»   » ಶಿವಮೊಗ್ಗದಿಂದ ಯುರೋಪಿಗೆ 'ಲಿಂಗಾ' ಹಾರಾಟ

ಶಿವಮೊಗ್ಗದಿಂದ ಯುರೋಪಿಗೆ 'ಲಿಂಗಾ' ಹಾರಾಟ

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರದ ಶೂಟಿಂಗ್ ಶಿವಮೊಗ್ಗದಲ್ಲಿ ಭರದಿಂದ ಸಾಗಿದ್ದು, ಚಿತ್ರ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶಿವಮೊಗ್ಗದಲ್ಲಿ ಇನ್ನೇನು ಶೂಟಿಂಗ್ ಮುಕ್ತಾಯವಾಗಲಿದೆ ಎಂಬ ಸುದ್ದಿ ಬಂದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಜನಿಕಾಂತ್ ನೋಡಲು ಮುಗಿಬಿದ್ದಿದ್ದಾರೆ.

ಹಾಲಿವುಡ್ಡಿನ ಖ್ಯಾತ ಸ್ಟಂಟ್ ಸಂಯೋಜಕ ಲೀ ವಿಟೇಕರ್ ಅವರು ಲಿಂಗಾ ಚಿತ್ರಕ್ಕಾಗಿ ಕ್ಲೈಮ್ಯಾಕ್ಸ್ ಭಾಗದ ಸ್ಟಂಟ್, ಫೈಟ್, ಚೇಸ್ ಗಳನ್ನು ಸಂಯೋಜಿಸಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಕರ್ನಾಟಕದಲ್ಲೇ ನಡೆದಿರುವುದು ವಿಶೇಷ. ಇದೆಲ್ಲವೂ ಸೂಪರ್ ಸ್ಟಾರ್ ಬಯಸಿದಂತೆ ಚಿತ್ರೀಕರಣ ನಡೆಸಲಾಗಿದೆ. ಎರಡು ಹಾಡಿನ ಚಿತ್ರೀಕರಣಕ್ಕಾಗಿ ಯುರೋಪಿಗೆ ಚಿತ್ರ ತಂಡ ಹಾರಾಲಿದೆ ಎಂದು ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.[ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ]

ಕೆ ಎಸ್ ರವಿಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ರಜನಿಗೆ ನಾಯಕಿಯರಾಗಿದ್ದಾರೆ. ದ್ವಿಪಾತ್ರದಲ್ಲಿ ಮಿಂಚಲಿರುವ ರಜನಿಯನ್ನು 'ಲಿಂಗಾ' ರೂಪದಲ್ಲಿ ಕಾಣಲು ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನ(ಡಿ.12)ದ ತನಕ ಕಾಯಬೇಕಿದೆ.

ಚಿತ್ರದ ಫಸ್ಟ್ ಲುಕ್ ಸೂಪರ್ ಹಿಟ್

ಕರ್ನಾಟಕದ ಶಿವಮೊಗ್ಗ, ಕೊಲ್ಲೂರು, ಲಿಂಗನಮಕ್ಕಿ, ಜೋಗ ಮುಂತಾದೆಡೆ ಲಿಂಗಾ ಚಿತ್ರೀಕರಣ ನಡೆದಿದೆ. ಕನ್ನಡದ ಧೀರ ನಿರ್ಮಾಪಕ ಎಂದೇ ಕರೆಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ ಇದಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು

ರಜನಿಕಾಂತ್ ನೋಡಲು ಮುಗಿಬಿದ್ದ ಜನ

ಮೊದಲಿಗೆ ಯಾರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ರಜನಿ ಸಂದೇಶ ಕಳಿಸಿದ್ದರು. ಅದರೆ, ನಂತರ ಮನಸ್ಸು ಬದಲಾಯಿಸಿದರು.

ರಜನಿ ಫ್ಯಾನ್ಸಿಗೆ ಬಹು ನಿರೀಕ್ಷೆಯ ಚಿತ್ರ

ರಜನಿ ಜತೆ ಪಡೆಯಪ್ಪ, ಮುತ್ತು ಚಿತ್ರಗಳಲ್ಲಿ ದುಡಿದ ಯಶಸ್ವಿ ನಿರ್ದೇಶಕ ಕೆ.ಎಸ್.ರವಿಕುಮಾರ್ ಆಕ್ಷನ್, ಕಟ್ ಹೇಳುತ್ತಿರುವ ಲಿಂಗಾ ಚಿತ್ರದಲ್ಲಿ ರಜನಿ ಕಾಂತ್ ಜೋಡಿಯಾಗಿ ಸೋನಾಕ್ಷಿ ಸಿನ್ಹಾ, ಅನುಷ್ಕಾ ಶೆಟ್ಟಿ, ತೆಲುಗು ನಟ ಜಗಪತಿ ಬಾಬು, ದೇವ್ ಗಿಲ್, ಸಂತಾನಂ, ಮನೋಬಲ ಮುಂತಾದವರಿದ್ದಾರೆ. ರತ್ನವೇಲು ಕ್ಯಾಮೆರಾವರ್ಕ್, ಎ.ಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ.

ಅಭಿಮಾನಕ್ಕೆ ಮಣಿದ ರಜನಿಕಾಂತ್

ಗಂಟೆಗಟ್ಟಲೇ ಕಾದಿದ್ದ ಅಭಿಮಾನಿಗಳಲ್ಲಿ ಮಹಿಳೆಯರು ಮಕ್ಕಳು ಇದ್ದಾರೆ ಎಂದು ತಿಳಿದ ರಜನಿಕಾಂತ್ ಚಿತ್ರೀಕರಣದ ನಡುವೆ ಕೆಲ ಹೊತ್ತು ಬಿಡುವು ಮಾಡಿಕೊಂಡು ಅಭಿಮಾನಿಗಳ ಜೊತೆ ಕಾಣಿಸಿಕೊಂಡರು/

ಕುತೂಹಲ ಕೆರಳಿಸಿರುವ ಚಿತ್ರದ ಕಥೆ ಏನು?

ಈ ಚಿತ್ರದಲ್ಲಿ ಮುಳ್ಳಪೆರಿಯಾರ್ ಅಣೆಕಟ್ಟಿನ ಪ್ರಸ್ತಾವನೆ ಇರುತ್ತದೆ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಸುಮಾರು 400 ವರ್ಷಗಳ ಹಿಂದೆ ಬ್ರಿಟೀಷರು ನಿರ್ಮಿಸಿದ ಈ ಅಣೆಕಟ್ಟು ವಿಚಾರದಲ್ಲಿ ತಮಿಳುನಾಡು, ಕೇರಳ ರಾಜ್ಯಗಳ ನಡುವೆ ವಿವಾದ ಇನ್ನೂ ಜೀವಂತವಾಗಿದೆ. ಹಾಗಾಗಿ 'ಲಿಂಗಾ' ಚಿತ್ರ ಚರ್ಚೆಯ ವಸ್ತುವಾಗಿದೆ. ಚಿತ್ರದಲ್ಲಿ ರಜನಿ ಅವರು ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. [ಲಿಂಗಾ ಸ್ಟೋರಿಲೈನ್ ಲೀಕ್]

English summary
Shooting for Lingaa almost complete. The makers of superstar Rajinikanth-starrer Tamil actioner “Lingaa”, which is currently on floors in Shimoga district of Karnataka, plan to head to Europe soon to shoot two songs for the film. Fans of Rajinikanth throng to meet the superstar.
Please Wait while comments are loading...

Kannada Photos

Go to : More Photos