»   » ಕಿಚ್ಚ ಸುದೀಪ್ ಬಗ್ಗೆ 'ಈಗ' ರಾಜಮೌಳಿ ಪ್ರತಿಕ್ರಿಯೆ!

ಕಿಚ್ಚ ಸುದೀಪ್ ಬಗ್ಗೆ 'ಈಗ' ರಾಜಮೌಳಿ ಪ್ರತಿಕ್ರಿಯೆ!

Posted By:
Subscribe to Filmibeat Kannada
<ul id="pagination-digg"><li class="previous"><a href="/news/kichcha-sudeep-eega-ss-rajamouli-talk-success-066623.html">« Previous</a>
SS Rajamouli Sudeep
ಚಿತ್ರೀಕರಣ ಹಂತದದವರೆಗೂ ಆ ಚಿತ್ರದ ನಟ ಸುದೀಪ್ ಅವರಿಗೆ ಹಾಗಿರಲಿ, ಸಂಪೂರ್ಣ ಚಿತ್ರತಂಡದಲ್ಲಿ ಯಾರಿಗೂ ನೊಣ ಹೇಗೆ ಸೇಡು ತೀರಿಸಿಕೊಳ್ಳುತ್ತದೆ ಎಂಬ ಬಗ್ಗೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ನೊಣವನ್ನು ಕಲ್ಪಿಸಿಕೊಂಡು ನಟಿಸಬೇಕಿದ್ದ ಸುದೀಪ್‌ ಅವರಿಗೆ ಪ್ರತಿ ಹಂತದಲ್ಲೂ ರಾಜಮೌಳಿ ತಾವೇ ಸ್ವತಃ ನಟಿಸಿ ತೋರಿಸುತ್ತಿದ್ದರಂತೆ.

ನೊಣದ ವರ್ತನೆ ಹೀಗಿರಬೇಕು ಎಂಬುದನ್ನು ನಟ ನಾಣಿಯವರನ್ನೇ ಬಳಸಿಕೊಂಡು ಸಿದ್ಧಪಡಿಸಿ ಗ್ರಾಫಿಕ್ಸ್ ರೆಡಿ ಮಾಡಿಸಿದ್ದರು. ಆರಂಭಿಕ ಟೀಮ್ ಯಾವುದೋ ಕಾರ್ಟೂನ್‌ ನಂತೆ ನೊಣವನ್ನು ಚಿತ್ರೀಕರಿಸಿ ರಾಜಮೌಳಿಗೆ ನಿರಾಸೆಯನ್ನು ಉಂಟು ಮಾಡಿತ್ತಾದರೂ ಅವರು ಧೃತಿಗೆಡದೇ ಇನ್ನೊಂದು ಹೊಸ ಟೀಮ್ ಕಟ್ಟಿ ನೊಣದ ಗ್ರಾಫಿಕ್ಸ್ ಕೆಲಸ ಮುಂದುವರಿಸಿ ಅದರಲ್ಲಿ ಯಶಸ್ವಿಯಾದರು.

'ಈಗ' ಚಿತ್ರದ ಕಲ್ಪನೆ ಸಂಪೂರ್ಣವಾಗಿ ರೆಡಿಯಾದ ನಂತರವಷ್ಟೇ ಸುದೀಪ್ ಆ ಪ್ರಾಜೆಕ್ಟಿಗೆ ಎಂಟ್ರಿ ಕೊಟ್ಟಿದ್ದರು. ನಂತರದ ಬದಲಾವಣೆಗಳಲ್ಲಿ ಸುದೀಪ್ ಪಾತ್ರ ಸಾಕಷ್ಟು ಇತ್ತಾದರೂ ಅಲ್ಲಿ ಎಲ್ಲವೂ ರಾಜಮೌಳಿಯವರದೇ ಸೃಷ್ಟಿ. ಅವರೇ ಚಿತ್ರಕ್ಕೆ ಕ್ಯಾಪ್ಟನ್. ಹೀಗೆಯೇ ಎಲ್ಲೆಡೆಯೂ ಹೇಳುವ ಸುದೀಪ್ ಅದನ್ನು ಆಗಾಗ ನೆನಪು ಮಾಡಿಕೊಳ್ಳುತ್ತಾರಂತೆ.

ನಿರ್ದೇಶಕ ರಾಜಮೌಳಿಗೆ ಸಲ್ಲಿಸಬೇಕಾದ ಕೀರ್ತಿ ಹಾಗೂ ಕೃತಜ್ಞತೆಯನ್ನು ತಮ್ಮ ಮಾತು ಹಾಗೂ ಕೃತಿಯ ಮೂಲಕ ಸಲ್ಲಿಸಿಬಿಟ್ಟಿದ್ದಾರೆ ಸುದೀಪ್. ರಾಜಮೌಳಿಯವರೊಬ್ಬ ಅದ್ಭುತ ನಿರ್ದೇಶಕ ಎಂದು ಹೋದೆಡೆಯಲ್ಲೆಲ್ಲ ಕೊಂಡಾಡುವುದಷ್ಟೇ ಅಲ್ಲ. ಅವರು ಹೇಳಿದಂತೆ ನಟಿಸಿದ್ದಷ್ಟೇ ತಮ್ಮ ಕೆಲಸ ಎಂಬ ಸೌಜನ್ಯದ ನುಡಿ ಸುದೀಪ್ ಅವರದು.

