»   » ದುನಿಯಾ ವಿಜಿ ಜತೆ ಆರ್ ಎಕ್ಸ್ ಸೂರಿ ನೋಡಲಿರುವ ಶಿವಣ್ಣ

ದುನಿಯಾ ವಿಜಿ ಜತೆ ಆರ್ ಎಕ್ಸ್ ಸೂರಿ ನೋಡಲಿರುವ ಶಿವಣ್ಣ

Posted by:
Subscribe to Filmibeat Kannada

ಅಂತೂ ಇಂತೂ ಮಗಳ ಮದುವೆ ಮುಗಿಯಿತು ಇನ್ನೇನು ಮುಂದಿನ ಚಿತ್ರಗಳ ಶೂಟಿಂಗ್ ಸೇರಿದಂತೆ ಇನ್ನುಳಿದ ಕೆಲಸಗಳತ್ತ ಗಮನ ಹರಿಸುವಲ್ಲಿ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಗೆ ತಮ್ಮ ವೃತ್ತಿಯ ಮೇಲಿರುವ ಗೌರವ ಹಾಗೂ ಪ್ರೀತಿಯನ್ನು ಕಂಡಾಗ ತಿಳಿಯುವುದೇನೆಂದರೆ ಈಗಲೂ ಕನ್ನಡ ಚಿತ್ರರಂಗದಲ್ಲಿ ಯಂಗ್ ಆಂಡ್ ಎನರ್ಜಿಟಿಕ್ ನಟನಾಗಿ ಕಂಗೊಳಿಸುತ್ತಿದ್ದಾರೆ, ಅನ್ನೋದು. [ವರಮಹಾಲಕ್ಷ್ಮಿ ಹಬ್ಬಕ್ಕಿಲ್ಲ ದುನಿಯಾ ವಿಜಿ 'RX ಸೂರಿ']ಅಂದಹಾಗೆ ನಿರ್ದೇಶಕ ಶ್ರೀಜೈ ಆಕ್ಷನ್-ಕಟ್ ಹೇಳಿರುವ ದುನಿಯಾ ವಿಜಯ್ ಹಾಗೂ ಆಕಾಂಕ್ಷ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಆರ್ ಎಕ್ಸ್ ಸೂರಿ' ಈ ಶುಕ್ರವಾರ(ಸೆಪ್ಟೆಂಬರ್ 4) ತೆರೆ ಮೇಲೆ ಬರಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಪಾಲಿ ಚಿತ್ರಮಂದಿರದಲ್ಲಿ ನಾಯಕ ನಟ ದುನಿಯಾ ವಿಜಯ್ ಅವರೊಂದಿಗೆ ಬೆಳಿಗ್ಗೆ ಮೊದಲ ದಿನ ಮೊದಲ ಶೋ ನೋಡಲಿದ್ದಾರೆ.


Dear Friends, Let us watch my RX Soori- The Movie with our beloved #Shivanna on 04th September at #Kapali Theatre Morning Show.


Posted by Duniya Vijay onWednesday, September 2, 2015

ಕುಖ್ಯಾತ ರೌಡಿ ಸೂರಿಯ ನಿಜ ಜೀವನದ ಕಥೆಯನ್ನಾಧರಿಸಿದ 'ಆರ್ ಎಕ್ಸ್ ಸೂರಿ' ಈಗಾಗಲೇ ಗಾಂಧಿನಗರದಲ್ಲಿ ಹಾಗೂ ಕನ್ನಡ ಅಭಿಮಾನಿ ಪ್ರೇಕ್ಷಕರುಗಳಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್, ಟೀಸರ್ ಮತ್ತು ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡುಗಳು ಕೂಡ ಸಖತ್ ರೆಸ್ಪಾನ್ಸ್ ಗಳಿಸುತ್ತಿದೆ. [ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ]


ಚಿತ್ರ ಬಿಡುಗಡೆಗೆ ಮುಂಚೆನೆ ಟ್ರೈಲರ್ ಮೂಲಕ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡಿದ್ದ ನಿರ್ಮಾಪಕ ಸುರೇಶ್ ಅವರ 'ಆರ್ ಎಕ್ಸ್ ಸೂರಿ' ಇದೀಗ 'ಓಂ' ಚಿತ್ರದ ನಾಯಕ ಶಿವಣ್ಣ ಅವರ ಮನಸ್ಸನ್ನು ಗೆಲ್ಲುತ್ತಾ ಅನ್ನೋದನ್ನ ನೋಡಲು ಶಿವರಾಜ್ ಕುಮಾರ್ ಅವರ ಚಿತ್ರ ವಿಮರ್ಶೆ ಬಂದ ಮೇಲೆ ನೋಡಬೇಕು.[ಮಾನವೀಯತೆ ಮೆರೆದ ದುನಿಯಾ ವಿಜಯ್ 'RX ಸೂರಿ' ಚಿತ್ರತಂಡ]


ಇಡೀ ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಶಿವಣ್ಣ ಅವರ ರೌಡಿಸಂ ಕಥೆಯಾಧರಿತ 'ಓಂ' ಚಿತ್ರ ಪ್ರೇಕ್ಷಕರ ಮನದಲ್ಲಿ ಉಳಿದುಕೊಂಡಂತೆ ದುನಿಯಾ ವಿಜಯ್ ಅವರ 'ಆರ್ ಎಕ್ಸ್ ಸೂರಿ' ಮೋಡಿ ಮಾಡುತ್ತ ಅಂತ ಚಿತ್ರ ಬಿಡುಗಡೆಯಾದ ಮೇಲೆ ನೋಡಬೇಕಿದೆ.

English summary
On this friday, (September 4) Shivanna will watch RX Soori in Kapali theatres, says reports. RX Soori is much awaited and anticipated movie of Duniya Vijay. The movie stars Vijay and Akanksha in the lead roles. The movie is directed by debudent Sreejay.
Please Wait while comments are loading...

Kannada Photos

Go to : More Photos