»   » ಹ್ಯಾಟ್ರಿಕ್ ಹೀರೋ ಶಿವಣ್ಣ ಹೊಸ ಚಿತ್ರ 'ಆರ್ಯನ್'

ಹ್ಯಾಟ್ರಿಕ್ ಹೀರೋ ಶಿವಣ್ಣ ಹೊಸ ಚಿತ್ರ 'ಆರ್ಯನ್'

Posted by:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಂಕ್ರಾಂತಿ ಹಬ್ಬಕ್ಕೆ (ಜ.14) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ಲಕ್ಷ್ಮಿ' ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಜ.18ಕ್ಕೆ ಮುಂದೂಡಲ್ಪಟ್ಟಿದೆ. ಇದೇ ಸಂಕ್ರಾಂತಿ ಹಬ್ಬಕ್ಕೆ ಶಿವಣ್ಣನ ಹೊಸ ಚಿತ್ರ 'ಆರ್ಯನ್' ಸೆಟ್ಟೇರಿದೆ.

ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ರಾಗ ಸಂಯೋಜಿಸಿರುವ ಹಾಡಿನ ರೆಕಾರ್ಡಿಂಗ್ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ಖಮರ್ ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ ಇದಾಗಿದೆ. ಚಿತ್ರದಲ್ಲಿ ಶಿವಣ್ಣ ಅವರದು ಅಥ್ಲೀಟ್ ಟ್ರೈನರ್ ಪಾತ್ರ ಎಂಬುದು ಚಿತ್ರದ ಒಂದು ಸಣ್ಣ ಎಳೆ.

ಡಿ.ರಾಜೇಂದ್ರ ಬಾಬು ಅವರು ಆಕ್ಷನ್ ಕಟ್ ಹೇಳುತ್ತಿದ್ದು, 12 ವರ್ಷಗಳ ಹಿಂದೆಯೇ ಚಿತ್ರದ ಕಥೆಯನ್ನು ಶಿವಣ್ಣ ಬಳಿ ಚರ್ಚಿಸಿದ್ದರಂತೆ. ಈಗ ಆ ಕಥೆಗೆ ಕಾಲಕೂಡಿಬಂದಿದೆ. ಹಳೆಯ ಕಥೆಯಾದರೂ ಸಬ್ಜೆಕ್ಟ್ ಮಾತ್ರ ಫ್ರೆಶ್ ಆಗಿದೆ ಎನ್ನುತ್ತಾರೆ ರಾಜೇಂದ್ರ ಬಾಬು.

ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ. ಅಥ್ಲೀಟ್ ಪಾತ್ರಕ್ಕೆ ಸೂಕ್ತ ಎನ್ನಿಸುವ ಮುಖಕ್ಕೆ ಮಣೆಹಾಕಲಾಗುತ್ತದೆ. ಬಹುಶಃ ಗೋಲ್ಡನ್ ಗರ್ಲ್ ರಮ್ಯಾ ಅವರು ನಾಯಕಿಯಾಗುವ ಸಾಧ್ಯತೆಗಳಿವೆ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ. ಒಂದು ವೇಳೆ ರಮ್ಯಾ ಅಲ್ಲದಿದ್ದರೆ ಹೊಸ ಮುಖದ ಪರಿಚಯ ಈ ಚಿತ್ರದ ಮೂಲಕ ಆಗಲಿದೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Hat trick hero Shivrajkumar's new film titled as 'Aryan'. The film kick-started with the recording of a song on Sankranti. It is being produced by Khamar and directed by D Rajendra Babu.
Please Wait while comments are loading...

Kannada Photos

Go to : More Photos