twitter
    For Quick Alerts
    ALLOW NOTIFICATIONS  
    For Daily Alerts

    ಕಪ್ಪು ಬಿಳುಪಿನಲ್ಲಿ ಕಾಡುವ ಸಿಲ್ಕ್ ಸ್ಮಿತಾ ಚಿತ್ರಗಳು

    By Rajendra
    |

    ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ...ಅ ಆ ಇ ಈ ಉ ಊ... ಎಂದು ಸಿಲ್ಕ್ ಸ್ಮಿತಾ ಮಾದಕವಾಗಿ ನರ್ತಿಸಿ ಎರಡು ದಶಕಗಳೇ ಉರುಳಿ ಹೋಗಿವೆ. ಆದರೂ ಆ ಗೀತೆಯನ್ನು ಈಗ ನೆನದರೂ ಕಲಾರಸಿಕರ ಕಲಾಪ್ರಜ್ಞೆ ಮತ್ತೆ ಜಾಗೃತವಾಗುತ್ತದೆ.

    ಅಷ್ಟರ ಮಟ್ಟಿಗೆ ಸಿಲ್ಕ್ ಸ್ಮಿತಾ ಕನ್ನಡದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸಿಲ್ಕ್ ಸ್ಮಿತಾ ಅವರದು ವರ್ಣರಂಜಿತ ವ್ಯಕ್ತಿತ್ವ. ಈಗ್ಗೆ 16 ವರ್ಷಗಳ ಹಿಂದೆ ಐಟಂ ಗರ್ಲ್ ಸಿಲ್ಕ್ ಸ್ಮಿತಾ ಸತ್ತಾಗ ಅದು ಆತ್ಮಹತ್ಯೆಯೆಂದು ಪೊಲೀಸರು ಷರಾ ಬರೆದು ಕೇಸು ಮುಚ್ಚಿಹಾಕಿದ್ದರು.

    ಆದರೆ ಅದು ಆತ್ಮಹತ್ಯೆಯಲ್ಲ ಹತ್ಯೆ ಎಂದು ವಾದಿಸುವರೂ ಇದ್ದಾರೆ. ಕಡೆಗೂ ಆಕೆಯ ಸಾವು ನಿಗೂಢವಾಗಿಯೇ ಉಳಿಯಿತು. ತಾರೆಯೊಬ್ಬಳು ದಿಢೀರ್ ಎಂದು ಕಣ್ಮರೆಯಾದರೆ ಆಕೆಯನ್ನು ಆರಾಧಿಸುವ ಪ್ರೇಕ್ಷಕ ಬಳಗ ಏನಾಗಬೇಡ. ಇಂದಿಗೂ ಆಕೆಯನ್ನು ಆರಾಧಿಸುವವರು ಇದ್ದಾರೆ. ಸಿಲ್ಕ್ ಸ್ಮಿತಾರ ಕೆಲವೊಂದು ಕಪ್ಪು ಬಿಳುಪು ಚಿತ್ರಗಳು.

    ಐಟಂ ಹಾಡುಗಳಿಗೆ ಓಂ ಕಾರ ಬರೆದ ತಾರೆ

    ಐಟಂ ಹಾಡುಗಳಿಗೆ ಓಂ ಕಾರ ಬರೆದ ತಾರೆ

    ಐಟಂ ಹಾಡು ಎಂದರೇನು ಎಂದು ಗೊತ್ತಿರದ ಕಾಲದಲ್ಲೇ ಅದಕ್ಕೆ ಓಂ ಕಾರ ಬರೆದ ತಾರೆ ಸಿಲ್ಕ್ ಸ್ಮಿತಾ. ನಿರ್ಮಾಪಕರು ಆಕೆಯ ಕಾಲ್ ಶೀಟ್ ಗಾಗಿ ತಿಂಗಾಳುನಗಟ್ಟಲೆ ದೇಹೀ ಎಂದು ಕಾಯುವ ಕಾಲವೊಂದಿತ್ತು.

