twitter
    For Quick Alerts
    ALLOW NOTIFICATIONS  
    For Daily Alerts

    ಶತದಿನೋತ್ಸವ ಸಂಭ್ರಮದಲ್ಲಿ ಶ್ರೀಮುರಳಿ 'ಉಗ್ರಂ'

    By Rajendra
    |

    ಕನ್ನಡ ಚಿತ್ರಗಳು ಶತಕ ಬಾರಿಸಿ ಬಹಳ ದಿನಗಳೇ ಸರಿದುಹೋಗಿವೆ. ಸೈಲೆಂಟ್ ಸ್ಟಾರ್ ಶ್ರೀಮುರಳಿ ಅಭಿನಯದ 'ಉಗ್ರಂ' ಚಿತ್ರ ಶತಕ ಸಿಡಿಸುತ್ತಿರುವ ಈ ವರ್ಷದ ಮೊದಲ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗುತ್ತಿದೆ. ಫೆಬ್ರವರಿ 27, 2014ರಂದು ತೆರೆಕಂಡ 'ಉಗ್ರಂ' ಚಿತ್ರ ಶತಕದ ಹೊಸ್ತಿಲಲ್ಲಿ ನಿಂತಿದೆ.

    ಬೆಂಗಳೂರುನ ಸ್ವಪ್ನ ಸೇರಿದಂದ ರಾಜ್ಯದ ಸರಿಸುಮಾರು 30ಕ್ಕೂ ಅಧಿಕ ಕೇಂದ್ರಗಳಲ್ಲಿ 'ಉಗ್ರಂ' ಚಿತ್ರ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ. ಈಗಿನ ಫಾಸ್ಟ್ ದುನಿಯಾದಲ್ಲಿ ಐವತ್ತು ದಿನಗಳನ್ನು ಪೂರೈಸುವುದೇ ಸವಾಲಿನ ಕೆಲಸ. ಇಪ್ಪತ್ತು, ಇಪ್ಪತ್ತೈದು ದಿನಗಳಿಗೆಲ್ಲಾ ಈಗ ಸುಸ್ತೋ ಸುಸ್ತು ಎಂಬಂತಾಗಿದೆ. [ಉಗ್ರಂ ಚಿತ್ರ ವಿಮರ್ಶೆ]

    ಆದರೆ 'ಉಗ್ರಂ' ಚಿತ್ರ ತನ್ನ ಮೇಕಿಂಗ್ ನಿಂದಾಗಿ, ಅತ್ಯುತ್ತಮ ಚಿತ್ರಕಥೆಯಿಂದಾಗಿ ಎಲ್ಲರ ಗಮನಸೆಳೆಯಿತು. ಶ್ರೀಮುರಳಿ ಅನ್ನೋ ಹೀರೋ ಫೀನಿಕ್ಸ್ ನಂತೆ ಎದ್ದು ಬಂದಿದ್ದಾರೆ. 'ಉಗ್ರಂ' ಸಿನಿಮಾ ಮೂಲಕ ಮುರಳಿ ಮರಳಿ ಬಂದಿದ್ದಾರೆ. ಮುರಳಿ ಸಿನಿಮಾವನ್ನ ಕೊಳ್ಳೋಕೆ ತಮಿಳು, ತೆಲುಗು ಚಿತ್ರರಂಗದವರು ಭರ್ಜರಿ ಆಫರ್ ಕೊಟ್ಟಿದ್ದಾರೆ.

    ಮಲ್ಟಿಫ್ಲೆಕ್ಸ್ ಗಳಲ್ಲೂ ಭರ್ಜರಿ ಕಲೆಕ್ಷನ್

    ಮಲ್ಟಿಫ್ಲೆಕ್ಸ್ ಗಳಲ್ಲೂ ಭರ್ಜರಿ ಕಲೆಕ್ಷನ್

    ಪ್ರಶಾಂತ್ ನೀಲ್ ಅವರ ಚೊಚ್ಚಲ ನಿರ್ದೇಶನದ 'ಉಗ್ರಂ' ಚಿತ್ರ ಕೇವಲ ಸಿಂಗಲ್ ಸ್ಕ್ರೀನ್ ತೆರೆಯ ಮೇಲಷ್ಟೇ ಅಲ್ಲದೆ ಮಲ್ಟಿಫ್ಲೆಕ್ಸ್ ಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿರುವುದು ವಿಶೇಷ. ಚಿತ್ರವನ್ನು ಮೊದಲ ಬಾರಿಗೆ ಕೋಲಾರ ಗೋಲ್ಡ್ ಫೀಲ್ಡ್ಸ್ ನಲ್ಲಿರುವ ಚಿನ್ನದ ಗಣಿಯ ಸೈನೇಡ್ ರಾಶಿಯ ಹೊರಗೆ ಚಿತ್ರಿಸಲಾಗಿದೆ.

