twitter
    For Quick Alerts
    ALLOW NOTIFICATIONS  
    For Daily Alerts

    ಸಿಲ್ಕ್' ಶೃಂಗಾರಭರಿತ ಸನ್ನಿವೇಶಗಳು, ಏನಿದರ ಹಕೀಕತ್ತು?

    By Rajendra
    |
    <ul id="pagination-digg"><li class="previous"><a href="/news/silk-sakkat-hot-director-trishul-interview-076209.html">« Previous</a>

    4. ಕನ್ನಡೇತರ ತಾರೆ ಜೊತೆ ಚಿತ್ರ ಮಾಡಬೇಕಾದರೆ ಭಾಷಾ ಸಮಸ್ಯೆ ಎದುರಾಗಲಿಲ್ಲವೇ?
    ಎಲ್ಲೂ ನಮಗೆ ಆ ರೀತಿಯ ಸಮಸ್ಯೆ ಉದ್ಭವವಾಗಲಿಲ್ಲ. ನಾಳೆ ಶೂಟಿಂಗ್ ಇದ್ದಾಗ ಇಂದೇ ಹೋಂವರ್ಕ್ ತರಹ ವೀಣಾ ಸಿದ್ಧವಾಗುತ್ತಿದ್ದರು. ಕನ್ನಡದ ಡೈಲಾಗ್ ಗಳನ್ನು ಉರುಹೊಡೆಯುತ್ತಿದ್ದರು. ಈಗ ಕನ್ನಡದಲ್ಲಿ ಹಾಡು ಹೇಳುವಷ್ಟರ ಮಟ್ಟಿಗೆ ಅವರು ಪಕ್ವವಾಗಿದ್ದಾರೆ. ಕನ್ನಡದ ಬಗ್ಗೆ ತುಂಬಾ ಅಭಿಮಾನ ಇರುವ ತಾರೆ. ಚಿತ್ರದಲ್ಲಿ ಒಂದು ಹಾಡನ್ನು ಅವರೇ ಹಾಡಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ಅವರ ಗಂಟಲು ಕೆಟ್ಟಿತ್ತು. ಹಾಗಾಗಿ ಅದು ಸಾಧ್ಯವಾಗಲಿಲ್ಲ.

    5. ಸಿಲ್ಕ್ ಸ್ಮಿತಾ ಅವರಿಗೂ ತಮ್ಮ ಚಿತ್ರಕ್ಕೂ ಸಂಬಂಧ ಇದೆಯೇ?
    ಸಿಲ್ಕ್ ಸ್ಮಿತಾ ಅವರಿಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧಗಳಿಲ್ಲ. ಸಿಲ್ಕ್ ಎಂಬ ಒಂದೇ ಒಂದು ಪದದಲ್ಲಷ್ಟೇ ಸಾಮ್ಯತೆ ಇರುವುದು. ನಮ್ಮ ಚಿತ್ರಕಥೆಗೂ ಸಿಲ್ಕ್ ಸ್ಮಿತಾ ಅವರಿಗೂ ಯಾವುದೇ ತರಹದ ಸಂಬಂಧವಿಲ್ಲ.

    6. ಈ ಚಿತ್ರದಲ್ಲಿ ಏನೆಲ್ಲಾ ವಿಶೇಷಗಳುಂಟು?
    ಕಣ್ಣಲ್ಲಿ ನೀರಾಕಿಸುತ್ತೇನೆ. ಚಿತ್ರದ ಕೊನೆಯಲ್ಲಿ ನಿಮ್ಮ ಕಣ್ಣಂಚಲಿ ನೀರು ಬರಲಿಲ್ಲ ಅಂದ್ರೆ ಕೇಳಿ. ಅಂದ್ರೆ ಆ ಒಂದು ಫೀಲ್ ಕೊಟ್ಟಿದ್ದೇನೆ. ಚಿತ್ರ ನೋಡಿದರೆ ಇದು ನಿಮ್ಮ ಅನುಭವಕ್ಕೆ ಬರುತ್ತದೆ. ಮನರಂಜನೆ ಜೊತೆಗೆ ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ. ಅದಕ್ಕೆ ಉತ್ತರ ಏನು? ಎಂಬ ಪ್ರಶ್ನೆಯನ್ನು ಕಡೆಗೆ ಪ್ರೇಕ್ಷಕ ಮಹಾಪ್ರಭುಗಳಿಗೇ ಬಿಟ್ಟಿದ್ದೇನೆ.

