»   » ಸ್ಮೈಲ್ ಗುರು ; ಚಿತ್ರ ಚಿಕ್ಕದ್ದು, ಆಲೋಚನೆ ದೊಡ್ಡದ್ದು!

ಸ್ಮೈಲ್ ಗುರು ; ಚಿತ್ರ ಚಿಕ್ಕದ್ದು, ಆಲೋಚನೆ ದೊಡ್ಡದ್ದು!

Posted by:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಹೆಚ್ಚು ಹೆಚ್ಚು ಕಿರುಚಿತ್ರಗಳು ತಯಾರಾಗುತ್ತಿವೆ. ಕಡಿಮೆ ಖರ್ಚಿನಲ್ಲಿ ತಮಗೆ ಸಿಗುವ ಸೌಲಭ್ಯಗಳನ್ನೇ ಬಳಸಿಕೊಂಡು ಮಾಡಲ್ಪಡುವ ಈ ಚಿತ್ರಗಳು ಗುಣಮಟ್ಟದಲ್ಲಿ ಯಾವ ದೊಡ್ಡ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬರುತ್ತಿವೆ. ಹಾಗೂ ಅಷ್ಟೇ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಈಗ ಇದೇ ಸಾಲಿಗೆ ಸೇರಲು ಇನ್ನೊಂದು ಕಿರುಚಿತ್ರ ಅಣಿಯಾಗುತ್ತಿದ್ದು, ಅದರ ಹೆಸರು 'ಸ್ಮೈಲ್ ಗುರು'. ಇತ್ತೀಚೆಗಷ್ಟೆ ಈ ಚಿತ್ರ ರಾಜರಾಜೇಶ್ವರಿ ನಗರದ ‍ಷಣ್ಮುಗಂ ದೇವಸ್ಥಾನದಲ್ಲಿ ದೊಡ್ಡ ಮಟ್ಟದಲ್ಲಿ ಮುಹೂರ್ತ ಆಚರಿಸಿಕೊಂಡಿತು. ಈ ಕಿರುಚಿತ್ರಕ್ಕೆ ಹಾರೈಸಲು ನಿರ್ಮಾಪಕ ಸಾರಾ ಗೋವಿಂದು, ಚಿತ್ರ ನಿರ್ದೇಶಕ ಅಲೆಮಾರಿ ಸಂತು ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು. [ಯೂಟ್ಯೂಬಲ್ಲಿ ಕನ್ನಡ ಕಿರುಚಿತ್ರಕ್ಕೆ ಸಿಕ್ಕಾಪಟ್ಟೆ ಹಿಟ್ಸ್]

short-movie-smile-guru-launched

'ಸ್ಮೈಲ್ ಗುರು' ಚಿತ್ರವನ್ನ ನವ ಪ್ರತಿಭೆ ಉಜ್ವಲ್ ಪ್ರಸಾದ್ ನಿರ್ದೇಶಿಸುತ್ತಿದ್ದು, ನಾಯಕನಾಗಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇದೊಂದು ಉತ್ಸಾಹಿ ತಂಡವನ್ನು ಒಳಗೊಂಡಿದ್ದು ಅರ್ಜುನ್ ಕುಮಾರ್, ಆನಂದ್ ಸಾಲುಂಡಿ ಹಾಗೂ ಇನ್ನಿತರರ ಪ್ರತಿಭೆಗಳ ಸಂಗಮದಲ್ಲಿ ಕನ್ನಡಕ್ಕೊಂದು ಸದಭಿರುಚಿಯ ಕಿರುಚಿತ್ರ ಕೊಡುವ ತವಕದಲ್ಲಿದೆ. [ಬೈಟೂ ಕಾಫಿ ಕುಡಿದು ಒಂದು ಕಿರುಚಿತ್ರ ಕಳಿಸಿ ನೋಡೋಣ]

short-movie-smile-guru-launched

ಮನರಂಜನೆಯೇ ಮೂಲ ಉದ್ದೇಶ - ಕಿರುಚಿತ್ರ ಅಂದ ಕೂಡಲೆ ಏನೋ ಒಂದು ಮೆಸೇಜ್ ಒಳಗೊಂಡಿರುವುದು ಮಾಮೂಲಿ. ಆದರೆ, ಈ ಚಿತ್ರದಲ್ಲಿ ಅಂತಹ ಯಾವುದೇ ಸಂದೇಶ ಸಾರುವ ಉದ್ದೇಶ ಇಲ್ಲ. ಕೇವಲ ಮನರಂಜಿಸುವ ಉದ್ದೇಶದಿಂದ ಈ ಕಿರುಚಿತ್ರ ಮೂಡಿಬರುತ್ತಿದ್ದು, ಪಕ್ಕಾ ಕರ್ಮರ್ಶಿಯಲ್ ಫಾರ್ಮ್ಯಾಟ್ ನಲ್ಲಿ ತಯಾರಾಗುತ್ತಿದೆ.

English summary
'Smile Guru', a Short movie which is been made by budding talents of Sandalwood was launched in Shanmuga temple, Rajarajeshwari nagar, Bengaluru.
Please Wait while comments are loading...
Best of 2016

Kannada Photos

Go to : More Photos