twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಚಿತ್ರಕ್ಕೆ ಪರಭಾಷಾ ಚಿತ್ರಗಳಿಂದ ಭಾರೀ ಪೈಪೋಟಿ

    |

    ರಾಜ್ಯದಲ್ಲಿ ಪರಭಾಷಾ ಚಿತ್ರಗಳಿಗೂ ಉತ್ತಮ ಮಾರುಕಟ್ಟೆ ಇರುವುದರಿಂದ ನಮ್ಮ ಚಿತ್ರಗಳು ಇತರ ಭಾಷೆಗಳ ಜೊತೆ ಗುದ್ದಾಡ ಬೇಕಾದ ಅನಿವಾರ್ಯತೆ ಇರುವುದು ವಿಪರ್ಯಾಸ. ಬಹುನಿರೀಕ್ಷಿತ ಚಿತ್ರಕ್ಕೇ ಈ ರೀತಿ ಆದರೆ ಇನ್ನು ಇತರ ಕನ್ನಡ ಚಿತ್ರಗಳಿಗೆ ಕನ್ನಡ ನಾಡಿನಲ್ಲಿ ಹೇಗಿರ ಬೇಡ.

    ಈ ವರ್ಷದ ಬಹು ನಿರೀಕ್ಷಿತ ಪುನೀತ್ ರಾಜಕುಮಾರ್, ಎರಿಕಾ ಫೆರ್ನಾಂಡಿಸ್ ಪ್ರಮುಖ ಭೂಮಿಕೆಯಲ್ಲಿರುವ, ಜಯಂತ್ ಪರಾಂಜೆ ನಿರ್ದೇಶನದ ಪ್ರೇಮ ಕಾವ್ಯ 'ನಿನ್ನಿಂದಲೇ' ಚಿತ್ರ ಬಿಡುಗಡೆಗೆ ಸಜ್ಜಾಗಿ ನಿಂತಿದೆ. (ನಿನ್ನಿಂದಲೇ ಚಿತ್ರದ ಗ್ಯಾಲರಿ)

    ಹತ್ತು ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಚಿತ್ರ ಈ ವಾರವೇ ಬಿಡುಗಡೆಯಾಗ ಬೇಕಿತ್ತು. ಆದರೆ ಕಾರಣಾಂತರದಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಡಿಸೆಂಬರ್ 2012ರಂದು ಪುನೀತ್ ಅಭಿನಯದ ಯಾರೇ ಕೂಗಾಡಲಿ ಚಿತ್ರ ಬಿಡುಗಡೆಯಾಗಿದ್ದೇ ಕೊನೆ. ಆ ನಂತರ ಪುನೀತ್ ಜನಪ್ರಿಯ ಟಿವಿ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು.

    ಹಾಗಾಗಿ ನಿನ್ನಿಂದಲೇ ಚಿತ್ರದ ಮೇಲೆ ಅಭಿಮಾನಿಗಳು ನಿರೀಕ್ಷೆಯ ಮಹಾಪೂರವನ್ನೇ ಇಟ್ಟುಕೊಂಡಿದ್ದಾರೆ. ಪುನೀತ್ ಚಿತ್ರಗಳು ಬಾಕ್ಸಾಫೀಸಿನಲ್ಲಿ ಸೋತ ಉದಾಹರಣೆ ಎಲ್ಲೋ ಒಂದೋ ಎರಡು. ನಿನ್ನಿಂದಲೇ ಚಿತ್ರದ ಬಗ್ಗೆ ಈಗಾಗಲೇ ಉತ್ತಮ ಮಾತು ಕೇಳಿ ಬರುತ್ತಿದೆ. ಚಿತ್ರದ ಕಥೆ ಕೇಳಿ ಇಂಪ್ರೆಸ್ ಆಗಿರುವ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು 'ನಿನ್ನಿಂದಲೇ' ಚಿತ್ರದ ತೆಲುಗು ಅವತರಿಣಿಕೆಯಲ್ಲಿ ನಟಿಸಲಿದ್ದಾರೆನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

    ನಿನ್ನಿಂದಲೇ ಚಿತ್ರದ ಆಡಿಯೋಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ಚಿತ್ರದ ಎರಡು ಹಾಡುಗಳಂತೂ ಸೂಪರ್ ಹಿಟ್ ಆಗಿದೆ. ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಕೈ ಡೈವಿಂಗ್ ಸಾಹಸ ದೃಶ್ಯದಲ್ಲಿ ತಮ್ಮನ್ನು ಪುನೀತ್ ತೊಡಗಿಸಿ ಕೊಂಡಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣ ಅಮೆರಿಕಾದಲ್ಲಿ ನಡೆದಿದ್ದು, ಚಿತ್ರವನ್ನು lavish ಆಗಿ ತೆರೆಗೆ ತರುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಜಯಂತ್ ಪರಾಂಜೆ. (ಪುನೀತ್ ಅಭಿನಯದ 'ನಿನ್ನಿಂದಲೇ' ಧ್ವನಿಸುರುಳಿ ವಿಮರ್ಶೆ)

    ಸೋಮವಾರ (ಜ 6) ಸಂಜೆಯ ಮಾಹಿತಿಯ ಪ್ರಕಾರ ನಿನ್ನಿಂದಲೇ ಚಿತ್ರ ಬರುವ ಗುರುವಾರ (ಜ 16) ಬಿಡುಗಡೆಯಾಗುವ ಎಲ್ಲಾ ಲಕ್ಷಣಗಳಿವೆ. ನರ್ತಕಿ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ ಎನ್ನುತ್ತದೆ ಮಾಹಿತಿ.