    7. ಶೃಂಗಾರಭರಿತ ಸನ್ನಿವೇಶಗಳು ಹೆಚ್ಚಾಗಿವೆಯಲ್ಲಾ, ಏನಿದರ ಹಕೀಕತ್ತು?
    ಬಹುಶಃ ಹಿಂದಿ ಚಿತ್ರರಂಗದಲ್ಲಿ ಮಾತ್ರ ಈ ರೀತಿಯ ದೃಶ್ಯಗಳನ್ನು ನೋಡಿರಬಹುದು. ಇದನ್ನು ಹೊರತುಪಡಿಸಿದರೆ ನಮ್ಮ ದೇಶದ ಬಹುಭಾಷಾ ಚಿತ್ರರಂಗದಲ್ಲಿ ಬೇರಾರು ಈ ಮಟ್ಟದ ಸಾಹಸಕ್ಕೆ ಕೈಹಾಕಿಲ್ಲ. ನಾವ್ಯಾಕೆ ಮಾಡಬಾರದು ಅನ್ನಿಸಿತು. ಜೊತೆಗೆ ಕಥೆಗೂ ಪೂರಕವಾಗಿರುವ ಕಾರಣ ಈ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇವೆ.

    8. ತಾಂತ್ರಿಕವಾಗಿ ಚಿತ್ರದ ಹೇಗೆ ಮೂಡಿಬಂದಿದೆ?
    ದಿನಕ್ಕೆ ಒಂದು ಸೀನು, ಅರ್ಧ ಸೀನು ಮಾಡಿಕೊಂಡು ಬಂದಿದ್ದೇನೆ. ಚಿತ್ರ ತಾಂತ್ರಿಕವಾಗಿ ಅದ್ಭುತವಾಗಿ ಬಂದಿದೆ. ಚಿತ್ರ ನೋಡಿದ ಮೇಲೆ ಇದು ನಿಮ್ಮ ಅರಿವಿಗೂ ಬರುತ್ತದೆ. ಚಿತ್ರವನ್ನು ನೋಡುತ್ತಿದ್ದರೆ ಕಣ್ಮುಂದೆ ನಡೆದಂತೆ ಭಾಸವಾಗುತ್ತದೆ. ಹೊಸಹೊಸ ವಿಚಾರಗಳನ್ನು ಹೇಳಿದ್ದೇನೆ.

    9. ಈ ಚಿತ್ರ ಬೇರೆ ಭಾಷೆಗಳೂ ಡಬ್ ಆಗುತ್ತಿದೆಯೇ?
    ಬೇರೆ ಭಾಷೆಯವರು ನಮ್ಮನ್ನು ಕೇಳುತ್ತಿದ್ದಾರೆ. ಸದ್ಯಕ್ಕೆ 5 ಭಾಷೆ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಚಿತ್ರ ಮಾಡಲು ಬೇಡಿಕೆ ಬಂದಿದೆ. ತೆಲುಗು, ತಮಿಳಿನಲ್ಲಿ ಕೆಲವೊಂದು ಭಾಗಗಳನ್ನು ರೀ ಶೂಟ್ ಮಾಡುತ್ತೇವೆ. ಸಾಧುಕೋಕಿಲ ಭಾಗದ ಚಿತ್ರೀಕರಣವನ್ನು ಆಯಾ ಭಾಷೆಯ ಅಂದರೆ ತೆಲುಗಿನಲ್ಲಿ ಬ್ರಹ್ಮಾನಂದಂ, ತಮಿಳಿನಲ್ಲಿ ವಡಿವೇಲು ಅವರೊಂದಿಗೆ ಮಾಡುತ್ತಿದ್ದೇವೆ.

