»   » ಉಗ್ರಂ 'ಶ್ರೀಮುರುಳಿ'ಯ ರೌದ್ರಾವತಾರ ನೋಡಿದ್ದೀರಾ?

ಉಗ್ರಂ 'ಶ್ರೀಮುರುಳಿ'ಯ ರೌದ್ರಾವತಾರ ನೋಡಿದ್ದೀರಾ?

Posted by:
Subscribe to Filmibeat Kannada

ನಟ ಶ್ರೀಮುರುಳಿಯನ್ನ ಆಲ್ಮೋಸ್ಟ್ ಮರೆತೇಬಿಟ್ಟಿದ್ದ ಕಾಲದಲ್ಲಿ, ಇಡೀ ಗಾಂಧಿನಗರ ಮತ್ತೆ ಅವ್ರತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ 'ಉಗ್ರಂ'. ಅದ್ಯಾವಾಗ ಶ್ರೀಮುರುಳಿ 'ಉಗ್ರಂ' ಅವತಾರ ತಾಳಿದ್ರೋ, ಅಂದಿನಿಂದ ಶ್ರೀಮುರುಳಿಯ ಅದೃಷ್ಟ ಖುಲಾಯಿಸಿಬಿಟ್ಟಿದೆ.

ಅದಾಗಲೇ ಯಶಸ್ವಿ 100 ದಿನ ಪೂರೈಸಿರುವ 'ಉಗ್ರಂ' ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡಿದ್ದು ಒಂದೆರಡು ರೆಕಾರ್ಡ್ ಗಳಿಂದಲ್ಲ. ಆದ್ರೀಗ ಅದೆಲ್ಲಾ ಹಳೇ ಸುದ್ದಿ. ಅಂದು ಮಿಂಚಿನ ಸಂಚಲನ ಮೂಡಿಸಿದ್ದ ಶ್ರೀಮುರುಳಿ ಈಗ ಏನ್ ಮಾಡ್ತಿದ್ದಾರೆ. ಅವರ ಮುಂದಿನ ಸಿನಿಮಾ ಯಾವ್ದು ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ['ಉಗ್ರಂ' ಶ್ರೀಮುರಳಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್]

ಶ್ರೀಮುರುಳಿಯ ಮುಂದಿನ ಸಿನಿಮಾ 'ರಥಾವರ'. ಹೆಸರೇ ಹೇಳುವಂತೆ ಇದು ಕಂಪ್ಲೀಟ್ ಆಕ್ಷನ್ ಸಿನಿಮಾ. ಹೀಗಾಗಿ ಈಗಿರುವುದಕ್ಕಿಂತ ಸ್ವಲ್ಪ ಹೆಚ್ಚಾಗಿ ಶ್ರೀಮುರುಳಿ ಕಟ್ಟುಮಸ್ತಾಗಿರ್ಬೇಕು. ಅದಕ್ಕೋಸ್ಕರ ಭರ್ಜರಿ ತಯಾರಿ ನಡೆಸುತ್ತಿರುವ ಶ್ರೀಮುರುಳಿಯ ಹೊಸ ಲುಕ್ ಹೇಗಿದೆ ಗೊತ್ತಾ?

Srimuruli1

ಹುರಿಗಟ್ಟಿದ ಮೀಸೆ ಮತ್ತು ಗಡ್ಡ ಬಿಟ್ಟು ಸಖತ್ ಖಡಕ್ ಆಗಿ ಕಾಣುವ ಶ್ರೀಮುರುಳಿಯ ಈ ಹೊಸ ಅವತಾರ 'ರಥಾವರ'ಕ್ಕಾಗಿ. ಹೊಸ ರೌದ್ರಾವತಾರಕ್ಕೋಸ್ಕರ ತುಂಬಾ ಸಮಯ ಮೀಸಲಿಟ್ಟಿದ್ದ ಶ್ರೀಮುರುಳಿ ಇದೀಗ ಅದನ್ನ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ರಿವೀಲ್ ಮಾಡಿದ್ದಾರೆ. ''ಕೆಲಸ ಕರೆಕ್ಟ್ ಆಗಿ ಬರಬೇಕಂದ್ರೆ, ಸ್ವಲ್ಪ ರೈಟ್ ಮತ್ತು ಟೈಮ್ ಕೊಡೋದು ಮುಖ್ಯ'' ಅಂತ ಸ್ಟೇಟಸ್ ಹಾಕಿ ಶ್ರೀಮುರುಳಿ ಕೊಟ್ಟಿರೋ ನ್ಯೂ ಲುಕ್ ಇಲ್ಲಿದೆ ನೋಡಿ.

