»   » ಎಚ್.ಡಿ.ಕೆ ಪುತ್ರನಿಗೆ ಶಿವಣ್ಣನ ಪ್ರೀತಿಯ ಶುಭಾಶಯ

ಎಚ್.ಡಿ.ಕೆ ಪುತ್ರನಿಗೆ ಶಿವಣ್ಣನ ಪ್ರೀತಿಯ ಶುಭಾಶಯ

Posted by:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟಿದ್ದಾರೆ. ಇಂದು ಅವರ ಚೊಚ್ಚಲ ಚಿತ್ರದ ಮೊದಲ ಪತ್ರಿಕಾಗೋಷ್ಠಿ ಬೆಂಗಳೂರಿನ ಹೊಟೇಲ್ ಜೆ.ಡಬ್ಲ್ಯೂ.ಮ್ಯಾರಿಯಟ್ ನಲ್ಲಿ ನಡೆಯಿತು.

'ಜಾಗ್ವಾರ್' ಕುರಿತ ಹಲವು ವಿಚಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಗೌಡ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮತ್ತು ನಿರ್ದೇಶಕ ಮಹದೇವ್ ವಿವರಿಸಿದರು.

shivarajkumar-wishes-hdk-s-son-nikhil-gowda

ಇದಾದ ಬಳಿಕ ಹೊಟೇಲ್ ಜೆ.ಡಬ್ಲ್ಯೂ.ಮ್ಯಾರಿಯಟ್ ನಲ್ಲಿ ಒಂದು ಅಚ್ಚರಿ ನಡೆಯಿತು. ಇದೇ ಹೊಟೇಲ್ ನಲ್ಲಿ ಊಟ ಸವಿಯೋಕೆ ಡಾ.ಶಿವರಾಜ್ ಕುಮಾರ್ ಮತ್ತು ಕುಟುಂಬ ಆಗಮಿಸಿತ್ತು. ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

ನಿಖಿಲ್ ಗೌಡ ಅವರ ಚೊಚ್ಚಲ ಪತ್ರಿಕಾಗೋಷ್ಠಿ ಇಲ್ಲೇ ನಡೆದಿದೆ ಅಂತ ತಿಳಿದು ಖುದ್ದು ಶಿವಣ್ಣ, ಎಕ್ಸ್ ಸಿ.ಎಂ ಎಚ್.ಡಿ.ಕೆ ಮತ್ತು ಪುತ್ರ ನಿಖಿಲ್ ಗೌಡ ಬಳಿ ತೆರಳಿ ಶುಭಾಶಯ ಕೋರಿದರು. [ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ]

''ಜಾಗ್ವಾರ್' ಟೈಟಲ್ ಸೂಪರ್ ಆಗಿದೆ'' ಅಂತ ಕಾಂಪ್ಲಿಮೆಂಟ್ ಕೂಡ ಶಿವಣ್ಣ ನೀಡಿದರು. ಮೊದಲ ದಿನವೇ ಹ್ಯಾಟ್ರಿಕ್ ಹೀರೋ ಅವರಿಂದ ವಿಶ್ ಮಾಡಿಸಿಕೊಂಡಿದ್ದಕ್ಕೆ ನಿಖಿಲ್ ಗೌಡ ಕೂಡ ಖುಷಿಯಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Ex CM H.D.Kumaraswamy's son Nikhil Gowda is all set to make his Sandalwood debut with the movie 'Jaguar'. To reveal the details of the movie, a Press meet was arranged today. Incidentally, Kannada Actor Shivarajkumar came into the venue and wished Nikhil Gowda.
Please Wait while comments are loading...

Kannada Photos

Go to : More Photos