»   » 'ಯು ಟರ್ನ್' ಪವನ್ ಹೊಸ ಪ್ರಯೋಗ: 'ಸ್ಟೀಲ್ ಫ್ಲೈ ಓವರ್ ಬೇಡ'

'ಯು ಟರ್ನ್' ಪವನ್ ಹೊಸ ಪ್ರಯೋಗ: 'ಸ್ಟೀಲ್ ಫ್ಲೈ ಓವರ್ ಬೇಡ'

'ಸ್ಟೀಲ್ ಫ್ಲೈ ಓವರ್ ಬೇಡ' ಅಂತ ಕಿರುಚಿತ್ರ ನಿರ್ಮಾಣ ಮಾಡಿ, ಲೂಸಿಯಾ ಪವನ್ ಕುಮಾರ್ ಅವರ ಮುಂದಿನ ಚಿತ್ರದಲ್ಲಿ ಕೆಲಸ ಮಾಡಿ...

Posted by:
Subscribe to Filmibeat Kannada

'ಯೂ ಟರ್ನ್' ಚಿತ್ರದ ಮೂಲಕ ಟ್ರಾಫಿಕ್ ನಿಯಮಗಳನ್ನ ಪಾಲಿಸಬೇಕು ಎಂದು ತೋರಿಸಿದ್ದ ನಿರ್ದೇಶಕ ಪವನ್ ಕುಮಾರ್ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಯೋಜನೆಯನ್ನ ವಿರೋಧಿಸಿ ವಿರೋಧ ಪಕ್ಷಗಳು ಹಾಗೂ ಜನಸಾಮಾನ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.[ಡಬ್ಬಲ್ ರೋಡ್‌ ಫ್ಲೈ ಓವರ್ ಕಾಮಗಾರಿ ಮಾಡಿದ 'ಯು-ಟರ್ನ್' ಚಿತ್ರತಂಡ]

ಆದ್ರೆ, ಈ ಸಮಸ್ಯೆಯನ್ನ ಆಧರಿಸಿ ನಿರ್ದೇಶಕ ಪವನ್ ಕುಮಾರ್ ಸೈಲಾಂಟ್ ಆಗಿ ಒಂದು ಕಿರುಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲದೇ, 'ಸ್ಟೀಲ್ ಫ್ಲೈ ಓವರ್ ಬೇಡ' ಎಂಬ ಹೆಸರಿನಲ್ಲಿ ಒಂದು ಕಿರುಚಿತ್ರ ಕಾಂಪಿಟೇಷನ್ ಕೂಡ ಅಯೋಜನೆ ಮಾಡಿದ್ದಾರೆ. ಮುಂದೆ ಓದಿ....

'ಸ್ಟೀಲ್ ಫ್ಲೈ ಓವರ್ ಬೇಡ'

'ಸ್ಟೀಲ್ ಫ್ಲೈ ಓವರ್ ಬೇಡ'

'ಸ್ಟೀಲ್ ಫ್ಲೈ ಓವರ್ ಬೇಡ' ಎಂಬ ಹೆಸರಿನಲ್ಲಿ ನಿರ್ದೇಶಕ ಪವನ್ ಕುಮಾರ್ 1 ನಿಮಿಷದ ಕಿರುಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

ಮಗಳ ಆಟಿಕೆ ವಸ್ತುಗಳಿಂದ ನಿರ್ಮಾಣ

ಮಗಳ ಆಟಿಕೆ ವಸ್ತುಗಳಿಂದ ನಿರ್ಮಾಣ

ಪವನ್ ಕುಮಾರ್ ಅವರ ಮಗಳು ಆಟವಾಡುವ ವಸ್ತುಗಳನ್ನ ಬಳಿಸಿ 1 ನಿಮಿಷದ ಕಿರುಚಿತ್ರವನ್ನ ನಿರ್ಮಾಣ ಮಾಡಿದ್ದು, 'ಸ್ಟೀಲ್ ಫ್ಲೈ ಓವರ್' ಬಂದ್ರೆ ಬೆಂಗಳೂರು ಹೇಗಾಗುತ್ತೆ ಎಂಬುದನ್ನ ಸರಳವಾಗಿ ತೋರಿಸಿದ್ದಾರೆ.

