಯಾಗಿದ್ದಾರೆ. ನವೆಂಬರ್ ನಲ್ಲಿ ಸಿನಿಮಾ ಸೆಟ್ಟೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜಯಣ್ಣ ಮತ್ತು ಭೋಗೇಂದ್ರ ಚಿತ್ರವನ್ನ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ.

English summary
Hat-Trick Hero Shivarajkumar and Power Star Puneeth Rajkumar starrer 'Production-A' first look poster is out. This is the first time real-life brothers Shivarajkumar and Puneeth Rajkumar sharing the screen space. Stunt Master Ravi Varma is directing this flick.
Please Wait while comments are loading...

Kannada Photos

Go to : More Photos