»   » ಬೇಬಿ ಡಾಲ್ ಅಮೂಲ್ಯಗೆ ಮದುವೆ ಆಯ್ತು.!

ಬೇಬಿ ಡಾಲ್ ಅಮೂಲ್ಯಗೆ ಮದುವೆ ಆಯ್ತು.!

Posted by:
Subscribe to Filmibeat Kannada

ನಟಿ ಅಮೂಲ್ಯ ಮದುವೆಯಾಗಿದ್ದಾರೆ. ಹೊಸ ಜೀವನಕ್ಕೆ ಬೇಬಿ ಡಾಲ್ ಅಮೂಲ್ಯ ಕಾಲಿಟ್ಟಿದ್ದಾರೆ. ಇದನ್ನ ಕೇಳಿದ ತಕ್ಷಣ ಸರ್ ಪ್ರೈಸ್ ಆಗ್ಬೇಡಿ. ಯಾಕಂದ್ರೆ ಇದು 100% ರೀಲ್ ಸುದ್ದಿ.

ನಟಿ ಅಮೂಲ್ಯ, ಗೀತಸಾಹಿತಿ ಕವಿರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿಯನ್ನ ನಾವೇ ನಿಮಗೆ ಹೇಳಿದ್ವಿ ಅಲ್ವಾ?

'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಶೂಟಿಂಗ್ ಈಗ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೆ ಚಿತ್ರದ ಮದುವೆ ಸನ್ನಿವೇಶದ ಚಿತ್ರೀಕರಣ ನಡೆಯಿತು. ಅದರಲ್ಲಿ ಅಮೂಲ್ಯ-ನಟ ಸೂರಜ್ ಅವರನ್ನ ವಿವಾಹವಾದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. [ಅಂತೂ ಚಿತ್ತಾರದ ಬೆಡಗಿ ಅಮೂಲ್ಯಗೆ ಸೂಕ್ತ ವರ ಸಿಕ್ಕ!]

amulya

ಮೂಲತಃ ಮಾಡೆಲ್ ಆಗಿರುವ ಸೂರಜ್ ಗೌಡ ಬಣ್ಣ ಹಚ್ಚಿರುವ ಮೊದಲ ಚಿತ್ರ ಇದು. ಇನ್ನೂ ನೂರಾರು ಸೂಪರ್ ಹಿಟ್ ಹಾಡುಗಳ ಸರದಾರ ಕವಿರಾಜ್ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ 'ಮದುವೆಯ ಮಮತೆಯ ಕರೆಯೋಲೆ'. [ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ']

ಅನಂತ್ ನಾಗ್, ಚಿತ್ರ ಶೆಣೈ ಸೇರಿದಂತೆ ದೊಡ್ಡ ತಾರಾಬಳಗವಿರುವ 'ಮದುವೆಯ ಮಮತೆಯ ಕರೆಯೋಲೆ' ಸದ್ಯ ಶೂಟಿಂಗ್ ನಲ್ಲಿ ಬಿಜಿಯಾಗಿದೆ.

English summary
Lyricist Kaviraj Directorial Debut 'Maduveya Mamatheya Kareyole' shooting in progress. Recently, the team shot a marriage sequence wherein, Kannada Actress Amulya got hitched to Suraj Gowda. Check out the shooting pictures.
Please Wait while comments are loading...

Kannada Photos

Go to : More Photos