    ಬಂತು ಬಂತು ಕರೆಂಟು ಬಂತು

    ಬಂತು ಬಂತು ಕರೆಂಟು ಬಂತು

    ಬಂತು ಬಂತು ಕರೆಂಟು ಬಂತು ಎಂದು 'ಲಾಕಪ್ ಡೆತ್' ಚಿತ್ರದಲ್ಲಿ ಕುಣಿಯುವ ಮೂಲಕ ಪಡ್ಡೆಗಳ ಮೈಯಲ್ಲೂ ಮಿಂಚಿನ ಸಂಚಾರ ಉಂಟು ಮಾಡಿದ್ದರು.

    ಸಿಲ್ಕ್ ಸ್ಮಿತಾ ಅಭಿನಯದ ಕನ್ನಡ ಚಿತ್ರಗಳು

    ಸಿಲ್ಕ್ ಸ್ಮಿತಾ ಅಭಿನಯದ ಕನ್ನಡ ಚಿತ್ರಗಳು

    ಅಳಿಮಯ್ಯ, ಹಳ್ಳಿಮೇಷ್ಟ್ರು, ಪ್ರಚಂಡ ಕುಳ್ಳ, ಬೇಡಿ ಚಿತ್ರಗಳ ಮೂಲಕ ಸಿಲ್ಕ್ ಸ್ಮಿತಾ ಕನ್ನಡದಲ್ಲೂ ಪ್ರೇಕ್ಷಕರ ಹೃದಯದಲ್ಲಿ ಕರೆಂಟ್ ಹರಿಸಿದ್ದರು.

    ಆಕೆ ಮೈ ಕುಲುಕಿಸಿದರೆ ಅದೇ ನೃತ್ಯ

    ಆಕೆ ಮೈ ಕುಲುಕಿಸಿದರೆ ಅದೇ ನೃತ್ಯ

    ಸಿಲ್ಮ್ ಸ್ಮಿತಾಗೆ ಆಗ ಯಾರೂ ಸ್ಪರ್ಧಿಗಳೇ ಇರಲಿಲ್ಲ. ಆಕೆ ಮೈ ಕುಲುಕಿಸಿದರೆ ನೃತ್ಯ. ದೇಹ ಬಳ್ಳಿಯಂತೆ ಇಲ್ಲದಿದ್ದರೂ ತಮ್ಮ ದೇಹವನ್ನು ಮಾತ್ರ ಬಳುಕಿಸುತ್ತಿದ್ದರು. ಚಿತ್ರ ವಿಚಿತ್ರ ಡಾನ್ಸ್ ಗಳಿಗೂ ಪ್ರೇಕ್ಷಕರು ಬಿಟ್ಟ ಕಣ್ಣು ಬಿಟ್ಟಂಗೆ ನೋಡುತ್ತಿದ್ದರು.

    ಮೂವತ್ತಾರನೇ ವಯಸ್ಸಿಗೇ ಇಹಲೋಕ ತ್ಯಜಿಸಿದರು

    ಮೂವತ್ತಾರನೇ ವಯಸ್ಸಿಗೇ ಇಹಲೋಕ ತ್ಯಜಿಸಿದರು

    ಅದೇನಾಯಿತೋ ಏನೋ 36ರ ವಯಸ್ಸಿನಲ್ಲಿ ಚೆನ್ನೈನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಆಕೆ ಹೆಣವಾಗಿದ್ದರು. ಇದರೊಂದಿಗೆ ಸಿಲ್ಕ್ ಸ್ಮಿತಾ ಯುಗ ಅಂತ್ಯವಾಯಿತು.

    ಸಿಲ್ಕ್ ಸ್ಮಿತಾ ನಿಜನಾಮಧೇಯ ವಿಜಯಲಕ್ಷ್ಮಿ

    ಸಿಲ್ಕ್ ಸ್ಮಿತಾ ನಿಜನಾಮಧೇಯ ವಿಜಯಲಕ್ಷ್ಮಿ

    ವಿಜಯ ಲಕ್ಷ್ಮಿ ವಡ್ಲ ಪಾಟಿ ಎಂಬುದು ಸಿಲ್ಕ್ ಸ್ಮಿತಾ ಅವರ ನಿಜನಾಮಧೇಯ. ತಮಿಳಿನ 'ವಂಡಿ ಚಕ್ರಂ' ಚಿತ್ರದಲ್ಲಿನ ತಮ್ಮ 'ಸಿಲ್ಕ್' ಪಾತ್ರವೇ ಮುಂದೆ ಅವರ ಹೆಸರಾಗಿ ಬದಲಾಯಿತು.