Srimuruli2

ಶ್ರೀಮುರುಳಿಯ ಲುಕ್ ಏನೋ ಔಟ್ ಆಗಿದೆ. ಆದ್ರೆ ರಥಾವರ ಫಸ್ಟ್ ಲುಕ್ ಯಾವಾಗ ಔಟ್ ಆಗಲಿದೆ ಅಂತ ''ಫಿಲ್ಮಿಬೀಟ್ ಕನ್ನಡ'' ಪ್ರಶ್ನಿಸಿದಾಗ ಅದಕ್ಕೆ ಶ್ರೀಮುರುಳಿ ''ನನ್ನ ಬರ್ತಡೇ ದಿನ'' ಅಂದ್ರು.

ಡಿಸೆಂಬರ್ 17 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶ್ರೀಮರುಳಿ, ಅಂದೇ ತಮ್ಮ ಹೊಸ ಚಿತ್ರ 'ರಥಾವರ' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಕೊಡೋಕೆ ನಿರ್ಧರಿಸಿದ್ದಾರೆ. ಈಗಾಗ್ಲೇ ಪ್ರೀ ಪ್ರೊಡಕ್ಷನ್ ವರ್ಕ್ ಗೆ ಚಾಲನೆ ಸಿಕ್ಕಿದ್ದು, ಸದ್ಯದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ. ['ಉಗ್ರಂ' ರೀಮೇಕ್ ರೈಟ್ಸ್ ನಾಟ್ ಫಾರ್ ಸೇಲ್]

'ರಥಾವರ' ಚಿತ್ರಕ್ಕೆ ಗಾಂಧಿನಗರದ ಸಂಪ್ರದಾಯದಂತೆ ಅದ್ದೂರಿಯಾಗಿ ಮುಹೂರ್ತ ನೆರವೇರಿಸದಿರಲು ಶ್ರೀಮುರುಳಿ ನಿರ್ಧರಿಸಿದ್ದಾರೆ. ನಿರ್ಮಾಪಕ ಮಂಜುನಾಥ್ ಅವರಿಗಿದು ಮೊದಲ ಸಿನಿಮಾ ಆಗಿರುವ ಕಾರಣ, ''ಜೋರಾಗಿ ಮುಹೂರ್ತ ಮಾಡಿ ದುಡ್ಡು ವೇಸ್ಟ್ ಮಾಡುವ ಬದಲು, ಅದೇ ದುಡ್ಡಲ್ಲಿ ಸಿನಿಮಾ ಇನ್ನೂ ರಿಚ್ಚಾಗಿ ಮಾಡಬಹುದು. ಅನಾವಶ್ಯಕ ಖರ್ಚುಗಳಿಂದ ನಾನು ನಿರ್ಮಾಪಕರಿಗೆ ಹೊರೆಯಾಗುವುದಕ್ಕೆ ಇಷ್ಟ ಇಲ್ಲ, ಹೀಗಾಗಿ ಸಣ್ಣದಾಗಿ ಚಿತ್ರತಂಡದ ಮಟ್ಟಕ್ಕೆ ಮುಹೂರ್ತ ಮಾಡಿ ಶೂಟಿಂಗ್ ಶುರುಮಾಡುತ್ತೀವಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಶ್ರೀಮುರುಳಿ ತಿಳಿಸಿದರು. ['ಉಗ್ರಂ ವೀರಂ'ಗೆ ಶ್ರೀಕಾರ ಹಾಕಿದ ಶ್ರೀಮುರಳಿ]

'ಆನೆ ಪಟಾಕಿ' ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರು, 'ರಥಾವರ'ಗೆ ನಿರ್ದೇಶಕ. ಮಾಸ್ ಮತ್ತು ಕಮರ್ಶಿಯಲ್ ಎಲಿಮೆಂಟ್ಸ್ ಇರುವ ಚಿತ್ರ 'ರಥಾವರ'. ಸದ್ಯಕ್ಕೆ 'ರಥಾವರ' ರೂಪ ದರ್ಶನವಾಗಿದ್ದು, ಅದನ್ನ ತೆರೆಮೇಲೆ ನೋಡೋಕೆ ಮುಂದಿನ ವರ್ಷದವರೆಗೂ ಕಾಯಿರಿ. (ಫಿಲ್ಮಿಬೀಟ್ ಕನ್ನಡ)

English summary
After the success of Ugramm, Actor Srimuruli is gearing up for his next project 'Rathavara'. Srimuruli's new raw look for Rathavara is out. Take a look.
Please Wait while comments are loading...

Kannada Photos

Go to : More Photos