ಆದರೆ ರಾಜಮೌಳಿಯವರನ್ನು ಮಾತನಾಡಿಸಿದರೆ ಸಿಗುವ ಉತ್ತರ ವಿಭಿನ್ನ, ಕುತೂಹಲಕರ. "ಸುದೀಪ್ ನನ್ನ ಪ್ರಾಜೆಕ್ಟಿಗೆ ಸಿಗದಿದ್ದರೆ ನಾನು ಈ ಚಿತ್ರವನ್ನು ಮಾಡುತ್ತಲೇ ಇರಲಿಲ್ಲ. ಬಹುಶಃ ಸುದೀಪ್ ಎಂಬ ಅದ್ಭುತ ನಟನೊಬ್ಬ ಇಲ್ಲದೇ ಇರುತ್ತಿದ್ದರೆ..? ನನಗೆ ಈ ಚಿತ್ರ ಮಾಡುವ ಸುಯೋಗವೇ ದೊರೆಯುತ್ತಿರಲಿಲ್ಲ". ಇದು ರಾಜಮೌಳಿಯವ ಮನದಾಳದ ನೇರ ಮಾತು.

ನಿರ್ದೇಶಕ ರಾಜಮೌಳಿಯವರು ನೊಣದ ಪಾತ್ರವೊಂದನ್ನು ಕಲ್ಪಿಸಿಕೊಂಡಿದ್ದಾರೆ, ನಿಜ.ಖಳನಾಯಕ ಏನೆಲ್ಲ ಕಷ್ಟಪಡುತ್ತಾನೆ ಎಂಬುದನ್ನು ಚಿತ್ರಕಥೆಯಲ್ಲಿ ಬರೆದಿದ್ದಾರೆ. ಆದರೆ ನೊಣದ ಪ್ರತಿಕಾರಕ್ಕೆ, ವಿಲನ್ ಪಾತ್ರದ ಅಷ್ಟೂ ಕಲ್ಪನೆಗೆ ಜೀವ ತುಂಬಿದ್ದು ಸಾಕ್ಷಾತ್ ಸುದೀಪ್. ಆ ಜಾಗದಲ್ಲಿ ಬೇರೆ ಯಾರೇ ಇದ್ದರೂ, ನೊಣದ ಗ್ರಾಫಿಕ್ಸ್ ಕಾರ್ಟೂನ್ ಚಮತ್ಕಾರದಂತೆ ಗೋಚರಿಸುತ್ತಿತ್ತು ಎಂಬುದು ಈಗ ಎಲ್ಲರ ಅಭಿಪ್ರಾಯ.

ಯಾರೇ ಏನೇ ಹೇಳಲಿ, ಸುದೀಪ್ ಚಿತ್ರದ ಯಶಸ್ಸಿನ ಸಂಪೂರ್ಣ ಕ್ರೆಡಿಟ್ಟನ್ನು ನಿರ್ದೇಶಕ ರಾಜಮೌಳಿಗೇ ನೀಡಿದ್ದಾರೆ. ಆದರೆ ರಾಜಮೌಳಿಯವರು ಸುದೀಪ್ ಇಲ್ಲದಿದ್ದರೆ ಈಗ ಚಿತ್ರವೇ ತೆರೆಗೆ ಬರುತ್ತಿರಲಿಲ್ಲ ಎಂದಿದ್ದಾರೆ. 'ಈ ಇಬ್ಬರೂ ಒಂದಾಗದಿದ್ದರೆ ಈ ಚಿತ್ರವೂ ಬರುತ್ತಿರಲಿಲ್ಲ, ಈ ಪರಿ ಯಶಸ್ಸೂ ದೊರಕುತ್ತಿರಲಿಲ್ಲ. ಸುದೀಪ್ ಹಾಗೂ ರಾಜಮೌಳಿ ಎಂಬ ಇಬ್ಬರು ಕನ್ನಡಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸಲು ಸಾಧ್ಯವಾಗುತ್ತಿರಲಿಲ್ಲ' ಎಂಬುದೀಗ ಎಲ್ಲರ ಅನಿಸಿಕೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/kichcha-sudeep-eega-ss-rajamouli-talk-success-066623.html">« Previous</a>
English summary
Telugu movie Eega is screening successfully all over the world now. In this time. both Kichcha Sudeep and director SS Rajamouli are telling exchanging the credit of Success to each other. It is the Greatness, attracting the everybody. &#13; &#13;
Please Wait while comments are loading...