»   » ಸುದೀಪ್, ಚಿರು 'ವರದನಾಯಕ'ದ ಅಪರೂಪದ ಚಿತ್ರಗಳು

ಸುದೀಪ್, ಚಿರು 'ವರದನಾಯಕ'ದ ಅಪರೂಪದ ಚಿತ್ರಗಳು

Posted by:
Subscribe to Filmibeat Kannada

ಬಹುನಿರೀಕ್ಷೆಯ 'ವರದನಾಯಕ' ಚಿತ್ರವು ಈ ತಿಂಗಳ ಕೊನೆಗೆ ಅಂದರೆ ನವೆಂಬರ್ 30, 2012 ರಂದು ಬಿಡುಗಡೆ ಕಾಣುತ್ತಿದೆ. ಕಿಚ್ಚ ಸುದೀಪ್ ಇರುವ 'ವರದನಾಯಕ' ಪೋಸ್ಟರ್ ಗಳು ಎಲ್ಲಿ ನೋಡಿದರೂ ಕಂಡುಬರುತ್ತಿದೆ. ಪೋಸ್ಟರ್ ನೋಡಿದವರೆಲ್ಲಾ 'ವರದನಾಯಕ' ಚಿತ್ರವು ಸುದೀಪ್ ನಾಯಕತ್ವದ ಚಿತ್ರವೇ ಇರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ ಈ ಚಿತ್ರದ ಪೋಸ್ಟರ್ ಸುದೀಪ್ ಮಯವಾಗಿದೆ.

ಆದರೆ ವಾಸ್ತವದಲ್ಲಿ ಚಿತ್ರದ ನಾಯಕ ಸುದೀಪ್ ಅವರಲ್ಲ, ಚಿರಂಜೀವಿ ಸರ್ಜಾ. ಚಿತ್ರದಲ್ಲಿ ಸುದೀಪ್ ನಾಯಕ ಚಿರು ಅಣ್ಣನ ಪಾತ್ರಧಾರಿ. ಅಯ್ಯಪ್ಪ ಶರ್ಮಾ ನಿರ್ದೇಶನದ ತೆಲುಗಿನ 'ಲಕ್ಷ್ಯಂ' ರಿಮೇಕ್ ಚಿತ್ರವಾಗಿರುವ ಕನ್ನಡದ 'ವರದನಾಯಕ' ನವೆಂಬರ್ 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸುದೀಪ್ ಈ ಚಿತ್ರದಲ್ಲಿ ನಟಿಸಿರುವುದರಂತ ಚಿತ್ರಕ್ಕೆ ಬಿಡುಗಡೆಗೆ ಮೊದಲೇ ಸಾಕಷ್ಟು ಲಾಭವಾಗಿದೆ.

'ವರದನಾಯಕ'ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾರಿಗೆ ನಾಯಕಿಯಾಗಿ ನಿಕೇಶಾ ಪಟೇಲ್ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಹೆಸರಾಂತ ನಟಿ ಸಮೀರಾ ರೆಡ್ಡಿ ನಟಿಸಿದ್ದಾರೆ. ಆದರೆ 'ವರದನಾಯಕ' ಚಿತ್ರಕ್ಕೆ ಸುದೀಪ್ ಹಾಗೂ ಸಮೀರಾ ರೆಡ್ಡಿ ಅವರೇ ಪ್ರಚಾರ ಹಾಗೂ ಬಿಸಿನೆಸ್ ದೃಷ್ಟಿಯಿಂದ ಮುಖ್ಯ ಎಂಬುದು ಸತ್ಯ. ಸುದೀಪ್ ಅವರನ್ನೇ ಪ್ರಚಾರದಲ್ಲಿ ಬಳಸಿಕೊಂಡು ಚಿತ್ರ ತೆರೆಗೆ ಬರುತ್ತಿದೆ.

ವರದನಾಯಕ ಚಿತ್ರದ ಪೋಸ್ಟರ್ ನಲ್ಲಿ ಓನ್ಲಿ ಸುದೀಪ್ ಮಿಂಚಿಂಗ್

ವರದನಾಯಕ ಚಿತ್ರದ ಪೋಸ್ಟರ್ ನಲ್ಲಿ ಓನ್ಲಿ ಸುದೀಪ್ ಮಿಂಚಿಂಗ್

ವರದನಾಯಕ ಚಿತ್ರದ ಪೋಸ್ಟರಿನಲ್ಲಿ ಸುದೀಪ್ ಮಾತ್ರ ಮಿಂಚುತ್ತಿದ್ದಾರೆ. ವಾಸ್ತವದಲ್ಲಿ ಚಿತ್ರದ ನಾಯಕ ಚಿರಂಜೀವಿ ಸರ್ಜಾ.

ವರದನಾಯಕ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅಣ್ಣನಾಗಿ ಸುದೀಪ್

ವರದನಾಯಕ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅಣ್ಣನಾಗಿ ಸುದೀಪ್

ಇದೇ ತಿಂಗಳು 30 ರಂದು (30 ನವೆಂಬರ್ 2012) ಬಿಡುಗಡೆಯಾಗಲಿರುವ ವರದನಾಯಕ ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾ ಅವರಿಗೆ ಅಣ್ಣನಾಗಿ ಸುದೀಪ್ ನಟಿಸಿದ್ದಾರೆ.

