»   » ಪುನೀತ್ ಜತೆ ಶಿವರಾಜ್ ಕುಮಾರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಪುನೀತ್ ಜತೆ ಶಿವರಾಜ್ ಕುಮಾರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್

Posted by:
Subscribe to Filmibeat Kannada

ಅಣ್ಣಾವ್ರ ಮಕ್ಕಳು ಒಂದೇ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂಬ ಸುದ್ದಿ ವರ್ಷಗಳಿಂದಲೂ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದೆ. ಆದರೆ ನಾನಾ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ಅಣ್ಣಾವ್ರ ಮಕ್ಕಳ ಚಿತ್ರಕ್ಕೆ ಶುಭ ಮುಹೂರ್ತ ಕೂಡಿಬಂದಿದೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಟ್ಟಿಗೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲದಿದ್ದರೂ ಇಬ್ಬರೂ ಕಾಂಬಿನೇಷನ್ ಚಿತ್ರವಂತೂ ರೆಡಿಯಾಗುತ್ತಿದೆ. ['ಸಿಪಾಯಿ ರಾಮು' ಆದ ಪವರ್ ಸ್ಟಾರ್]

Puneeth, Shivrajkumar

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮ. ಬಾಲಿವುಡ್, ಟಾಲಿವುಡ್ ಗಳಲ್ಲಿ ಮಿಂಚುತ್ತಿರುವ ರವಿವರ್ಮ ಆಕ್ಷನ್ ಕಟ್ ಎಂದರೆ ಕೇಳಬೇಕು. ಪ್ರೇಕ್ಷಕರು ಪವರ್ ಫುಲ್ ಆಕ್ಷನ್ ಚಿತ್ರವನ್ನು ನಿರೀಕ್ಷಿಸಬಹುದು.

ಅಣ್ಣಾವ್ರ ಮಕ್ಕಳು ಒಂದೇ ಚಿತ್ರದಲ್ಲಿ ಇದುವರೆಗೂ ಅಭಿನಯಿಸಿರಲಿಲ್ಲ. ಈಗ ಶಿವಣ್ಣ ಮತ್ತು ಪುನೀತ್ ಒಟ್ಟಿಗೆ ಅಭಿನಯಿಸಲು ಒಪ್ಪಿರುವುದು ಸ್ಯಾಂಡಲ್ ವುಡ್ ನಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸ್ವಲ್ಪ ಅನಾರೋಗ್ಯದ ಕಾರಣ ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರದಲ್ಲಿಲ್ಲ ಎಂಬುದು ಬೇಸರದ ಸಂಗತಿ.

ಚಿತ್ರದಲ್ಲಿ ಇಬ್ಬರು ನಾಯಕಿಯರಿರುತ್ತಾರಾ, ಪಾತ್ರವರ್ಗದಲ್ಲಿ ಯಾರೆಲ್ಲಾ ಇರುತ್ತಾರೆ, ತಾಂತ್ರಿಕ ಬಳಗದ ಕಥೆ ಏನು ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. ಸದ್ಯಕ್ಕೆ ಮನಮೋಹಕ, ವಜ್ರಕಾಯ, ಬಾದ್ ಶಾ ಸೇರಿದಂತೆ ಕೆಲವು ಚಿತ್ರಗಳ್ಳಿ ಶಿವಣ್ಣ ಬಿಜಿಯಾಗಿದ್ದಾರೆ.

ಇನ್ನು ಮೈತ್ರಿ, ರಣ ವಿಕ್ರಮ, ದೊಡ್ಮನೆ ಹುಡುಗ, ಆಹ್ವಾನ ಚಿತ್ರಗಳಲ್ಲಿ ಪುನೀತ್ ತೊಡಗಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ ಎಂಬುದು ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿರುವ ಮಾತು. (ಏಜೆನ್ಸೀಸ್)

English summary
Hat trick hero Shivrajkumar and Power Star Puneeth Rajkumar to act together in yet to titled movie. The movie is directed by stunt master Ravi Verma.
Please Wait while comments are loading...

Kannada Photos

Go to : More Photos