    10. ಈ ಚಿತ್ರದಲ್ಲಿ ಮರೆಯಲಾಗದ ಅನುಭವಗಳು, ಘಟನೆಗಳು?
    ಅನೇಕ ಸನ್ನಿವೇಶಗಳು, ಘಟನೆಗಳು ಮರೆಯಲಾಗುವುದಿಲ್ಲ. ಈ ಸಿನಿಮಾ ನೋಡಿದರೆ ನಿಮಗೂ ಅಷ್ಟೇ ಮರೆಯಲಾಗದ ಅನುಭವಗಳು, ಸನ್ನಿವೇಶಗಳು ಎದುರಾಗುತ್ತವೆ. ನಿಜ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇನೆ. ಆ ಸಸ್ಪೆನ್ಸನ್ನು ನಾನು ಈಗಲೇ ಬಿಟ್ಟುಕೊಟ್ಟರೆ ಥ್ರಿಲ್ ಇರುವುದಿಲ್ಲ. ಚಿತ್ರದ ಕ್ಲೈಮ್ಯಾಕ್ಸ್ ನೋಡಿದರೆ ನನಗೇ ಅಲ್ಲ ನಿಮಗೂ ಮರೆಯಲಿಕ್ಕೇ ಆಗಲ್ಲ.

    11. ಸರಿ ಸುಮಾರು ಚಿತ್ರದ ಬಜೆಟ್ ಎಷ್ಟಾಗಿದೆ?
    ಈ ಚಿತ್ರಕ್ಕೆ ರು.6 ಕೋಟಿವರೆಗೂ ಖರ್ಚಾಗಿದೆ. ನಾನು ಈ ಹಿಂದೆ ಬಾಬಾ ಎಂಬ ಸಿನಿಮಾ ಮಾಡಿದ್ದೆ. ಕೇವಲ ರು.40 ಲಕ್ಷದಲ್ಲಿ 20 ದಿನಗಳಲ್ಲಿ ಸಿನಿಮಾ ಮಾಡಿ ಮುಗಿಸಿದ್ದೆ. ಆಗ ನಾನ್ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಈಗ ಈ ಚಿತ್ರ ಮಾಡಬೇಕಾದರೆ ಯಾವುದೇ ಏರ್ ಫೋರ್ಟ್ ನಲ್ಲಿ ನೋಡಿದರೂ ಡರ್ಟಿ ಪಿಕ್ಚರ್ ಡೈರಕ್ಟರ್ ಅಲ್ವಾ ಎಂದು ಜನ ಗುರುತಿಸುತ್ತಿದ್ದಾರೆ. ಇದೆಲ್ಲಾ ಮಾಧ್ಯಮಗಳಿಂದ ಮಾತ್ರ ಸಾಧ್ಯವಾಗಿದೆ. ನಿಜಕ್ಕೂ ನಾನು ಮಾಧ್ಯಮಗಳಿಗೆ ಆಭಾರಿಯಾಗಿದ್ದೇನೆ.

    <ul id="pagination-digg"><li class="previous"><a href="/news/silk-sakkat-hot-director-trishul-interview-076209.html">« Previous</a>

    English summary
    An interview with 'Silk Sakkat Hot' director Trishul. The director shares his thoughts, shooting experience with actress Veena Malik. The film is produced by Venkatappa and stars Veena Malik, making her debut in South India, in the lead role. The supporting cast consists of Akshay, Sana and Srinivasa Murthy.
    Wednesday, July 31, 2013, 18:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X