»   » ಅನಂತ್ ಜೊತೆ 'ಬಿಗ್ ಬಾಸ್' ಶ್ವೇತಾ ಕುಚ್ ಕುಚ್

ಅನಂತ್ ಜೊತೆ 'ಬಿಗ್ ಬಾಸ್' ಶ್ವೇತಾ ಕುಚ್ ಕುಚ್

Posted by:
Subscribe to Filmibeat Kannada

ಅದಾಗಲೇ ನಟಿಯಾಗಿದ್ರೂ, ಶ್ವೇತಾ ಪಂಡಿತ್ ಜನಪ್ರಿಯತೆಗಳಿಸಿದ್ದು 'ಬಿಗ್ ಬಾಸ್' ರಿಯಾಲಿಟಿ ಶೋನಿಂದ. ಕಾರ್ಯಕ್ರಮ ಮುಗೀತಿದ್ದ ಹಾಗೆ ಮೂರ್ಮೂರು ಸಿನಿಮಾಗಳಲ್ಲಿ ಬಿಜಿಯಾಗಿರುವ ಶ್ವೇತಾ ಪಂಡಿತ್ ಇದೀಗ ಅನಂತ್ ನಾಗ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ 66 ರ ವಯಸ್ಸಲ್ಲಿ ಅನಂತ್ ನಾಗ್ ಹೀರೋ ಆಗಿ ನಟಿಸುತ್ತಿರುವ ಚಿತ್ರ ''+''. ಇನ್ನೂ ವಿಶೇಷ ಅಂದ್ರೆ, ಅನಂತ್ ಗೆ ಜೋಡಿಯಾಗಿ ಸುಧಾರಾಣಿ ಕಾಣಿಸಿಕೊಳ್ಳುತ್ತಿರುವುದು. ಇಬ್ಬರ ಮಧ್ಯೆ ನಟಿ ಶ್ವೇತಾ ಪಂಡಿತ್ ಸ್ಪೆಷಲ್ ಎಂಟ್ರಿಕೊಡುತ್ತಿರುವ ಸುದ್ದಿ ಇದೀಗ ಹೊರಬಿದ್ದಿದೆ.

Ananth Nag

ಹೇಳಿಕೇಳಿ ಸಿನಿಮಾದಲ್ಲಿ ಅನಂತ್ ಹೀರೋ! ಅದಕ್ಕಾಗಿ ಮತ್ತಷ್ಟು ಯಂಗ್ ಆಗಿರುವ ಅನಂತ್ ನಾಗ್ ಜೊತೆ ಹಾಟ್ ಬ್ಯೂಟಿ ಇದ್ರೆ ಚೆನ್ನ ಅನ್ನುವ ಕಾರಣಕ್ಕೋ ಏನೋ, ವಿಶೇಷ ಪಾತ್ರವೊಂದಕ್ಕಾಗಿ ಶ್ವೇತಾ ಪಂಡಿತ್ ಗೆ ಬುಲಾವ್ ಬಂದಿದೆ. [ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!]

ಆಫರ್ ಬಂದ ತಕ್ಷಣ ಹಿಂದುಮುಂದು ನೋಡದೆ ಓಕೆ ಅಂದುಬಿಟ್ಟಿದ್ದಾರೆ ಶ್ವೇತಾ. ಅಷ್ಟಕ್ಕೂ, ಅನಂತ್ ಜೊತೆ ಶ್ವೇತಾಗೆ ಏನು ಕೆಲಸ ಅನ್ನುವ ಪ್ರಶ್ನೆಗೆ 'ಅದೇ ಇಂಟ್ರೆಸ್ಟಿಂಗ್, ಸದ್ಯಕ್ಕೆ ಹೇಳುವ ಹಾಗಿಲ್ಲ'', ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ಶ್ವೇತಾ ಪಂಡಿತ್ ತಿಳಿಸಿದ್ರು. [ಅಂದು ಸೊಸೆ! ಇಂದು ಅನಂತ್ ಗೆ ಸುಧಾರಾಣಿ ಜೋಡಿ]

Shwetha Pandith

ವಿಭಿನ್ನ ಕಥಾಹಂದರ ಹೊಂದಿರುವ ''+'' ಸಿನಿಮಾದಲ್ಲಿ ಇನ್ನೂ ಕಣ್ಣರಳಿಸುವ ಅನೇಕ ಸಂಗತಿಗಳಿವೆ. ಅದೆಲ್ಲವೂ ಬಯಲಾಗಬೇಕಷ್ಟೇ. ಒಂದೊಂದೇ ಅಸ್ತ್ರವನ್ನ ಪ್ರಯೋಗಿಸುತ್ತಾ ಪ್ರಚಾರ ಪಡೆಯುತ್ತಿರುವ ಭಟ್ಟರ ಶಿಷ್ಯ, ನಿರ್ದೇಶಕ ಗಡ್ಡಾ ವಿಜಿ, ಸಿನಿಮಾ ತೆರೆಗೆ ಬರುವ ಹೊತ್ತಿಗೆ ಬತ್ತಳಿಕೆಯನ್ನ ಖಾಲಿ ಮಾಡಿದ್ರೆ ಸಾಕು. (ಫಿಲ್ಮಿಬೀಟ್ ಕನ್ನಡ)

English summary
Shwetha Pandith of Bigg Boss Kannada season1 fame is roped in to play important role in Ananth Nag's '+'
Please Wait while comments are loading...

Kannada Photos

Go to : More Photos