ಯೂ ಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ

ಯೂ ಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ

ಪವನ್ ಕುಮಾರ್ ತಯಾರಿಸಿರುವ ಈ ಕಿರುಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ರೆಸ್ ಪಾನ್ಸ್ ಸಿಕ್ಕಿದೆ. ಅಪ್ ಲೋಡ್ ಮಾಡಿದ 24 ಗಂಟೆಗಳಲ್ಲಿ ಈ ಕಿರುಚಿತ್ರವನ್ನ ಸುಮಾರು 10 ಸಾವಿರಕ್ಕೂ ಅಧಿಕ ಜನ ನೋಡಿದ್ದಾರೆ.

ಕಿರುಚಿತ್ರ ಕಾಂಪಿಟೇಷನ್

ಕಿರುಚಿತ್ರ ಕಾಂಪಿಟೇಷನ್

ತಮ್ಮ ಕಿರುಚಿತ್ರಕ್ಕೆ ಸಿಕ್ಕ ಪ್ರಶಂಸೆಯನ್ನ ಗಮನಿಸಿದ ಪವನ್ ಕುಮಾರ್, 'ಸ್ಟೀಲ್ ಫ್ಲೈ ಓವರ್ ಬೇಡ' ಎಂಬ ಹೆಸರಿನಲ್ಲಿ ಶಾರ್ಟ್ ಫಿಲ್ಮ್ ಕಾಂಪಿಟೇಷನ್ ನಡೆಸಲು ಮುಂದಾಗಿದ್ದಾರೆ. ಈ ಕಾಂಪಿಟೇಷನ್ ಗೆ ಈಗಾಗಲೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಕರೆ ಕೊಟ್ಟಿದ್ದಾರೆ.

ಅತ್ಯುತ್ತಮ ಕಿರುಚಿತ್ರಗಳಿಗೇನು,?

ಅತ್ಯುತ್ತಮ ಕಿರುಚಿತ್ರಗಳಿಗೇನು,?

ಮೊದಲ ಮೂರು ಅತ್ಯುತ್ತಮ ಕಿರುಚಿತ್ರಗಳನ್ನ ಮಾಡಿದವರಿಗೆ, ಪವನ್ ನಿರ್ದೇಶನ ಮಾಡಲಿರುವ ತಮ್ಮ ಮುಂದಿನ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತಂತೆ.

ಪರಿಸರ ಉಳಿಸುವ ಉದ್ದೇಶ

ಪರಿಸರ ಉಳಿಸುವ ಉದ್ದೇಶ

''800 ಮರಗಳ ಹನನವೇ ನನ್ನನ್ನು ತುಂಬ ಕಾಡಿದ ವಿಷಯ, ಹೀಗಾಗಿ ಈ ಕಿರುಚಿತ್ರ ತಯಾರಾಗಿದೆ. ನವೆಂಬರ್ 10ರೊಳಗೆ ಇನ್ನೂ ಒಂದೆರೆಡು ಶಾರ್ಟ್ ಫಿಲ್ಮ್ ಗಳನ್ನು ಮಾಡಿ ಯೂ ಟ್ಯೂಬ್ ನಲ್ಲಿ ಬಿಡುತ್ತೇನೆ. ಪರಿಸರಕ್ಕೆ ಹಾನಿಯಾಗಬಾರದು ಎಂಬುದಷ್ಟೇ ನಮ್ಮ ಉದ್ದೇಶ''.- ಪವನ್ ಕುಮಾರ್ ಪವನ್ ಕುಮಾರ್ ತಯಾರಿಸಿರುವ ಕಿರುಚಿತ್ರ ಇಲ್ಲಿದೆ ನೋಡಿ.....(ಕ್ಲಿಕ್ ಮಾಡಿ, ವಿಡಿಯೋ ನೋಡಿ)

English summary
The 'u turn' director pawan kumar has announced a short film contest ‘Steel Flyover Yaake Beda’(Why we don’t want the steel flyover) and invited film students and enthusiasts to make a one-minute film arguing against the project.
Please Wait while comments are loading...

Kannada Photos

Go to : More Photos