»   » ನಟಿ ರಾಗಿಣಿ ಮನೆಯಲ್ಲಿ ಹರಿದಾಡಿದ ಮಿಡಿ ನಾಗಿಣಿ

ನಟಿ ರಾಗಿಣಿ ಮನೆಯಲ್ಲಿ ಹರಿದಾಡಿದ ಮಿಡಿ ನಾಗಿಣಿ

Posted by:
Subscribe to Filmibeat Kannada

ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ರಾಗಿಣಿ ದ್ವಿವೇದಿ ಅವರ ಮನೆಯಲ್ಲಿ ಮಿಡಿ ನಾಗರಹಾವು ಕಾಣಿಸಿಕೊಂಡಿದೆ. ಬಳಿಕ ಅದನ್ನು ಹಿಡಿದು ಸುರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ. ಈ ಬಗ್ಗೆ ಟ್ವೀಟಿಸಿರುವ ರಾಗಿಣಿ ಹಾವನ್ನು ಕಂಡು ಬೆಚ್ಚಿಬಿದ್ದಿಲ್ಲ. ಬದಲಾಗಿ ಮುದ್ದಾಗಿದೆ ಎಂದಿದ್ದಾರೆ.

ಆದರೆ ನಮ್ಮ ಖ್ಯಾತ ಕವಿಗಳಾದ ಪಂಜೆ ಮಂಗೇಶರಾಯರ "ನಾಗರಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೆ ಕೈಯನು ಮುಗಿವೆ ಹಾಲನೀವೆ ಬಾ ಬಾ ಬಾ" ಎಂಬ ಗೀತೆಯನ್ನಂತೂ ರಾಗಿಣಿ ಹಾಡಿಲ್ಲ ಬಿಡಿ.

Snake enters Ragini house

ಮನೆಗೆ ಬಂದ ಅತಿಥಿ ನಾಗಪ್ಪನ ಫೋಟೋವನ್ನೂ ತೆಗೆದು ತಮ್ಮ ಟ್ವಿಟ್ಟರ್ ಖಾತೆಯಲಿ ಪ್ರಕಟಿಸಿದ್ದಾರೆ. ನೀವೀಗ ಚಿತ್ರದಲ್ಲಿ ನೋಡುತ್ತಿರುವುದು ಅದೇ ಹಾವು. ರಾಗಿಣಿ ಮೊದಲೇ ಬಳುಕುವ ಬಳ್ಳಿ ಹಾಗಾಗಿ ಅವರನ್ನು ನೋಡಲು ಹಾವು ಬಳುಕುತ್ತಾ ಬಂತೋ ಏನೋ.

ಇತ್ತೀಚೆಗೆ ರಾಗಿಣಿ ಎರಡು ಕನ್ನಡ ಚಿತ್ರಗಳಿಗೆ ಸಹಿಹಾಕಿದ್ದಾರೆ. ಎರಡೂ ಚಿತ್ರಗಳಿಗೆ ಒಬ್ಬರೇ ನಿರ್ದೆಶಕರು. 'ದಂಡುಪಾಳ್ಯ' ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು ನಿರ್ದೇಶಿಸುತ್ತಿರುವ ಎರಡು ಚಿತ್ರಗಳಿಗೆ ರಾಗಿಣಿ ನಾಯಕಿ.

ಒಂದು ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಬಸವಣ್ಣ ಚಿತ್ರ. ಇನ್ನೊಂದು ಚಿತ್ರಕ್ಕೆ ಇನ್ನೂ ನಾಮಕರಣವಾಗಿಲ್ಲ. ಈ ಎರಡೂ ಚಿತ್ರಗಳಿಗೆ ರಾಗಿಣಿ ಪಡೆದಿರುವ ಸಂಭಾವನೆ ರು.50 ಲಕ್ಷ. ಈ ಮೂಲಕ ಕನ್ನಡದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ತಾರೆಯಾಗಿ ರಾಗಿಣಿ ಹೊರಹೊಮ್ಮಿದ್ದಾರೆ.

ಈ ಸುದ್ದಿ ನಾಗಪ್ಪನ ಕಿವಿಗೂ ಬಿತ್ತೋ ಏನೋ ಗೊತ್ತಿಲ್ಲ. ರಾಗಿಣಿಯನ್ನು ನೋಡಿಕೊಂಡು ಹೋಗಲು ಬಂದಿದ್ದ ಎನ್ನಿಸುತ್ತದೆ. ಈ ಹಿಂದೊಮ್ಮೆ ಅಭಿನಯ ಶಾರದೆ ಜಯಂತಿ ಅವರ ತೋಟದ ಮನೆಗೆ ಅಪರೂಪದ ಅತಿಥಿ ಬಂದಿದ್ದ ಸುದ್ದಿ ಇಲ್ಲಿದೆ ಓದಿ. (ಒನ್ಇಂಡಿಯಾ ಕನ್ನಡ)

English summary
A small cobra enters into Kannada actress Ragini Dwivedi house in Bangalore. Later the snake was rescued. Ragini tweets as, Mrning guys ...Found babii nag deva ( babii snake ) in our home today :) say jai nag deva :) it was beautiful babe :)
Please Wait while comments are loading...

Kannada Photos

Go to : More Photos