    ನಾಲ್ಕು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

    ನಾಲ್ಕು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

    ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 450ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿಲ್ಕ್ ಸ್ಮಿತಾ ಅಭಿನಯಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    ಸಿಲ್ಕ್ ಸ್ಮಿತಾ ಓದಿದ್ದು ಕೇವಲ ನಾಲ್ಕನೆ ಕ್ಲಾಸು

    ಸಿಲ್ಕ್ ಸ್ಮಿತಾ ಓದಿದ್ದು ಕೇವಲ ನಾಲ್ಕನೆ ಕ್ಲಾಸು

    ಆಂಧ್ರ ಪ್ರದೇಶದ ಏಲೂರಿನ ಬಡ ಕುಟುಂಬದಲ್ಲಿ ಜನಿಸಿದ ಸಿಲ್ಕ್ ಸ್ಮಿತಾ ಓದಿದ್ದು ಕೇವಲ ನಾಲ್ಕನೇ ಕ್ಲಾಸಿನ ತನಕ. ಬಾಲ್ಯದಲ್ಲೇ ಮದುವೆಯಾಗಿತ್ತು. ಆದರೆ ಗಂಡನ ಹಾಗೂ ಅತ್ತೆಯ ಕಡೆಯವರ ಕಾಟ ತಾಳಲಾರದೆ ಮದ್ರಾಸ್ ಗೆ ಓಡಿಹೋಗಿದ್ದರು.

    ಡಿ ಗ್ರೇಡ್ ಪಾತ್ರಗಳಿಂದ ಕ್ಯಾಬರೆವರೆಗೆ

    ಡಿ ಗ್ರೇಡ್ ಪಾತ್ರಗಳಿಂದ ಕ್ಯಾಬರೆವರೆಗೆ

    ಆರಂಭದಲ್ಲಿ ಸಿಲ್ಕ್ ಸ್ಮಿತಾಗೆ ಸಿಕ್ಕಿದ್ದೆಲ್ಲಾ ಡಿ ಗ್ರೇಡ್ ಪಾತ್ರಗಳೇ. ಬಳಿಕ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದರು. ಆಕೆಯ ಬಾಳಿಗೊಂದು ತಿರುವು ಕೊಟ್ಟವರು ವಿನು ಚಕ್ರವರ್ತಿ ಎಂಬ ಫ್ಲೋರ್ ಮಿಲ್ ಮಾಲೀಕ.

    ಇನ್ನೊಂದು ತಿರುವು ಪಡೆದ ಸಿಲ್ಕ್ ವೃತ್ತಿ ಬದುಕು

    ಇನ್ನೊಂದು ತಿರುವು ಪಡೆದ ಸಿಲ್ಕ್ ವೃತ್ತಿ ಬದುಕು

    ವಿನು ಚಕ್ರವರ್ತಿ ಅವರ ಪತ್ನಿ ನೃತ್ಯ ಹಾಗೂ ಇಂಗ್ಲಿಷ್ ಭಾಷೆಯನ್ನು ಸಿಲ್ಕ್ ಸ್ಮಿತಾಗೆ ಕಲಿಸಿದರು. ಅಲ್ಲಿಂದ ಸಿಲ್ಕ್ ವೃತ್ತಿಜೀವನ ಮತ್ತೊಂದು ತಿರುವು ಪಡೆದುಕೊಂಡಿತು. ಬಳಿಕ ಆಕೆ ಕುಣಿದದ್ದೇ ನೃತ್ಯ, ಹಾಕಿದ್ದೇ ಬಟ್ಟೆ ಎಂಬಂತಾಯಿತು.

    English summary
    Actress Silk Smitha's Unseen Hot Pics. The moment you hear the name, Silk Smitha, the adjectives like sex siren, voluptuous, etc., automatically comes to your mind. That was the power of late actress, who took the bold acts in South cinema to a never-before level during her times.
    Monday, May 27, 2013, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X