    ಆದಾಗ್ಯೂ, ಪುನೀತ್ ಚಿತ್ರಕ್ಕೆ ಭಾರೀ ಪೈಪೋಟಿ ನೀಡುತ್ತಿರುವ ಪರಭಾಷಾ ಚಿತ್ರಗಳಾವುವು? ಸ್ಲೈಡಿನಲ್ಲಿ ನೋಡಿ..

    ತಮಿಳು ಚಿತ್ರ ಜಿಲ್ಲಾ

    ತಮಿಳು ಚಿತ್ರ ಜಿಲ್ಲಾ

    ಇಳಯ ದಳಪತಿ ಬಿರುದಾಂಕಿತ ವಿಜಯ್ ಅಭಿನಯದ 'ಜಿಲ್ಲಾ' ಚಿತ್ರ ಈ ವಾರ ಬಿಡುಗಡೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಅಭಿಮಾನಿಗಳನ್ನು ವಿಜಯ್ ಹೊಂದಿದ್ದಾರೆ. ಆರ್ ಟಿ ನೀಸನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್, ಮೋಹನ್ ಲಾಲ್, ಕಾಜಲ್ ಅಗರ್ವಾಲ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ ರಾಜ್ಯದ ಸುಮಾರು 70 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ಮಹೇಶ್ ಬಾಬು ಅಭಿನಯದ 1 ನೇನೊಕ್ಕಡಿನೇ

    ಮಹೇಶ್ ಬಾಬು ಅಭಿನಯದ 1 ನೇನೊಕ್ಕಡಿನೇ

    ಸುಕುಮಾರ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಮಹೇಶ್ ಬಾಬು, ಕೃತಿ ಸಾನನ್, ನಾಸರ್ ಮುಂತಾದವರಿದ್ದಾರೆ. ಈ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ ಈ ಚಿತ್ರ ರಾಜ್ಯದ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

    ಅಜಿತ್ ಅಭಿನಯದ ವೀರಂ

    ಅಜಿತ್ ಅಭಿನಯದ ವೀರಂ

    ಅಜಿತ್, ತಮನ್ನಾ, ವಿದರ್ಥ್, ಬಾಲ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಶಿವ ನಿರ್ದೇಶಿಸಿದ್ದಾರೆ. ಈ ಚಿತ್ರ ಕೂಡಾ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಖ್ಯಾತ ಕನ್ನಡದ ನಿರ್ಮಾಪಕ ಕೆ ಮಂಜು ಚಿತ್ರದ ಡಿಸ್ಟಿಬ್ಯೂಷನ್ ರೈಟ್ಸ್ ಪಡೆದು ಕೊಂಡಿದ್ದು ಈ ಚಿತ್ರ ರಾಜ್ಯದ ಸುಮಾರು 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ರಾಮ್ ಚರಣ್ ತೇಜಾ ಅಭಿನಯದ ಎವಡು

    ರಾಮ್ ಚರಣ್ ತೇಜಾ ಅಭಿನಯದ ಎವಡು

    ಚಿರಂಜೀವಿ ಪುತ್ರ ರಾಮ ಚರಣ್ ಅಭಿನಯದ ಯೆವಡು ಚಿತ್ರ ಇದೇ ಭಾನುವಾರ ಅಂದರೆ ಜನವರಿ 12ರಂದು ಬಿಡುಗಡೆಯಾಗಲಿದೆ. ವಂಶಿ ಪೈದಿಪಲ್ಲಿ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿರುವ ಶೃತಿ ಹಾಸನ್, ಸಾಯಿಕುಮಾರ್, ಸುಬ್ಬರಾಜು, ಅಜಯ್ ಮುಂತಾದವರಿದ್ದಾರೆ. ಈ ಚಿತ್ರ ರಾಜ್ಯದ ಸುಮಾರು 75 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೂ ಕೆ ಮಂಜು ರಾಜ್ಯಕ್ಕೆ ಡಿಸ್ಟ್ರಿಬ್ಯೂಟರ್.

    ಡೆದ್ ಇಸ್ಕಿಯಾ

    ಡೆದ್ ಇಸ್ಕಿಯಾ

    ಅಭಿಷೇಕ್ ಚೌಬೆ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ನಾಶಿರುದ್ದೀನ್ ಶಾ, ಮಾಧುರಿ ದೀಕ್ಷಿತ್, ಅರ್ಷದ್ ವರ್ಶಿ ಮುಂತಾದವರಿದ್ದಾರೆ. ಈ ಚಿತ್ರದ ರಾಜ್ಯದ ಸುಮಾರು ಐವತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    47 ರೋನಿನ್

    47 ರೋನಿನ್

    200 ಮಿಲಿಯನ್ ಬಜೆಟಿನಲ್ಲಿ ನಿರ್ಮಾಣವಾದ ಅದ್ದೂರಿ ಹಾಲಿವುಡ್ ಚಿತ್ರ. ಈ ಚಿತ್ರ ರಾಜ್ಯದ ಸುಮಾರು 40 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    English summary
    Stiff competition ahead for Power Star Puneeth Rajkumar much awaited movie Ninindale. Two movies each in Telugu and Tamil and One each in Hindi and English movie releasing this week.
    Tuesday, January 7, 2014, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X