    ಅತ್ಯುತ್ತಮ ಚಿತ್ರಕಥೆಯೇ ಉಗ್ರಂ ಜೀವಾಳ

    ಅತ್ಯುತ್ತಮ ಚಿತ್ರಕಥೆಯೇ ಉಗ್ರಂ ಜೀವಾಳ

    ಆರಂಭದಿಂದ ಕೊನೆಯವರೆಗೂ ಕುತೂಹಲ ಕೆರಳಿಸುವ 'ಉಗ್ರಂ' ತನ್ನ ಅತ್ಯುತ್ತಮ ಚಿತ್ರಕಥೆಯಿಂದಾಗಿ ಪ್ರೇಕ್ಷಕರ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಪಾತ್ರವರ್ಗದಲ್ಲಿ ತಿಲಕ್ ಶೇಖರ್, ಪದ್ಮಜಾ ರಾವ್, ಮಿತ್ರ, ಜೈ ಜಗದೀಶ್, ಅವಿನಾಶ್, ಅತುಲ್ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ.

    ನಾಲ್ಕು ವಾರಗಳಲ್ಲಿ ರು.34 ಕೋಟಿ ಕಲೆಕ್ಷನ್

    ನಾಲ್ಕು ವಾರಗಳಲ್ಲಿ ರು.34 ಕೋಟಿ ಕಲೆಕ್ಷನ್

    ನಾಲ್ಕು ವಾರಗಳಲ್ಲಿ ರು.34 ಕೋಟಿ ಕಲೆಕ್ಷನ್ ಮಾಡಿ ಶ್ರೀಮುರಳಿ ವೃತ್ತಿ ಬದುಕಿನಲ್ಲಿ ಹೊಸ ಮೈಲಿಗಲ್ಲಾಗಿ ಹೊರಹೊಮ್ಮಿದೆ ಉಗ್ರಂ.

    ಸಪ್ತಸಾಗರದಾಚೆಗೂ 'ಉಗ್ರಂ'

    ಸಪ್ತಸಾಗರದಾಚೆಗೂ 'ಉಗ್ರಂ'

    ಇಂಕ್ ಫೈನೇಟ್ ಪಿಕ್ಚರ್ಸ್ ಸಹಯೋಗದೊಂದಿಗೆ ರೀಲ್ ಬಾಕ್ಸ್ ಸಂಸ್ಥೆ ಅಮೆರಿಕ, ಆಸ್ಟ್ರೇಲಿಯಾ, ಯುಎಇ ಮತ್ತು ಜರ್ಮನಿಯಲ್ಲಿರುವ ಪ್ರೇಕ್ಷಕರಿಗೆ 'ಉಗ್ರಂ' ಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಿದೆ.

    ಉಗ್ರಂ ರೀಮೇಕ್ ಗೆ ಬಲು ಡಿಮ್ಯಾಂಡ್

    ಉಗ್ರಂ ರೀಮೇಕ್ ಗೆ ಬಲು ಡಿಮ್ಯಾಂಡ್

    ಪರಭಾಷೆಯಲ್ಲೂ ಚಿತ್ರಕ್ಕೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಾಮುಂದು ತಾಮುಂದು ಎಂದು ಪರಭಾಷಾ ತಾರೆಗಳು ಉಗ್ರಂ ರೀಮೇಕ್ ಗೆ ಮುಂದಾಗಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಗೆ ಬದಲಾಗಿ ಪ್ರಭಾಸ್ ಅವರು 'ಉಗ್ರಂ' ರೀಮೇಕ್ ನಲ್ಲಿ ಅಭಿನಯಿಸಲಿದ್ದಾರೆ.

    English summary
    Kannada movie Ugramm completed running towards 100 days and declared as a "MASS HIT". It stars Srimurali and Haripriya as the lead pair, supported by Thilak Shekar, Atul Kulkarni, Avinash, Jai Jagadish, Padmaja Rao and others.
    Wednesday, May 28, 2014, 16:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X