ಚಿರಂಜೀವಿಗೆ ನಾಯಕಿಯಾಗಿ ನಿಕೇಶಾ ಪಟೇಲ್ ನಟನೆ

ಚಿರಂಜೀವಿಗೆ ನಾಯಕಿಯಾಗಿ ನಿಕೇಶಾ ಪಟೇಲ್ ನಟನೆ

ಬಿಡುಗಡೆಗೆ ಸಿದ್ಧವಾಗಿರುವ ವರದನಾಯಕ ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ನಿಕೇಶಾ ಪಟೇಲ್ ನಟಿಸಿದ್ದಾರೆ. ಸುದೀಪ್ ಅವರಿಗೆ ನಾಯಕಿಯಾಗಿ ಸಮೀರಾ ರೆಡ್ಡಿ ಕಾಣಿಸಿಕೊಂಡಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಮಿಂಚಿರುವ ಸುದೀಪ್

ಪೊಲೀಸ್ ಅಧಿಕಾರಿಯಾಗಿ ಮಿಂಚಿರುವ ಸುದೀಪ್

ವರದನಾಯಕ ಚಿತ್ರದಲ್ಲಿ ಚಿರು ಅಣ್ಣನಾಗಿ ನಟಿಸಿರುವ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ.

ವರದನಾಯಕ ಮೂಲಕ ಯಶಸ್ಸಿಗೆ ಹಂಬಲಿಸುತ್ತಿರುವ ಚಿರು

ವರದನಾಯಕ ಮೂಲಕ ಯಶಸ್ಸಿಗೆ ಹಂಬಲಿಸುತ್ತಿರುವ ಚಿರು

ಸದ್ಯದಲ್ಲೇ (ನವೆಂಬರ್ 30, 2012) ಬಿಡುಗಡೆಯಾಗಲಿರುವ ವರದನಾಯಕ ಚಿತ್ರದ ಮೂಲಕ ಯಶಸ್ಸಿಗೆ ಹಂಬಲಿಸುತ್ತಿರುವ ನಟ ಚಿರು, ಚಿತ್ರದ ಬಗ್ಗೆ ಭಾರಿ ಭರವಸೆಯಿಟ್ಟಿದ್ದಾರೆ.

ವರದನಾಯಕ ಚಿತ್ರದಲ್ಲಿ ಪೊಲೀಸ್ ಪಾತ್ರಧಾರಿ ಸುದೀಪ್ ಗೆಟಪ್ ನೋಡಿ

ವರದನಾಯಕ ಚಿತ್ರದಲ್ಲಿ ಪೊಲೀಸ್ ಪಾತ್ರಧಾರಿ ಸುದೀಪ್ ಗೆಟಪ್ ನೋಡಿ

ಬರಲಿರುವ ವರದನಾಯಕ ಚಿತ್ರದಲ್ಲಿ ಪೊಲೀಸ್ ಪಾತ್ರಧಾರಿ ಸುದೀಪ್ ಗೆಟಪ್ ಇಲ್ಲಿದೆ, ನೋಡಿ...

ವರದನಾಯಕ ಚಿತ್ರವು ಚಿರುಗೆ ಸ್ಟಾರ್ ಪಟ್ಟ ತಂದುಕೊಡಬಹುದೇ?

ವರದನಾಯಕ ಚಿತ್ರವು ಚಿರುಗೆ ಸ್ಟಾರ್ ಪಟ್ಟ ತಂದುಕೊಡಬಹುದೇ?

ಬರಲಿರುವ ವರದನಾಯಕ ಚಿತ್ರವು ಚಿರಂಜೀವಿ ಸರ್ಜಾಗೆ ಸ್ಟಾರ್ ಪಟ್ಟವನ್ನು ತಂದುಕೊಡಬಹುದೇ ಎಂಬುದು ಕೋಟಿ ಕೋಟಿ ಸಿನಿಪ್ರೇಕ್ಷಕರ ಪ್ರಶ್ನೆ?!

ಸುದೀಪ್ ಮೂಲಕ ಚಿರು ಗೆದ್ದರೆ ಹೊಸ ಇತಿಹಾಸ!

ಸುದೀಪ್ ಮೂಲಕ ಚಿರು ಗೆದ್ದರೆ ಹೊಸ ಇತಿಹಾಸ!

ಕಿಚ್ಚ ಸುದೀಪ್ ಮೂಲಕ 'ವರದನಾಯಕ' ಚಿತ್ರ ಗೆದ್ದರೆ ನಟ ಚಿರಂಜೀವಿ ಸರ್ಜಾಗೆ ಹೊಸ ಲೈಫ್ ಸಿಕ್ಕಿ ಹೊಸ ನೂತನ ಇತಿಹಾಸ ಸೃಷ್ಟಿಯಾಗಲಿದೆ.

English summary
Kannada Movie Varadanayaka to release on this month end, 30th November 2012. Kichcha Sudeep acted in an important role at this Chranjeevi Sarja and Nikesha Patel lead movie 'Varadanayaka'. Here are some Pictures to see... Kannada Movie Varadanayaka, Kichcha Sudeep and Chranjeevi Sarja, Varadanayaka Movie Pictures, ಕನ್ನಡ ಚಿತ್ರ ವರದನಾಯಕ, ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಸರ್ಜಾ, ವರದನಾಯಕ ಚಿತ್ರದ ಫೋಟೋಗಳು
Please Wait while comments are loading...

Kannada Photos

Go to : More Photos