»   » ಸಿಎಂ 'ಶ್ರೀಕಂಠ' ಜನವರಿ 6 ಕ್ಕೆ ತೆರೆಮೇಲೆ

ಸಿಎಂ 'ಶ್ರೀಕಂಠ' ಜನವರಿ 6 ಕ್ಕೆ ತೆರೆಮೇಲೆ

Written by:
Subscribe to Filmibeat Kannada

ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಡಾ.ಶಿವರಾಜ್‌ ಕುಮಾರ್ ಅಭಿನಯದ 'ಶ್ರೀಕಂಠ' ಸಿನಿಮಾ ಬಿಡುಗಡೆ ದಿನಾಂಕ ಕೊನೆಗೂ ಹೊರಬಿದ್ದಿದೆ. ಸಿಂಹದ ಮರಿ ಡಾ. ಶಿವರಾಜ್‌ಕುಮಾರ್ CM ಆಗಿ ನಟಿಸಿರುವ 'ಶ್ರೀಕಂಠ 2017 ಜನವರಿ 6 ರಂದು ಅದ್ಧೂರಿಯಾಗಿ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ.[ಶಿವಣ್ಣನ 'ಶ್ರೀಕಂಠ' ಚಿತ್ರಕ್ಕೆ ಅದ್ದೂರಿ ಮುಹೂರ್ತ]

srikanta

'ಶ್ರಾವಣಿ-ಸುಬ್ರಮಣ್ಯ' ಚಿತ್ರದ ನಂತರ ನಿರ್ದೇಶಕ ಮಂಜು ಸ್ವರಾಜ್ ಆಕ್ಷನ್‌ ಕಟ್‌ ಹೇಳಿರುವ ಕನಸಿನ ಕೂಸು 'ಶ್ರೀಕಂಠ' ಸಿನಿಮಾ. 'ಶ್ರೀಕಂಠ' ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಾಯಕ ನಟನೆಯ 114 ನೇ ಸಿನಿಮಾ.

ಶಿವರಾಜ್‌ ಕುಮಾರ್ 'CM' ಅರ್ಥಾತ್ C (ಕಾಮನ್) M (ಮ್ಯಾನ್) ಆಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ನಾಯಕ ನಟಿಯಾಗಿ 'ಚಾಂದಿನಿ ಶ್ರೀಧರನ್' ಅಭಿನಯಿಸಿದ್ದಾರೆ.

srikanta 1

ಸಾಮಾಜಿಕ ಸಂದೇಶ ಸಾರುವ 'ಶ್ರೀಕಂಠ' ಸಿನಿಮಾಗೆ 'ಬಿ ಅಜನೀಶ್ ಲೋಕನಾಥ್' ಸಂಗೀತ ನಿರ್ದೇಶನವಿದ್ದು, ಸಿನಿಮಾಗೆ ಎಂ ಎಸ್ ಮನು ಗೌಡ ಹಣ ಹೂಡಿದ್ದಾರೆ. ಶ್ರೀಕಂಠ ಚಿತ್ರ ಬಿಡುಗಡೆಗೆ ನೋಟ್ ಬ್ಯಾನ್‌ ಎಫೆಕ್ಟ್ ನಿಂದ ನಿರ್ಮಾಪಕರು ತಡಮಾಡುತ್ತಿದ್ದರೂ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಕಡೆಗೂ ಚಿತ್ರ 2017 ಜನವರಿ 6 ರಂದು ಪ್ರಪಂಚದಾದ್ಯಂತ ತೆರೆಕಾಣುತ್ತಿದೆ.

 

English summary
Hartick hero Sivarajkumar starrer Srikanta Kannada movie Release date announced. Srikanta is an upcoming Indian Kannada romantic action film written and directed by Manju Swaraj.
Please Wait while comments are loading...

Kannada Photos

Go to : More Photos