»   » 'ಗೂಳಿ' ಪಳಗಿಸಲಿದ್ದಾರಂತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್!

'ಗೂಳಿ' ಪಳಗಿಸಲಿದ್ದಾರಂತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್!

Posted by:
Subscribe to Filmibeat Kannada

ಕಂಬಳ, ಜಲ್ಲಿಕಟ್ಟು ಎಂಬ ಗ್ರಾಮೀಣ ಕ್ರೀಡೆಗಳು ಸದ್ಯ, ರಾಷ್ಟ್ರಮಟ್ಟದಲ್ಲಿ ಚರ್ಚೆಯಲ್ಲಿದೆ. ಹೀಗಿರುವಾಗ ಶಿವರಾಜ್ ಕುಮಾರ್ ಅಡ್ಡಾದಿಂದ ಒಂದು ಕುತೂಹಲಕಾರಿ ಸಂಗತಿ ಬಹಿರಂಗವಾಗಿದೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಮುಂದಿನ ಚಿತ್ರದಲ್ಲಿ ದೊಡ್ಡದೊಂದು ಸಾಹಸಕ್ಕೆ ಕೈಹಾಕಲಿದ್ದಾರಂತೆ. ಹೌದು, ಸ್ಯಾಂಡಲ್ ವುಡ್ ತೆರೆಮೇಲೆ 'ಗೂಳಿ' ಪಳಗಿಸುವ ಕ್ರೀಡಾಪಟುವಾಗಿ ಹ್ಯಾಟ್ರಿಕ್ ಹೀರೋ ಬಣ್ಣ ಹಚ್ಚಲಿದ್ದಾರಂತೆ.

ಈ ಚಿತ್ರದಲ್ಲಿ ಶಿವಣ್ಣ ಸ್ವತಂತ್ರ ಹೋರಾಟಗಾರನಾಗಿದ್ದು, ಇದರ ಜೊತೆಯಲ್ಲಿ ಗೂಳಿಯೊಡನೆ ಕಾಳಗ ಕೂಡ ಮಾಡಲಿದ್ದಾರಂತೆ. ಮುಂದೆ ಓದಿ...

ಗೂಳಿ ಜೊತೆ ಶಿವಣ್ಣ!

ಗೂಳಿ ಜೊತೆ ಶಿವಣ್ಣ!

ಶಿವಣ್ಣ ಅಭಿನಯಸಲಿರುವ 'ಈಸೂರು ದಂಗೆ 1942' ಚಿತ್ರದಲ್ಲಿ 'ಗೂಳಿ'ಯನ್ನ ಪಳಗಿಸುವ ವ್ಯಕ್ತಿಯಾಗಿ ಕರುನಾಡ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದಾರಂತೆ.

ಸಾಕಿರುವ ಗೂಳಿ ಬಳಕೆ!

ಸಾಕಿರುವ ಗೂಳಿ ಬಳಕೆ!

ಅಂದ್ಹಾಗೆ, ಈ ಚಿತ್ರಕ್ಕಾಗಿ ಸಾಕಿರುವ ಗೂಳಿಯನ್ನ ಬಳಸಲಿದ್ದಾರಂತೆ. ಶಿವಣ್ಣನ ಜೊತೆ ಗೂಳಿ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದೆಯಂತೆ.

ಸ್ವತಂತ್ರ ಹೋರಾಟಗಾರ ಶಿವಣ್ಣ!

ಸ್ವತಂತ್ರ ಹೋರಾಟಗಾರ ಶಿವಣ್ಣ!

ಸ್ವತಂತ್ರ ಪೂರ್ವದಲ್ಲಿ ನಡೆದ ಕಥೆಯಾಧರಿತ ಚಿತ್ರ 'ಈಸೂರು ದಂಗೆ'. ಹೀಗಾಗಿ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಸ್ವತಂತ್ರ ಹೋರಾಟಗಾರ 'ಸೂರಿ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವೈಭವ್ ನಿರ್ದೇಶನ

ವೈಭವ್ ನಿರ್ದೇಶನ

ನವ ನಿರ್ದೇಶಕ ವೈಭವ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿದ್ದ ವೈಭವ್, 'ಲೈಫ್ ಈಸ್ ಶಾರ್ಟ್', 'ಮಾಣಿಕ್ಯ', 'ಹುಲಿ ಮಾತನಾಡಿದಾಗ' ಎಂಬ ಕಿರು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

'ಈಸೂರು ದಂಗೆ' ನೈಜ ಕಥೆ ಏನು?

'ಈಸೂರು ದಂಗೆ' ನೈಜ ಕಥೆ ಏನು?

ಶಿವಮೊಗ್ಗದ ಶಿಕಾರಿಪುರದ ಒಂದು ಸಣ್ಣ ಗ್ರಾಮ ಈಸೂರು. ಅದು 1942ರ ಸಮಯ. ಬ್ರಿಟಿಷರ ಆಡಳಿತವನ್ನು ಧಿಕ್ಕರಿಸಿ, ಸ್ವಾತಂತ್ರ್ಯ ಘೋಷಿಸಿಕೊಂಡ ಭಾರತದ ಮೊದಲ ಗ್ರಾಮ ಈಸೂರು. ಈ ಪುಟ್ಟ ಗ್ರಾಮದ ಜನರ ಸ್ವಾಭಿಮಾನ ಬ್ರಿಟಿಷರನ್ನು ತಲ್ಲಣಗೊಳಿಸಿತ್ತು. ಕೊನೆಗೆ ಇಡೀ ಗ್ರಾಮ ಬ್ರಿಟಿಷರ ಕೋಪದ ಅಗ್ನಿಗೆ ಆಹುತಿಯಾಯಿತು. ನೂರಾರು ಹೋರಾಟಗಾರರು ಭೂಗತರಾದರು. ಹಲವು ಮಹಿಳೆಯರು ಅತ್ಯಾಚಾರಕ್ಕೊಳಗಾದರು. ಐವರನ್ನು ನೇಣಿಗೇರಿಸಲಾಯಿತು. ಈ ಚಳವಳಿಯಲ್ಲಿ ಭಾಗವಹಿಸಿ ನೇಣಿಗೇರಿದ ಐವರಲ್ಲಿ ಸೂರಿ ಎಂಬ ಹೋರಾಟಗಾರನ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

'ಮಾರ್ಚ್'ನಲ್ಲಿ ಶುರು!

'ಮಾರ್ಚ್'ನಲ್ಲಿ ಶುರು!

ಸದ್ಯ, ಚಿತ್ರದ ಪೂರ್ವ ತಯಾರಿಯಲ್ಲಿ ತೊಡಗಿರುವ ಚಿತ್ರತಂಡ, ಮಾರ್ಚ್ ನಲ್ಲಿ ಸಿನಿಮಾ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಶಿವರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಕುತೂಹಲ ಹೆಚ್ಚಿಸಿದೆ.

English summary
At a time when there is a ban on rural sports like Kambala and Jallikattu, Shivarajkumar will play a sport, in which he has to tame a bull, in the movie Eesooru Dange.
Please Wait while comments are loading...

Kannada Photos

Go to : More Photos